Blog number 1323. ಅಯನೂರು ಮಂಜುನಾಥ್ ಚುನಾವಣಾ ರಾಜಕಾರಣದ ಲಕ್ಕಿ ಸ್ಟಾರ್, ಜನಾಕರ್ಷಕ ವಾಗ್ಮಿ, ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪ.
#ಲಕ್ಕಿ_ಸ್ಟಾರ್_ಆಯನೂರು_ಮಂಜುನಾಥ್.
#ವಿದಾನಸಬಾ_ಸದಸ್ಯ_ಸಂಸದ_ರಾಜ್ಯಸಭಾ_ವಿದಾನಪರಿಷತ್_ಹೀಗೆ_ಸಾಲು_ಸಾಲು
#ಬಂಗಾರಪ್ಪರ_ಸೋಲಿಸಿದ_ಮೊದಲ_ಬಿಜೆಪಿ_ಸಂಸದ
#ವಿಜಯಮಲ್ಯರ_ಜನತಾಪಕ್ಷದಲ್ಲಿ_ರಾಜ್ಯಾಧ್ಯಕ್ಷ
#ದರ್ಮಸಿಂಗ್_ಮುಖ್ಯಮಂತ್ರಿ_ಆಗಿದ್ದಾಗ_ಕಾಂಗ್ರೇಸ್_ಪಕ್ಷದಿಂದ_ಮದ್ಯಂತರ_ಸಂಸದ_ಚುನಾವಣೆಗೆ_ಸ್ಪರ್ದೆ
#ಶಿವಮೊಗ್ಗ_ಜಿಲ್ಲೆಯಿಂದ_1994ರಲ್ಲಿ_ಯಡೂರಪ್ಪ_ಈಶ್ವರಪ್ಪ_ಆರಗಜ್ಞಾನೇಂದ್ರ_ಜೊತೆ_ಅಯನೂರು_ಶಾಸಕರು
#ಅವರೆಲ್ಲರೂ_ಮಂತ್ರಿ_ನಿಗಮಗಳ_ಅಧ್ಯಕ್ಷರಾದರು_ಆದರೆ_ಆಯನೂರರನ್ನು_ಮಂತ್ರಿ_ಮಾಡಲಿಲ್ಲ_ಯಾಕೆ?
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಮುಖಂಡರು, ಬಿಎ-ಎಲ್ ಎಲ್ ಬಿ ಪದವೀದರರು, 80 ರ ದಶಕದಲ್ಲಿ ಕಾರ್ಮಿಕ ಮುಖಂಡರು ಆಗಿದ್ದ ಅಯನೂರು ಮಂಜುನಾಥ್ ರು ಬಿಜೆಪಿಯಿಂದ ಯಾರೂ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮನಸ್ಸು ಮಾಡದ ಕಾಲದಲ್ಲಿ (1994 ರಲ್ಲಿ) ಸ್ಪರ್ಧೆ ಮಾಡಿ ಹೊಸನಗರದ ಸ್ಟಾಮಿ ರಾವ್ ರನ್ನು ಸೋಲಿಸಿ ಶಾಸಕರಾದವರು.
ಆಗ ಶಿವಮೊಗ್ಗ ಜಿಲ್ಲೆಯಲ್ಲಿ ಯಡೂರಪ್ಪ, ಈಶ್ವರಪ್ಪ, ಆರಗ ಜ್ಞಾನೇಂದ್ರರ ಜೊತೆ ಅಯನೂರು ಸೇರಿ ನಾಲ್ಕು ಬಿಜೆಪಿ ಶಾಸಕರು ಇವರೆಲ್ಲರೂ ಮಂತ್ರಿಗಳಾದರೂ ಅಯನೂರು ಮಂಜುನಾಥ್ ಏಕೆ ಮಂತ್ರಿ ಆಗಲಿಲ್ಲ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ.
1998 ರಲ್ಲಿ ಬಂಗಾರಪ್ಪರನ್ನು ಸೋಲಿಸಿ ಲೋಕಸಭಾ ಸದಸ್ಯರಾದರು,ಇವರು ಬಿಜೆಪಿ ಪಕ್ಷದ ಮೊದಲ ಶಿವಮೊಗ್ಗ ಸಂಸದರು.
ನಂತರ ಶಿವಮೊಗ್ಗದ ಬಿಜೆಪಿಯಲ್ಲಿ ಇವರನ್ನು ಕಡೆಗಾಣಿಸಲಾಗುತ್ತಿದೆ ಎಂಬ ಕಾರಣದಿಂದ ದೂರವಾದಾಗ ವಿಜಯ ಮಲ್ಯ ಇವರನ್ನು ರಾಜ್ಯ ಜನತಾ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು ಅಲ್ಲಿ ಇವರಿಗೆ ಸರಿ ಬರದೆ ಕಾಂಗ್ರೇಸ್ ಸೇರಿ ಶಿವಮೊಗ್ಗ ಲೋಕಸಬೆಯ ಮಧ್ಯಂತರ ಚುನಾವಣೆಗೆ ಸ್ವರ್ಧಿಸಿದ್ದರು.
ಪುನಃ ಬಿಜೆಪಿ ಸೇರಿ 2010 ರಿಂದ 2016ರವರೆಗೆ ರಾಜ್ಯಸಭಾ ಸದಸ್ಯರಾದರು, 2018ರಿಂದ ಕರ್ನಾಟಕ ನೈರುತ್ಯ ಪದವೀದರ ಕ್ಷೇತ್ರದಿಂದ ವಿದಾನ ಪರಿಷತ್ ಸದಸ್ಯರಾಗಿದ್ದಾರೆ.
ಸದಾ ಕೈಯಲ್ಲಿ ಉರಿಯುವ ಸಿಗರೇಟು, ಆಗಾಗ್ಗೆ ಕಾಫಿ ಹೀರುತ್ತಾ ಯಾವಾಗಲೂ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಎಲ್ಲರಿಗೂ ಸಿಗುವ ಅಯನೂರು ಮಂಜುನಾಥ್ ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರದ ಹಳ್ಳಿ ಹಳ್ಳಿಗೆ ತಲುಪಿದ ಮೊದಲ ಮತ್ತು ಕೊನೆಯ ಪಾಲಿಮೆ೦ಟ್ ಸದಸ್ಯರೆಂದೇ ಹೆಸರಾದವರು.
ಒಂದು ಸಾದಾ ಬಿಳಿ ಅಂಬಾಸಡರ್ ಕಾರಿನಲ್ಲಿ ಯಾವುದೇ ಪೋಲಿಸ್ ಎಸ್ಕಾರ್ಟ್ ಇಲ್ಲದೆ ತಮ್ಮ ಕ್ಷೇತ್ರ ಸುತ್ತುತ್ತಿದ್ದರು, ಒಮ್ಮೆ ನನ್ನ ಮನೆ ಎದರು ಒ0ದು ಬಿಳಿ ಅಂಬಾಸಡರ್ ಕಾರು ಬಂದು ನಿಂತಿತು ಅದರಿಂದ ಇಳಿದವರು ಸಂಸದ ಆಯನೂರು ಮಂಜುನಾಥ್ ಜೊತೆಗೆ ಪತ್ರಕರ್ತ ಹುಲಿಮನೆ ತಿಮ್ಮಪ್ಪ ನನಗೇ ಆಶ್ಚರ್ಯ.
ಕಾಂಗ್ರೇಸ್ ನಿಂದ ಮಧ್ಯಂತರ ಚುನಾವಣೆಗೆ ನಿಂತಾಗ ನಕ್ಸಲ್ವೆಟರ್ ಮುಂಜಾಗುರತಿಯಿಂದ ಬಾರೀ ಬಂದೋಬಸ್ತಿನಲ್ಲಿ ಮುಖ್ಯಮಂತ್ರಿ ದರ್ಮಸಿಂಗ್ ಜೊತೆ ಇವರ ಚುನಾವಣಾ ಪ್ರಚಾರದ ಕ್ಯಾರ್ವಾನ್ ನನ್ನ ಮನೆ ಎದುರು ಒ0ದು ರಾತ್ರಿ ಹಾದು ಹೋಗುವಾಗ ಮರೆಯದೆ ನನಗೆ ಕೈ ಬೀಸಿ ಹೋಗಿದ್ದರು.
ಬಿಜೆಪಿಯಲ್ಲಿನ ಜಿಲ್ಲಾ ಮುಖಂಡರುಗಳು ಇವರನ್ನು ಮಂತ್ರಿ ಮಾಡಬಹುದಿತ್ತು ಆದರೆ ಉದ್ದೇಶ ಪೂರ್ವಕವಾಗಿ ಇವರನ್ನು ಸೈಡ್ ಕಾರ್ನರ್ ಮಾಡಿದರು ಆದರೆ ಚುನಾವಣೆಯಲ್ಲಿ ಮಾತ್ರ ಇವರ ಜನ ಆಕರ್ಷಕ ಬಾಷಣದಿಂದಾಗಿ ಇವರನ್ನು ತಪ್ಪದೇ ಬಳಸಿಕೊಳ್ಳುತ್ತಾರೆ.
ಇವರು ಸೋಲುತ್ತಾರೆ, ಈ ಕ್ಷೇತ್ರ ಹಾಗಿದೆ ಅನ್ನುವ ಕ್ಷೇತ್ರದಿಂದ ಸ್ಪರ್ದೆಗೆ ಇವರನ್ನು ನಿಲ್ಲಿಸಿದಲ್ಲೆಲ್ಲ ಇವರು ಆಶ್ಚರ್ಯಕರವಾಗಿ ಗೆದ್ದು ಬರುತ್ತಾರಾದ್ದರಿಂದ ಆಯನೂರು ಮಂಜುನಾಥ್ ಲಕ್ಕಿ ಸ್ಟಾರ್ - ಗೆಲ್ಲೋ ಕುದುರೆ ಎಂಬ ಪ್ರಖ್ಯಾತಿ ಪಡೆದಿದ್ದಾರೆ.
ಈಗ 68 ವಷ೯ ದಾಟಿರುವ ಅಯನೂರು ಮಂಜುನಾಥ್ ಬಿಜೆಪಿ ಪಕ್ಷದಲ್ಲಿನ ಆಂತರಿಕ ಹೊಟ್ಟೆ ಕಿಚ್ಚು ಮತ್ತು ವಂಶ ಪಾರಂಪರ್ಯ ರಾಜಕಾರಣ, ಧರ್ಮದ್ವೇಷದ ಜಾತಿ ದ್ವೇಷದ ರಾಜಕಾರಣದಿಂದ ಬೇಸತ್ತಿರಬೇಕು ಈ ಕಾರಣದಿಂದಲೇ ಬಿಜೆಪಿಯಿಂದ ಶಿವಮೊಗ್ಗ ವಿದಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ,ಬಿಜೆಪಿ ಪಕ್ಷ ಇವರ ಆಸೆಗೆ ತಣ್ಣೀರೆರಚಿದರೆ ಅಯನೂರು ಮಂಜುನಾಥ್ ಕಾಂಗ್ರೇಸ್ ಅಥವ ಜೆಡಿಎಸ್ ಪಕ್ಷ ಸೇರುತ್ತಾರೆ ಹಾಗೇನಾದರು ಆದರೆ ..... ಮುಂದೇನು? ಅನ್ನುವ ಚರ್ಚೆಗೆ ನಿನ್ನೆ ಅವರ ಅಭಿಮಾನಿಗಳ ಹೆಸರಲ್ಲಿ ಶಿವಮೊಗ್ಗದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯದ ಪ್ಲೆಕ್ಸ್ ತುಂಬಾ ಪಂಚಿಂಗ್ ಇರುವ ಟ್ರಯಲರ್ ಆಗಿದೆ.
Comments
Post a Comment