Blog number 1367. ಕೊರಾನ ವಿರುದ್ಧದ ಹೋರಾಟದಲ್ಲಿ ದೇಶದ ಒಗ್ಗಟ್ಟು ಪ್ರದರ್ಶಿಸಲು ಇಟಲಿ 16 ಮಾರ್ಚ್ 2020 ರಲ್ಲಿ ಕ್ಯಾ೦ಡಲ್ ಬೆಳಗಿಸಿದರು. ಇದೇ ರೀತಿ 5 ಏಪ್ರಿಲ್ 2020 ರಂದು ಭಾರತದಲ್ಲಿ ಪ್ರದಾನಿ ಮೋದಿ ದೇಶದಲ್ಲಿ ಪ್ರತಿ ಮನೆಯಲ್ಲಿ ದೀಪ ಬೆಳಗಿಸಲು ವಿನಂತಿಸಿದ್ದಾರೆ.
#ಕೊರಾನಾ ಲಾಕ್ ಡೌನ್ ಡೈರಿ #ಲೆಟರ್ ನಂಬರ್ - 6 #4- ಏಪ್ರಿಲ್-2020. ಕೊರಾನಾ ವೈರಸ್ ವಿಮೂ೯ಲನೆಗೆ ದೇಶದ ಒಗ್ಗಟ್ಟಿನ ಪ್ರದಶ೯ನಕ್ಕಾಗಿ ಈ ದೀಪ ಬೆಳಗುವ ಕಾಯ೯ಕ್ರಮ. ಇಟಲಿ ದೇಶದಲ್ಲಿ ಮಾಚ್೯ 16 ರ ಬಾನುವಾರ ರಾತ್ರಿ ದೇಶವಾಸಿಗಳು ತಮ್ಮ ತಮ್ಮ ಮನೇಲಿ ವಿದ್ಯುತ್ ದೀಪ ನಂದಿಸಿ ಗೃಹ ಕ್ವಾರಂಟೀನ್ ಮುರಿಯದೇ ಕ್ಯಾoಡಲ್ ಮತ್ತು ಮೊಬೈಲ್ ಟಾಚ್೯ ಬೆಳಗಿ ಕೊರಾನಾ ವೈರಸ್ ವಿರುದ್ಧ ಅವರ ಸಕಾ೯ರದ ಮುಂಜಾಗೃತ ಕ್ರಮದ ಬಗ್ಗೆ ತಮ್ಮ ಒಗ್ಗಟ್ಟು ಪ್ರದಶಿ೯ಸಿದ್ದರು. ಇದರಿಂದ ಪ್ರೇರೇಪಿತ ನಮ್ಮ ದೇಶದ ಪ್ರದಾನ ಮಂತ್ರಿಗಳಾದ ನರೇ೦ದ್ರ ಮೋದಿಯವರು ಭಾರತೀಯರೆಲ್ಲ ಇದೇ ಭಾನುವಾರ ಅಂದರೆ 5 - ಏಪ್ರಿಲ್ -2020ರ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ತಮ್ಮ ಮನೇಯ ದೀಪಗಳನ್ನ ನಂದಿಸಿ ಕ್ಯಾ೦ಡಲ್, ದೀಪ ಅಥವ ಮೊಬೈಲ್ ಟಾಚ್೯ ಬೆಳಗಿಸಲು ವಿನಂತಿಸಿದ್ದಾರೆ ಈ ಮೂಲಕ ಭಾರತೀಯರೆಲ್ಲರ ಒಗ್ಗಟ್ಟಿನ ಶಕ್ತಿ ಪ್ರದಶ೯ನ ಕೊರಾನಾ ವೈರಸ್ ವಿರುದ್ಧ ವ್ಯಕ್ತಪಡಿಸಲು ಕೋರಿದ್ದಾರೆ. ಇದರ ಬಗ್ಗೆ ಅನೇಕ ರೀತಿ ವ್ಯಾಖ್ಯಾನ ಪ್ರಾರಂಭ ಆಗಿದೆ, 9ಕ್ಕೆ ಸಂಖ್ಯಾ ಶಾಸ್ತ್ರದ ಬಗ್ಗೆ ಪ್ರಾರಂಭ ಆಗಿ ರಾಜ್ಯದ ಮಾಜಿ ಮಂತ್ರಿ ಕೊರಾನಾ ವೈರಸ್ ದೀಪದ ಬೆಳಕಿನ ಹತ್ತಿರ ಬಂದು ಸಾಯುತ್ತದೆ ಎನ್ನುವ ತನಕ ಮುಂದುವರಿದಿದೆ. ಪ್ರದಾನ ಮಂತ್ರಿಗಳಿ೦ದ ಹೆಚ್ಚು ವಿಚಾರಗಳನ್ನ ನಿರೀಕ್ಷಿಸಿದವರು ಅವರ ಈ ದೀಪ ಬೆಳಗುವ ಮೂಲಕ ಒಗ್ಗ...