Blog number 1293. ಸಿಸೇರಿಯನ್ ಹೆರಿಗೆಗೆ ಮೊದಲೇ ಜಾತಕ ಬರೆಸಿಡುವ ಅನಿಷ್ಟ ಪದ್ದತಿ ಜಾರಿಯಲ್ಲಿದೆ ದರ್ಮ ಶಾಸ್ತ್ರದಲ್ಲಿ ಇದಕ್ಕೆ ಮಾನ್ಯತೆ ಇದೆಯಾ?
#ದರ್ಮ_ಶಾಸ್ತ್ರಕ್ಕೆ_ವಿರುದ್ದವಾದ_ಈ_ಪದ್ದತಿ
#ಹಣದಾಸೆಯ_ವೈದ್ಯರ_ಜೊತೆ_ಕೈ_ಜೋಡಿಸುತ್ತಿರುವ_ಜೋತಿಷಿಗಳು.
#ನೈಸರ್ಗಿಕ_ಹೆರಿಗೆ_ತಪ್ಪಿಸಿ_ಸಿಜೆರಿಯನ್_ಹೆರಿಗೆಗೆ_ಉತ್ತೇಜಿಸಲು_ಜಾತಕದ_ತಳಕು
#ಇದು_ಮಹಿಳಾ_ಶೋಷಣೆ_ಆದರೂ_ಮೌನಂ_ಸಮ್ಮತಿಯಂತೆ_ಆಚರಣೆಯಲ್ಲಿದೆ.
#ಇವತ್ತು_ಅಂತರಾಷ್ಟ್ರೀಯ_ಮಹಿಳಾದಿನ_ನೆನಪಾಯಿತು
ಪ್ರತಿ ವರ್ಷ ಮಾರ್ಚ್ 8ಕ್ಕೆ ವಿಶ್ವದಾದ್ಯಂತ ಮಹಿಳಾ ದಿನಾಚಾರಣೆಯನ್ನು ವಿಶ್ವ ಸಂಸ್ಥೆ 1977ರಿಂದ ನಿಗದಿ ಮಾಡಿದೆ.
ಮಹಿಳಾ ದಿನಾಚಾರಣೆಗೆ ಕಾರಣ ರಷ್ಯಾ ಮಹಿಳೆಯರ #Bread_and_Peace ಹೋರಾಟ, ಅಮೇರಿಕಾದ ಕಾರ್ಮಿಕ ಹೋರಾಟಗಾರ್ತಿ ಥೆರೇಸಾ ಮೆಲ್ಕೈಲ್ ಅಮೆರಿಕಾದ ಮಹಿಳಾ ಗಾರ್ಮೆಂಟ್ ಕಾರ್ಮಿಕರ ಮೇಲಿನ ದಬ್ಬಾಳಿಕೆ ಖಂಡಿಸಿ ಮಹಿಳಾ ದಿನಾಚಾರಣೆ ನಡೆಸುತ್ತಾರೆ.
1909ರಲ್ಲಿ ಅಮೆರಿಕನ್ ಸಮಾಜವಾದಿ ಪಕ್ಷ ನ್ಯೂಯಾರ್ಕ್ನಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸುತ್ತದೆ.
1917 ರಲ್ಲಿ ಕೆನಡಾ ದೇಶ ಮಹಿಳೆಯರಿಗೆ ಮತದಾನದ ಹಕ್ಕು ದಯಪಾಲಿಸುತ್ತದೆ ಹೀಗೆ ವಿಶ್ವದಾದ್ಯಂತ ಮಹಿಳೆಯರು ಸಮಾನತೆಗಾಗಿ ಅವರ ಹಕ್ಕಿಗಾಗಿ ಹೋರಾಟ ಮಾಡಿದ್ದರಿಂದ ಮಹಿಳೆಯರ ಹಕ್ಕು ರಕ್ಷಿಸಲು ಸಾಧ್ಯವಾಗಿದೆ.
ವಿಶ್ವ ಸಂಸ್ಥೆ 1975 ಮತ್ತು 1977 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಿ ನಂತರ ವಿಶ್ವದಾದ್ಯಂತ ಮಾರ್ಚ್ 8 ರಂದು ಮಹಿಳೆಯರ ಹಕ್ಕು ರಕ್ಷಿಸಲು ಮಹಿಳಾ ದಿನಾಚರಣೆ ಆಚರಣೆಯ ದಿನಾಂಕ ನಿಗದಿ ಮಾಡಿದೆ ಈ ದಿನ ವಿಶ್ವದಾದ್ಯಂತ ನಡೆಯುವ ಮಹಿಳಾ ದಿನಾಚಾರಣೆಯಲ್ಲಿ ಅನೇಕ ಮಹಿಳಾ ಸಮಸ್ಯೆಗಳು, ನಂಬಿಕೆ ಮತ್ತು ಮೂಡನಂಬಿಕೆಯ ಚೌಕಟ್ಟಿನಲ್ಲಿ ಆಚರಣೆಯ ಅನಾಗರೀಕ ಪದ್ದತಿ, ಸರಳ ವಿವಾಹ, ವರದಕ್ಷಿಣೆ, ಮಹಿಳಾ ಮೀಸಲಾತಿ ಇತ್ಯಾದಿ ಬಗ್ಗೆ ಚಚೆ೯ ನಡೆಯುತ್ತದೆ.
ಇಲ್ಲಿ ನನ್ನದೊಂದು ನಿವೇದನೆ ಇದೆ ಇದು ಇತ್ತೀಚಿನ ದಿನದಲ್ಲಿ ಪ್ರಾರಂಭವಾಗಿದ್ದು ಮುಂದೆ ಇದೊಂದು ಗೀಳಾಗಿ ಸವ೯ ಸಾದಾರಣ ಎಂಬಂತೆ ಒಂದು ಪದ್ದತಿ ಆಗುವ ಸಾಧ್ಯತೆ ಇದೆ.
ಇದು ಹೆರಿಗೆ ಮಾಡಿಸಲು ಮಹೂತ೯ ಇಡುವ ಕೆಟ್ಟ ಪದ್ದತಿ ಬಗ್ಗೆ.
ಪುರೋಹಿತರೊಬ್ಬರು ನನ್ನ ಹತ್ತಿರ ಎನೋ ಚಚಿ೯ಸಲು ಬಂದಿದ್ದರು ಅವರಿಗೆ ನಿರಂತರವಾಗಿ ಒಂದು ಕುಟುಂಬದಿಂದ ಕಾಲ್ ಗಳು ಬರುತ್ತಿತ್ತು, ಅವರಿಬ್ಬರ ಸಂಬಾಷಣೆಯಿ೦ದ ತಿಳಿದಿದ್ದು ಆ ಕುಟುಂಬದ ಮಹಿಳೆ ಶಿವಮೊಗ್ಗದ ಪ್ರತಿಷ್ಟಿತ ನಸಿ೯೦ಗ್ ಹೊಂ ಒಂದರಲ್ಲಿ ಹೆರಿಗೆಗಾಗಿ ಸೇರಿಸಿದ್ದಾರೆ, ಅವರ ಕುಟುoಬದವರಿಗೆ ಹುಟ್ಟುವ ಮಗು ಒಳ್ಳೆ ಜಾತಕವ೦ತನಾ (ಳ)ಗಬೇಕು ಹಾಗಾಗಿ ಯಾವ ಸಮಯದಲ್ಲಿ ಹೆರಿಗೆ ಮಾಡಿಸ ಬೇಕೆಂಬ ಕಾಲ ನಿಗದಿಯ ಚಚೆ೯ ಅಂತಿಮವಾಗಿ ವೈದ್ಯರೂ ಪುರೋಹಿತರ ಹತ್ತಿರ ಚಚಿ೯ಸಿ ಡನ್ ಎಂದರು.
ಮುಂದಿನದ್ದು ಪುರೋಹಿತರ ನಿಗದಿತ ಸಮಯದಲ್ಲಿ ಸಿಜೆರಿಯನ್ನ ಶಸ್ತ್ರ ಚಿಕಿತ್ಸೆ, ಜಾತಕ ಬರೆಸುವುದು.
ಪುರೋಹಿತರಿಗೆ ಕೇಳಿದೆ ನೀವು ನೀಡಿದ ಸಲಹೆ ನಿಮಗೆ ಶಾಸ್ತ್ರ ಸಮ್ಮತಿ ಇದೆಯಾ? ಅಂತ ಅವರಿಗೆ ನನ್ನ ಎದುರು ಸಂಬಾಷಣೆ ಮಾಡಿದ್ದು ಅಪಾಯ ಅನ್ನಿಸಿರಬೇಕು " ಏನು ಮಾಡೋದು ಇದು ಈಗ ಕಾಮನ್ ಆಗಿದೆ, ಮಕ್ಕಳ ಜಾತಕ ಸರಿ ಇದ್ದರೆ ಮುಂದೆ ಒಳ್ಳೆದು ಎನ್ನೋ ನಂಬಿಕೆ ಹಾಗಾಗಿ ಮತ್ತೆ ಈ ನಸಿ೯೦ಗ್ ಹೊಂನವರು ಈಗೆಲ್ಲಿ ಹಾಗೆ ಹೆರಿಗೆ ಮಾಡಲು ಬಿಡುತ್ತಾರೆ, ಸಿಜರಿಯನ್ ಮಾಡಿಸದೆ ಬಿಡೊಲ್ಲ " ಅಂತ ವೈದ್ಯರ ಮೇಲೆ ಆಪಾದಿಸಿದರು.
ಇದು ಒಳ್ಳೆಯದಲ್ಲ ಇಂತಹ ಸಲಹೆ ಕೊಡಬೇಡಿ ಅಂದೆ ನಾನು ಕೊಡದಿದ್ದರೆ ನನ್ನಂತ ಬೇರೆ ಪುರೋಹಿತರ ಹತ್ತಿರ ಹೊಗುತ್ತಾರೆ ಸಿಗೋ ಒಂದು ಸಾವಿರ ಯಾಕೆ ಬಿಡಬೇಕ೦ತ ಸಮಥಿ೯ಸಿ ಕೊಂಡರು.
Comments
Post a Comment