Skip to main content

Posts

Showing posts with the label Part 2 Gunaga and Jainism

4131.ಭಾಗ_2ಜೈನ_ಗುಣಗ_ಸಮೂದಾಯ_ಸಂಪೂರ್ಣ_ಸಸ್ಯಹಾರಿಗಳು ...ಕೇವಲ_5_6_ಸಾವಿರ_ಜನಸಂಖ್ಯೆಯಇವರ_ಬಗ್ಗೆ_ನಿಮಗೆ_ಗೊತ್ತಾ? .

ಭಾಗ_2 ಜೈನ_ಗುಣಗ_ಸಮೂದಾಯ_ಸಂಪೂರ್ಣ_ಸಸ್ಯಹಾರಿಗಳು ... ಕೇವಲ_5_6_ಸಾವಿರ_ಜನಸಂಖ್ಯೆಯ ಇವರ_ಬಗ್ಗೆ_ನಿಮಗೆ_ಗೊತ್ತಾ? .  ನನ್ನ ಲೇಖನ #ಜೈನ_ಗುಣಗರ ಬಗ್ಗೆ ಮಾತ್ರ ಸೀಮಿತವಾಗಿದೆ, ಈ ಬಾಗದಲ್ಲಿ ಜೈನ ಗುಣಗರಲ್ಲದೆ ಬೇರೆ ಗುಣಗರೂ ಇದ್ದಾರೆ.   ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಣಗಾ/ಗುನಗಾ ಎಂಬುದರಲ್ಲಿ ಜೈನ ಗುಣಗಾ, ಕುಂಬಾರ ಗುಣಗಾ ಮತ್ತು ಉಪನಾಮ ಮಾತ್ರ ಗುಣಗ ಎಂಬುವ ಬೇರೆ ಬೇರೆ ಸಮೂದಾಯವಿದೆ.   ನಾನು ಬರೆದಿರುವ ಇನ್ನೂ ಪ್ರಕಟ ಆಗದಿರುವ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿಯ ದಾಖಲಾಗದ ಇತಿಹಾಸ ಎಂಬ ಪುಸ್ತಕದಲ್ಲಿ ಗುಣಗ ಸಮುದಾಯದ ಬಗ್ಗೆ ಕೆಲವು ಪುಟಗಳಿದೆ.    #ವಿಷ್ಣು_ದಾಸ_ಗುಣಗಾ ಅನ್ನುವವರು ನನ್ನ ಹಿಂದಿನ ರಾಣಿ ಚೆನ್ನ ಬೈರಾದೇವಿ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಗುಣಗಾ ಸಮುದಾಯದ ಬಗ್ಗೆ ಮಾಹಿತಿ ಕೇಳಿದ್ದರಿಂದ ನನ್ನ ಪುಸ್ತಕದ ಪೂರ್ಣ ಬರಹ ಎರೆಡು ಭಾಗವಾಗಿ ಇಲ್ಲಿ ಪೋಸ್ಟ್ ಮಾಡಿದ್ದೇನೆ.   ಬ್ರಾಹ್ಮಣ - ಜೈನ ಮತ್ತು ಲಿಂಗಾಯಿತರು ಸಸ್ಯಹಾರಿಗಳು ಅಂತ ನಮಗೆಲ್ಲಾ ಗೊತ್ತು ಆದರೆ ಕುಮಟಾ-ಅಂಕೋಲ ಭಾಗದಲ್ಲಿನ ಗುಣಗ ಎಂಬ ಸಣ್ಣ ಸಮೂದಾಯ ಸಂಪೂರ್ಣ ಸಸ್ಯಹಾರಿಗಳು ಇವರು ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದಾರೆ. #ಮುಂದುವರಿದ_ಭಾಗ.... ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಚೆನ್ನಭೈರಾದೇವಿಯ ಸುದೀರ್ಘ ಆಡಳಿತದ ಅವಧಿಯ 16ನೇ ಶತಮಾನದಲ್ಲಿ ಗುಣಗ ಸಮುದಾಯದ ಕೊಡುಗೆಯನ್ನು ಮುಖ್ಯವ...