ಮಲೆನಾಡಿನಲ್ಲಿ ಈ ತಳಿ ನಾಪತ್ತೆ ಆಗಿದೆ, ನಾವೆಲ್ಲ ಚಿಕ್ಕವರಿರುವಾಗ ಮಳೆಗಾಲದ ನಂತರದ ದಿನದಲ್ಲಿ ಬೇಲಿ ಸಾಲಿನಲ್ಲಿ ಗೊಬ್ಬರದ ಗುOಡಿಯಲ್ಲಿ ಈ ಚಿಕ್ಕ ಗೋಲಿಗಾತ್ರದ ಟೋಮೊಟೊ ಯಥೆಚ್ಚವಾಗಿ ಸಿಗುತ್ತಿತ್ತು.
ಅಡುಗೆಯಲ್ಲಿ ಹುಣಸೆ ಹುಳಿಗಾಗಿ ಹುಳಿ ಟೊಮೊಟಾ ಬಳಕೆ ಜಾಸ್ತಿ ಆಗಿ ಈಗ ಹುಳಿ ಟೊಮೊಟಾ ಕೂಡ ಇಲ್ಲ ಆಗಿದ್ದು ಉತ್ತರ ಭಾರತೀಯ ಅಡುಗೆ ಶೈಲಿಯ ಸಿಹಿಯಾದ ಉದ್ದ ಟೊಮೊಟಾ ಮಾರುಕಟ್ಟೆ ಆತಿಕ್ರಮಿಸಿದೆ.
ಇದರ ಮದ್ಯ ಬಾಲ್ಯದಲ್ಲಿನ ಗೋಲಿಗಾತ್ರದ ನೋಡಲು ಚೆರ್ರಿ ಹಣ್ಣಿನಂತೆ ಇರುವುದರಿಂದ ಚೆರ್ರಿ ಟೋಮೊಟಾ ಮರೆತೇ ಹೊಗಿತ್ತು ಇತ್ತಿಚಿಗೆ ಮಗಳು ಬೆಂಗಳೂರಿನ ಬಿಗ್ ಬಜಾರ್ ನಲ್ಲಿ ಇದನ್ನ ಮಾರಲಿಟ್ಟಿದ್ದು ನೋಡಿ ತಂದು ಕೊಟ್ಟಿದ್ದಳು 200 ಗ್ರಾo ಗೆ 49 ರೂಪಾಯಿ ಅಂದರೆ ಕೆಜಿಗೆ ಸುಮಾರು 250 ಇರಬಹುದು!.
ಇವತ್ತು ನಮ್ಮ ಆನಂದಪುರಂ ಹೋಬಳಿಯ ಮಿ೦ಚಿನ ಪತ್ರಕತ೯(ಅವರ ಮಿಂಚಿನಂತ ತಿರುಗಾಟ ನೋಡಿ ಈ ಬಿರುದು) ಉದಯ್ ಸಾಗರ್ ಅವರ ಶುಂಠಿ ಜಮೀನಿನಲ್ಲಿ ನೀರು ಹಾಯಿಸುವಾಗ ಈ ಹಣ್ಣು ಬಿಟ್ಟ ಚೆರ್ರಿ ಟೋಮೊಟ ಚಿತ್ರ FB ಯಲ್ಲಿ Post ಮಾಡಿದ್ದು ನೋಡಿದಾಗ ಬೆಂಗಳೂರಿನ ಬಿಗ್ ಬಜಾರ್ ನ ಈ ಹಣ್ಣಿನ ಫ್ಯಾಕೆಟ್ ಪೋಟೋ ತೆಗೆದದ್ದು ನೆನಪಾಯಿತು.
Comments
Post a Comment