https://youtu.be/gKXffl5h1Ig
2016ರಲ್ಲಿ ಇಲ್ಲಿಗೆ ಹೋಗಿದ್ದೆ ಆಗ ಮನಸಲ್ಲಿ 50 kg ಡೈಮಂಡ್ ಸಕ್ಕರೆ ಅಪಿ೯ಸುವುದಾಗಿ ಒಂದು ತೀಮಾ೯ನ ಮಾಡಿದ್ದೆ ಅದರಂತೆ ನಿನ್ನೆ ಸಕ್ಕರೆ ಸಮಪಿ೯ಸುವ ಕೆಲಸ ಪೂರೈಸಿದೆ.
20O3ರಲ್ಲಿ ನಾನು ಮಾಜಿ ಸಂಸದ ಐ.ಎಮ್.ಜಯರಾಂ ಶೆಟ್ಟರ ಜೊತೆ ಅನೇಕ ಬಾರಿ ಕನಕಪುರ ರಸ್ತೆಯ ಹರಿಕೋಡೆಯವರ ಲಿಕ್ಕರ್ ಪ್ಯಾಕ್ಟರಿ ಕಛೇರಿಗೆ ಹೋಗುತ್ತಿದ್ದೆ, ರಾಜ್ಯದಲ್ಲಿ ಜಾಜ್೯ರ ಸಮತಾ ಪಕ್ಷದ ಜೊತೆ ಕೋಡೆಯವರು ಸ್ಥಾಪಿಸಿದ್ದ ಪ್ರಾದೇಶಿಕ ಪಕ್ಷ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರು.
ಆಗ ಹರಿಕೋಡೆಯವರು ನನಗೆ ಶಿಶುನಾಳ ಷರೀಪರ ಬಗ್ಗೆ ಪ್ರಕಟಿಸಿದ್ದ ಪುಸ್ತಕ ನೀಡಿದ್ದರು (ಮಲ್ಲಿಕಾಜು೯ನ ಸಿಂದಗಿ ಬರೆದದ್ದು), ಆಗಲೇ ಕೋಡೆಯವರು ಪರೀಪರ ಮೇಲೆ ತೆಗೆದ ಸಿನಿಮಾ ಕೂಡ ರಾಜ್ಯದಲ್ಲಿ ಪ್ರಸಿದ್ದವಾಗಿತ್ತು.
2004ರಲ್ಲಿ ಸವಣೂರಿಗೆ ಹೋಗುವವ ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯಿಂದ ದಾರಿ ತಪ್ಪಿ ಹುಬ್ಬಳಿ ಹತ್ತಿರ ತಲುಪಿದಾಗ ಅಲ್ಲಿ ಸವಣೂರಿಗೆ ದಾರಿ ಕೇಳಿದಾಗ "ನೀವು ತುಂಬಾ ದೂರ ಬಂದಿದೀರಿ, ಇಲ್ಲೇ ಕುಂದಗೋಳ ಶಿಶುನಾಳದ ಮೇಲೆ ಸವಣೂರಿಗೆ ಹೋಗರಿ" ಅಂದಾಗ ನನಗೆ ಪುನಃ ಶಿಶುನಾಳರ ನೆನಪಾಯಿತು.
ಅವತ್ತು ಜುಲೈ 3 ಶಿಶುನಾಳ ಷರೀಪರ ಜನ್ಮದಿನ, ಸಾವಿರಾರು ಭಕ್ತರು, ಸಿನಿಮಾದವರು, ಕ್ಯಾಸೆಟ್ಗಳಲ್ಲಿ ಹಾಡುವವರು ನೂರಾರು ಮಂದಿ ಸ್ಪದೆ೯ಗೆ ಇಳಿದಂತೆ ಶಿಶುನಾಳರ ಹಾಡುಗಳನ್ನ ವಿವಿದ ರಾಗ, ಸಂಗೀತದಲ್ಲಿ ಗಾನ ಸುದೆ ಹರಿಸಿದ್ದರು.
ಬರುವ ಜುಲೈ 3 (2019ರಲ್ಲಿ) ರಂದು ಶಿಶುನಾಳ ಷರೀಪರ 200ನೇ ಹುಟ್ಟು ಹಬ್ಬ, ಅಲ್ಲಿ ಅವರ ಸ್ಮರಣಾಥ೯ ನಿಮಿ೯ಸಿರುವ ವಿದ್ಯಾಥಿ೯ ನಿಲಯಕ್ಕೆ 50 ನೇ ವಾಷಿ೯ಕೋತ್ಸವದ ಸುವಣ೯ ಮಹೋತ್ಸವದ ಬಗ್ಗೆ ಕರಪತ್ರಿಕೆ ಮತ್ತು ಪೋಸ್ಟರ್ ಗಳನ್ನ ಟ್ರಸ್ಟನವರು ನೀಡಿದ್ದಾರೆ.
Comments
Post a Comment