ಸಾಗರದ_ಅಹಮದ್_ಆಲೀ_ಖಾನ್_ಸಾಹೇಬರ_ಮರಿಮಗ
#ಹುಮೈದ್_ಆಲೀ_ಖಾನ್_ಮೊದಲ_ಹುಟ್ಟು_ಹಬ್ಬದ_ಶುಭ_ಹಾರೈಕೆಗಳು.
ಸಾಗರದ ದೀಮಂತ ಜನನಾಯಕರಾಗಿದ್ದ ಜನಾನುರಾಗಿ ನಮ್ಮೆಲ್ಲರ ಪ್ರೀತಿಯ ಆಹಮದ್ ಆಲೀ ಖಾನ್ ಸಾಹೇಬರ ನಾಲ್ಕನೇ ತಲೆ ಮಾರು ಈ ಹುಮೈದ್_ಆಲೀ_ಖಾನ್.
ಖಾನ್ ಸಾಹೇಬರ ದ್ವಿತೀಯ ಪುತ್ರರಾದ #ಮಂಜೂರ್_ಅಲೀ_ಖಾನ್ ಸಾಗರದ ಮಾಜಿ ನಗರ ಸಭಾ ಸದಸ್ಯರಾಗಿದ್ದವರು ಇವರ ಪುತ್ರ #ಮುಬೀನ್_ಅಲೀ_ಖಾನ್ ಟಿಂಬರ್ ಗುತ್ತಿಗೆದಾರರು ಮತ್ತು ಯುವ ರಾಜಕಾರಣಿ, ಇವರ ಪುತ್ರ #ಹುಮೈದ್_ಆಲೀ_ಖಾನ್ ಮೊದಲ ಹುಟ್ಟು ಹಬ್ಬ ಇವತ್ತು ನೆರವೇರಲಿದೆ.
1994-95 ರಲ್ಲಿ ನಾವೆಲ್ಲ ರಾಜಕಾರಣದ ವಿಚಾರವಾಗಿ ಖಾನ್ ಸಾಹೇಬರ ಮನೆಗೆ ಹೋಗುವಾಗ ಮುಬೀನ್ ಆಲೀ ಖಾನ್ ಚಿಕ್ಕ ಮಗು ಗುಂಡು ಗುಂಡಾಗಿದ್ದ ತುಂಟ ಬಾಲಕನಾಗಿ ನೆನಪು.
ಅವರ ಅಜ್ಜನ ಜೊತೆಯ ನನ್ನ ಒಡನಾಟದ ನೆನಪು ಮಾಡಿ ಕೊಂಡು ತಮ್ಮ ಮಗನ ಮೊದಲ ಹುಟ್ಟು ಹಬ್ಬದ ಆಹ್ವಾನ ಪತ್ರಿಕೆ ನೀಡಿದ್ದಾರೆ.
ಅವರ ಕುಟುಂಬದ ಈ ಕಾರ್ಯಕ್ರಮ ಯಶಸ್ವಿ ಆಗಲಿ, ದೇವರು ಖಾನ್ ಸಾಹೇಬರ ಮರಿ ಮಗನಿಗೆ ಆಯುರಾರೋಗ್ಯ ಆಯಸ್ಸು ದಯಪಾಲಿಸಲಿ ಎಂದು ಹಾರೈಸುತ್ತೇನೆ.
#sagar #mubeenalikhan #mansuralikhan #ahmedalikhan #timber
#BirthdayCelebration
Comments
Post a Comment