#ಮಲೆನಾಡು_ಗಿಡ್ದ_ದನದ_ಗಿಣ್ಣು_ತಪ್ಪದೆ_ತಂದು_ಕೊಡುವ_ಆತ್ಮಿಯ_ಮಿತ್ರ_ಶಿವರಾಂ_ಪಾಟೀಲ್ ನಮ್ಮ ಪಕ್ಕದ ಊರಾದ ಆಚಾಪುರದ ಶಿವರಾಂ ಪಾಟೀಲ್ ನಮ್ಮ ಆಪ್ತ ಬಳಗದವರು, ಬೆಂಗಳೂರು, ಮುಂಬೈ, ಪೂನಾ, ಸತಾರ ಮತ್ತು ಗೋವಾದಲ್ಲಿ ಅನೇಕ ವರ್ಷ ವ್ಯವಹಾರ ಮಾಡಿದವರು ಈಗ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ನನ್ನ ವ್ಯವಹಾರದಲ್ಲಿ ಇವರು ಪ್ರಮುಖ ಜವಾಬ್ದಾರಿವಹಿಸುತ್ತಾರೆ. ಇವರು ತಮ್ಮ ನಿತ್ಯ ಹಾಲಿಗಾಗಿ ಮಲೆನಾಡು ಗಿಡ್ದ ದನಗಳನ್ನ ಸಾಕಿದ್ದಾರೆ ಅವು ಕರು ಹಾಕಿದಾಗೆಲ್ಲ ನನಗೆ ಗಿಣ್ಣ ಮಾಡಿ ತಂದು ಕೊಡುತ್ತಾರೆ ಹಾಗೆ ನಿನ್ನೆ ತಂದು ಕೊಟ್ಟ ಗಿಣ್ಣದ ಚಿತ್ರ ತೆಗೆದು ಹಾಕಿದ್ದೇನೆ. ಮಲೆನಾಡು ಗಿಡ್ಡದ ತುಪ್ಪ ಸದ್ಯದಲ್ಲಿ ಅವರಿಂದ ಪಡೆಯಲು ಕಾಯುತ್ತಿದ್ದೇನೆ.