Skip to main content

Posts

Showing posts with the label History of Anandapuram part 16.

Blog number 1521.ಆನಂದಪುರಂ ಇತಿಹಾಸ ಭಾಗ 16.

#ಆನಂದಪುರಂ_ಇತಿಹಾಸ_ಭಾಗ_16. #ಆನಂದಪುರಂ_ಬೋಜರಾಜ_ಅಯ್ಯಂಗಾರ್_ಮಾಸ್ತರ್_ಅತ್ಯಂತ_ಜನಪ್ರಿಯ_ಮತ್ತು_ಗೌರವಾನ್ವಿತ_ವ್ಯಕ್ತಿ. #ಇವರ_ಅಜ್ಜ_ಶ್ರೀನಿವಾಸಅಯ್ಯಂಗಾರರೆ_ಬದರಿನಾರಾಯಣಅಯ್ಯಂಗಾರರ_ಅಜ್ಜ #ಲಕ್ಷ್ಮಿಪತಿಅಯ್ಯಂಗಾರರನ್ನು_ಗೊರೂರಿನಿಂದ_ಕರೆತಂದವರು. #ಭೂಸುದಾರಣೆ_ಕಾನೂನು_ಬಂದಾಗ_ನೂರು_ಎಕರೆ_ಜಮೀನುದಾರರು #ಆದರೆ_ಗೇಣಿದಾರರು_ಅರ್ಜಿ_ಹಾಕದೆ_ಇವರಿಗೆ_ಗೌರವ_ಸಲ್ಲಿಸಿದ_ವಿಶೇಷ_ಘಟನೆ     ಎರೆಡು ವರ್ಷದ ಹಿಂದೆ ಸಹಸ್ರ ಚಂದ್ರ ದರ್ಶನ ಮಾಡಿದ ಬೋಜರಾಜ ಅಯ್ಯಂಗಾರರಿಗೆ ಈಗ 82 ವರ್ಷ ಇರಬಹುದು ಇವತ್ತು ಆನಂದಪುರಂ ಹೋಬಳಿಯಲ್ಲಿ ಎಲ್ಲೇ ಹೋದರು ಇವರಿಗೆ ವಿಶೇಷ ಗೌರವ ಇದೆ ಈ ಭಾಗದಲ್ಲಿ ಪ್ರೌಡ ಶಾಲೆಯಲ್ಲಿ ಇವರಿಂದ ಗಣಿತ ಕಲಿತವರೇ ಎಲ್ಲರು.     ಬದರಿನಾರಾಯಣ ಅಯ್ಯಂಗಾರರ ಆನಂದಪುರಂ ಚರಿತ್ರೆಗೆ ಇವರ ಕುಟುಂಬದ ಕೊಡುಗೆ ಮರೆಯಲಾರದ್ದು.    ಇವರ ಅಜ್ಜ ಶ್ರೀನಿವಾಸಯ್ಯ0ಗಾರರು ಆ ಕಾಲದಲ್ಲಿ ಆನಂದಪುರಂನ ಗುತ್ತಿಗೆದಾರ ವೃತ್ತಿಯ ಶ್ರೀಮಂತರು ಮತ್ತು ಜಮೀನ್ದಾರರು ಇವರು ಆ ಕಾಲದಲ್ಲಿ ಅಥಿ೯ಕವಾಗಿ ಅನುಕೂಲವಿಲ್ಲದ ಲಕ್ಷ್ಮೀಪತಿ ಅಯ್ಯಂಗಾರರನ್ನು ಹಾಸನದ ಗೊರೂರಿನಿಂದ ಆನಂದಪುರಂಗೆ ಕರೆತಂದು ನೆಲೆಸುವಂತೆ ವ್ಯವಸ್ಥೆ ಮಾಡುತ್ತಾರೆ ಆಗ ಲಕ್ಷ್ಮೀಪತಿ ಆಯ್ಯಂಗಾರ್ ಅಣ್ಣ ಸಾಗರದಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಸಣ್ಣ ಉದ್ಯೋಗದಲ್ಲಿ ಇರುತ್ತಾರೆ.   ಲಕ್ಷ್ಮೀಪತಿ ಆಯ್ಯಂಗಾರರ ಪುತ್ರ ರಾಮಕೃಷ್ಣ ಆಯ್...