ದಸರಾ
#ನವರಾತ್ರಿಯ_ಎರಡನೆ_ದಿನ
#ದಿನಾಂಕ_12_ಅಕ್ಟೋಬರ್_2026_ಸೋಮವಾರ.
#ಬ್ರಹ್ಮಚಾರಿಣಿ.
ನವರಾತ್ರಿ ದಸರಾದ ಎರಡನೆಯ ದಿನ ದಿನಾಂಕ 12-ಅಕ್ಟೋಬರ್-2026 ಸೋಮವಾರ.
‘ಬ್ರಹ್ಮ’ ಎಂದರೆ ತಪಸ್ಸು; ತಪಸ್ಸನ್ನು ಆಚರಿಸುವವಳೇ ಬ್ರಹ್ಮಚಾರಿಣಿ.
ಬಿಳಿ ವಸ್ತ್ರ ಧರಿಸಿದ ಈ ತಾಯಿಯ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲವಿರುತ್ತದೆ.
ಈಕೆ ‘ಸ್ವಾಧಿಷ್ಠಾನ ಚಕ್ರ’ದ ಸಂಕೇತ.
ಕಠಿಣ ಪರಿಶ್ರಮ, ತ್ಯಾಗ, ಇಂದ್ರಿಯ ನಿಗ್ರಹ ಮತ್ತು ಸದಾಚಾರವನ್ನು ಬೋಧಿಸುವ ರೂಪವಿದು.
ಏಕಾಗ್ರತೆ ಮತ್ತು ಮನೋನಿಗ್ರಹಕ್ಕಾಗಿ ಈಕೆಯನ್ನು ಪೂಜಿಸಲಾಗುತ್ತದೆ.
#ಬ್ರಹ್ಮಚಾರಿಣಿ_ಹಸಿರು_ಬಣ್ಣ.
ಕಠಿಣ ತಪಸ್ಸನ್ನು ಆಚರಿಸಿದ ಪ್ರಕೃತಿ ಸ್ವರೂಪಿಣಿ,ಹಸಿರು ಬಣ್ಣವು ಪ್ರಕೃತಿ, ಶಾಂತಿ, ನಿರಂತರ ಬೆಳವಣಿಗೆ, ಜೀವಂತಿಕೆ ಮತ್ತು ಭಕ್ತಿಯಲ್ಲಿನ ಸ್ಥಿರತೆಯನ್ನು ಸಂಕೇತಿಸುತ್ತದೆ.
#dasara #mysore #navaratri #greencolor #brahmacharini
Comments
Post a Comment