Skip to main content

Posts

Showing posts with the label Tender jackfruit new food trend became famous in the world

Blog number 836, ಇವತ್ತು ಎಳೆ ಹಲಸಿನ ಕಾಯಿಯಿಂದ ಮಾಡಿದ ಬಿರಿಯಾನಿ ಯಾವ ಮಟನ್ ಬಿರಿಯಾನಿಗೂ ಕಡಿಮೆ ಇರಲಿಲ್ಲ.

#ಈಗ_ಹಲಸಿನ_ಕಡಿ_ಸೀಸನ್ . #ಇವತ್ತು_ಹಲಸಿನ_ಕಡಿಯ_ಬಿರಿಯಾನಿ. #ವಿಶ್ವದಾದ್ಯಂತ_ಪ್ರೋಜನ್‌_ಟೆಂಡರ್_ಜಾಕ್_ಪ್ರೊಟ್_ಹೊಸ_ಶಕೆ_ಪ್ರಾರಂಭ_ಆಗಿದೆ. #ಅಮೇಜಾನ್_300_ಗ್ರಾಂ_ಹಲಸಿನ_ಕಡಿ_ಹೋಳು_180_ರೂಪಾಯಿಗೆ_ಮಾರುತ್ತಿದೆ. #ವೀಗನ್_ನವರಿಗೆ_ಮಾಂಸದ_ಪರ್ಯಾಯ.   ನಮ್ಮ ಮನೆ ಹಿತ್ತಿಲಲ್ಲಿ ನಮ್ಮ ತಂದೆ ನೆಟ್ಟಿದ್ದ ಹಲಸಿನ ಮರ ಬುಡದಿಂದಲೇ ಎರೆಡು ಮರವಾಗಿ ಬೆಳೆದಿದೆ, ಇದರ ಎಲೆ ನಿತ್ಯ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ಗೆ ಹಲಸಿನ ಎಲೆ ಕೊಟ್ಟೆ ಕಡುಬಿಗೆ ಬಳಕೆ ಮಾಡುತ್ತೇವೆ, ನಿನ್ನೆ ವಾಕಿಂಗ್ ಮಾಡುವಾಗ ಅದರಲ್ಲಿದ್ದ ಎರೆಡು ಎಳೆ ಹಲಸಿನ ಕಡಿಗಳು ತಂದಿದ್ದೆ.   ಇವತ್ತು ಇದರಿಂದ ಮಾಡಿದ ಬಿರಿಯಾನಿ ಮಾತ್ರ ಸೂಪರ್, ಮಟನ್ ಬಿರಿಯಾನಿ ಮೀರಿಸುವಂತಾ ರುಚಿ, ಸ್ವಾದ ಮತ್ತು ಆರೋಮ ಹಲಸಿನ ಕಡಿಯಲ್ಲಿದೆ.   ಮಾಂಸಹಾರದ ಬಿರಿಯಾನಿ ಮಾಡಿದಂತೆಯೇ ಹಲಸಿನ ಕಡಿ ಕತ್ತರಿಸಿ ಮೊಸರು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಪುಡಿ ಮತ್ತು ಉಪ್ಪಿನೊಂದಿಗೆ ಅರ್ದ ಗಂಟೆ ಮ್ಯಾರಿನೇಟ್ ಮಾಡಿ ನಂತರ ತುಪ್ಪದಲ್ಲಿ ಚೆನ್ನಾಗಿ ರೋಸ್ಟ್ ಆಗಿ ಹುರಿದು ನಂತರ ನಿಮ್ಮದೇ ರೀತಿಯಲ್ಲಿ ಬಿರಿಯಾನಿ ಮಾಡದರೆ ಆಯಿತು ಇದು ಸುಲಭ ಕೂಡ, ಇದರಲ್ಲೇ ದಂ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ಲಕ್ನೋ ಬಿರಿಯಾನಿ, ಸಿಂಪಲ್ ಬಿರಿಯಾನಿ ಎಲ್ಲಾ ಮಾಡಬಹುದು.   ವಿಶ್ವದಾದ್ಯಂತ ವೀಗನ್ (ಪ್ರಾಣಿಜನ್ಯ ಯಾವು...