#ಪ್ರೌಡಾವಸ್ಥೆಗೆ_ತಲುಪಿರುವ_ಶಂಭೂ_ನನ್ನ_ಕುಚಿ೯ಯಲ್ಲಿ.
#ನಾನು_ಮನೆಗೆ_ಬಂದಾಗೆಲ್ಲಾ_ಕುಣಿದು_ಕುಪ್ಪಳಿಸಿ_ನನ್ನ_ಅಪ್ಪಿಕೊಳ್ಳುವವ
#ಇವತ್ತು_ಮಾತ್ರ_ನನ್ನ_ಕುರ್ಚಿ_ಅವನೇ_ಅಕ್ರಮಿಸಿದ್ದಾನೆ.
https://youtube.com/shorts/iEACK3DkQA0?feature=share
ನಮ್ಮ ಮನೆಯ ರಾಟ್ ವೀಲರ್ ಶಂಭೂನನ್ನ ನಾನು ಪ್ರೀತಿಯಿಂದ ಕರೆಯುವುದು ಶಂಭೂರಾಮ ಎಂದೇ.
ಶಂಭೂ ಬೇರಾವ ಸ್ಥಳಿಯ ಶ್ವಾನಗಳಿಗಿಂತ ಹೆಚ್ಚು ಪದಗಳು ಅಂದರೆ 125 ಪದಗಳು ಅರ್ಥವಾಗುತ್ತದಂತೆ.
ಇವನಿಗೆ ನನ್ನ ಮಗ ಸಂಪೂರ್ಣವಾಗಿ ಕನ್ನಡದಲ್ಲೇ ತರಬೇತಿ ನೀಡಿ ಶುದ್ಧ ಕನ್ನಡಿಗನಾಗಿ ಮಾಡಿದ್ದಾನೆ ಎರೆಡು ತಿಂಗಳಿಂದ 8 ತಿಂಗಳವರೆಗೆ ಮಾತ್ರ ಹೇಳಿದ್ದೆಲ್ಲ ಕೇಳುವ ಮತ್ತು ಕಲಿಯುವ ಇವುಗಳ ಸ್ವಭಾವ 8 ತಿಂಗಳು ನಂತರ ಏನು ಮಾಡಿದರೂ ಕಲಿಯುವುದಿಲ್ಲ.
ಕಲಿಸುವಾಗ ಲಂಚ ನೀಡಿಯೇ ಕಲಿಸಬೇಕು, ಜಾಣ ಶ೦ಭೂ ಅಂತ ಸಣ್ಣ ಬಿಸ್ಕಿಟ್ ಗಳು ನೀಡಿ ಕಲಿಸಿದ್ದರಿಂದ ಈಗ ಜಾಣ ಶಂಭೂ ಅಂದರೆ ಸಂಭ್ರಮಿಸುತ್ತಾನೆ.
ಇವತ್ತು ಮಾತ್ರ ನಾನು ಮನೆಗೆ ಬಂದಾಗ ನನ್ನ ಸ್ವಾಗತಿಸಿದವನು ನನ್ನ ಕುರ್ಚಿಯೇ ಅಕ್ರಮಿಸಿದ್ದಾನೆ..ಏನು ಹೇಳಿದರೂ ಕೇಳಲಿಲ್ಲ.
ನಂತರ ನಾನು ಸುಮ್ಮನೆ ನನ್ನ ರೂಮಿಗೆ ಹೋದಾಗ ಹಿಂದಿನಿಂದ ಬಂದು ನನಗೆ ಸಮದಾನ ಮಾಡುವ ಈ ಮೂಖ ಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲಾದೀತಾ?
Comments
Post a Comment