Skip to main content

Posts

Showing posts with the label Ayanur Manjunath Lucky man in Election politics.

Blog number 1323. ಅಯನೂರು ಮಂಜುನಾಥ್ ಚುನಾವಣಾ ರಾಜಕಾರಣದ ಲಕ್ಕಿ ಸ್ಟಾರ್, ಜನಾಕರ್ಷಕ ವಾಗ್ಮಿ, ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪ.

#ಶಿವಮೊಗ್ಗ_ರಾಜಕಾರಣದಲ್ಲಿನ_ವಿಶಿಷ್ಟ_ವ್ಯಕ್ತಿ. #ಲಕ್ಕಿ_ಸ್ಟಾರ್_ಆಯನೂರು_ಮಂಜುನಾಥ್. #ವಿದಾನಸಬಾ_ಸದಸ್ಯ_ಸಂಸದ_ರಾಜ್ಯಸಭಾ_ವಿದಾನಪರಿಷತ್_ಹೀಗೆ_ಸಾಲು_ಸಾಲು #ಬಂಗಾರಪ್ಪರ_ಸೋಲಿಸಿದ_ಮೊದಲ_ಬಿಜೆಪಿ_ಸಂಸದ #ವಿಜಯಮಲ್ಯರ_ಜನತಾಪಕ್ಷದಲ್ಲಿ_ರಾಜ್ಯಾಧ್ಯಕ್ಷ #ದರ್ಮಸಿಂಗ್_ಮುಖ್ಯಮಂತ್ರಿ_ಆಗಿದ್ದಾಗ_ಕಾಂಗ್ರೇಸ್_ಪಕ್ಷದಿಂದ_ಮದ್ಯಂತರ_ಸಂಸದ_ಚುನಾವಣೆಗೆ_ಸ್ಪರ್ದೆ     #ಶಿವಮೊಗ್ಗ_ಜಿಲ್ಲೆಯಿಂದ_1994ರಲ್ಲಿ_ಯಡೂರಪ್ಪ_ಈಶ್ವರಪ್ಪ_ಆರಗಜ್ಞಾನೇಂದ್ರ_ಜೊತೆ_ಅಯನೂರು_ಶಾಸಕರು #ಅವರೆಲ್ಲರೂ_ಮಂತ್ರಿ_ನಿಗಮಗಳ_ಅಧ್ಯಕ್ಷರಾದರು_ಆದರೆ_ಆಯನೂರರನ್ನು_ಮಂತ್ರಿ_ಮಾಡಲಿಲ್ಲ_ಯಾಕೆ?    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಮುಖಂಡರು, ಬಿಎ-ಎಲ್ ಎಲ್ ಬಿ ಪದವೀದರರು, 80 ರ ದಶಕದಲ್ಲಿ ಕಾರ್ಮಿಕ ಮುಖಂಡರು ಆಗಿದ್ದ ಅಯನೂರು ಮಂಜುನಾಥ್ ರು ಬಿಜೆಪಿಯಿಂದ ಯಾರೂ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮನಸ್ಸು ಮಾಡದ ಕಾಲದಲ್ಲಿ (1994 ರಲ್ಲಿ) ಸ್ಪರ್ಧೆ ಮಾಡಿ ಹೊಸನಗರದ ಸ್ಟಾಮಿ ರಾವ್ ರನ್ನು ಸೋಲಿಸಿ ಶಾಸಕರಾದವರು.    ಆಗ ಶಿವಮೊಗ್ಗ ಜಿಲ್ಲೆಯಲ್ಲಿ ಯಡೂರಪ್ಪ, ಈಶ್ವರಪ್ಪ, ಆರಗ ಜ್ಞಾನೇಂದ್ರರ ಜೊತೆ ಅಯನೂರು ಸೇರಿ ನಾಲ್ಕು ಬಿಜೆಪಿ ಶಾಸಕರು ಇವರೆಲ್ಲರೂ ಮಂತ್ರಿಗಳಾದರೂ ಅಯನೂರು ಮಂಜುನಾಥ್ ಏಕೆ ಮಂತ್ರಿ ಆಗಲಿಲ್ಲ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ.    1998 ರಲ್ಲಿ...