ನಾಸಿಕ್ ಕುಂಬ ಮೇಳದಿಂದ ಪ್ರತಿ 12 ವಷ೯ಕ್ಕೆ ಒಮ್ಮೆ ಮOಗಳೂರಿನ ಕದ್ರಿ ಮಠಕ್ಕೆ ನೂರಾರು ಸನ್ಯಾಸಿಗಳು ಪಶ್ಚಿಮ ಘಟ್ಟದ ಮಾಗ೯ದಲ್ಲೇ ನಡೆದು ಬರುವ ಬಾರಾ ಪಂಥಾ ಎಂಬ ಜೂOಡಿಯಾತ್ರೆ, ಇದನ್ನ ಸಾವಿರಾರು ವಷ೯ದಿಂದ ನಡೆಸಿಕೊಂಡು ಬರುವ ನಾಥಪ೦ಥದ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನ ವಿವರವಾಗಿ ತಿಳಿಯಲಾಗಿರಲಿಲ್ಲ.
4 ವಷ೯ದ ಹಿಂದೆ ಬಂದ ಬಾರಾ ಪಂಥ ಯಾತ್ರೆ ಸುದ್ದಿ ಹಾಯ್ ಬೆಂಗಳೂರಲ್ಲಿ ಮಾಡಿದ್ದ ಶ್ರOಗೇಶ್ ಈ ಪುಸ್ತಕದ ಬಗ್ಗೆ ತಿಳಿಸಿದ್ದರು ಆದರೆ ಈ ಪುಸ್ತಕ ನನಗೆ ಸಿಕ್ಕಿರಲಿಲ್ಲ ಮೊನ್ನೆ ಶ್ರOಗೇಶ್ ರವರೇ ಹುಡುಕಿ ಖರೀದಿಸಿ ತಂದು ಕೊಟ್ಟಿದ್ದು ಮೊನ್ನೆ ಜನತಾ ಕಪ್ಯೂ೯ನಿಂದ ಎರಡನೇ ದಿನದ ಲಾಕ್ ಡೌನ್ ವರೆಗೆ ಓದಿ ತಿಳಿದುಕೊಳ್ಳಲು ಕಾರಣ ಆಯಿತು.
ನಾಥಪಂಥದ ಆದಿ ಚುOಚನಗಿರಿ ಬಾರಾ ಪಂಥದ ಕೈತಪ್ಪಿದ ಅಪರೂಪದ ದಾಖಲೆ ಸಹಿತ ವಿವರವಾದ ಮಾಹಿತಿ ಈ ಪುಸ್ತಕದಲ್ಲಿ ಇದೆ.
ಕೃಷಿಕರ, ಕುರುಬರ, ನೇಕಾರರ ಮತ್ತು ಮೀನುಗಾರರೆಲ್ಲರಿಗೂ ನಾಥಪಂತದ ಮಚೆ೦ದ್ರ ನಾಥರು ಗೋರಕನಾಥರು ಅಧಿಪತಿಗಳು ಆದರೆ ಅದೆಲ್ಲದರ ಮಹತ್ವ ಇತಿಹಾಸ ಆಯಾ ಜನಾ೦ಗದ ಅವರಿಗೇ ಮರೆತು ಹೋಗಿದೆ.
ಬಾರಾ ಪಂಥದ ಕೇಂದ್ರ ಉತ್ತರ ಪ್ರದೇಶದ ಗೋರಕ್ ಪುರ ಅಲ್ಲಿನ ಮಹಾಂತರೇ ಇದರ ಅಧ್ಯಕ್ಷರು ಅವರು ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು.
12 ವಷ೯ಕ್ಕೆ ಬರುವ ಬಾರಾ ಪಂಥ ಯಾತ್ರೆ ಎಲ್ಲಿ೦ದ ಪ್ರಾರಂಭ ಆಗಿ ಎಲ್ಲೆಲ್ಲಿ ತಂಗುತ್ತದೆ ಮತ್ತು ಎಲ್ಲಿಗೆ ತಲುಪುತ್ತದೆ ಅಲ್ಲೆಲ್ಲ ರಹಮತ್ ತರಿಕೆರೆ ಸ್ವತಃ ಬೇಟಿ ಮಾಡಿದ್ದಾರೆ, ಅನೇಕರನ್ನ ಸಂದಶಿ೯ಸಿದ್ದಾರೆ,325 ಪುಟದ ಈ ಪುಸ್ತಕ ನಾಥಪಂತದ ಆಸಕ್ತರಿಗೆ ಮತ್ತು ಕನಾ೯ಟಕ ರಾಜ್ಯದಲ್ಲಿ ನಾಥಪಂಥದ ಬಗ್ಗೆ ತಿಳಿದುಕೊಳ್ಳಬೇಕಾದವರಿಗೆ ಆತ್ಯುತ್ತಮ ಮಾಗ೯ದಶ೯ನ ನೀಡುತ್ತದೆ.
Comments
Post a Comment