Skip to main content

Blog number 1347. ಮದುಮೇಹಿಗಳಿಗೆ ಇನ್ಸುಲಿನ್ ಬೇಕಾ? ಬೇಡವಾ?

#ಇನ್ಸುಲಿನ್_ಬಳಸಲು_ಡಯಾಬಿಟಿಸ್_ರೋಗಿಗಳಲ್ಲಿ_ಹಿಂಜರಿತ_ಸರಿ_ಅಲ್ಲ.( ಟ್ಟೆಪ್-2 ಡಯಾಬಿಟಿಸ್ ನವರಿಗೆ)

#ಸಕ್ಕರೆ_ಶಕ್ತಿಯಾಗಿ_ಪರಿವರ್ತನೆ_ಆಗದೆ_ರಕ್ತದಲ್ಲಿ_ಸೇರುವುದರಿಂದ_ಬಳಸಲಾಗದ_ಸಕ್ಕರೆ_ಮೂತ್ರದಲ್ಲಿ_ಹೊರ
#ಹೋಗುವುದೇ_ಸಕ್ಕರೆ_ಕಾಯಿಲೆ.

#ಭಾರತ_ಹೊರತು_ಪಡಿಸಿ_ಮುಂದುವರಿದ_ದೇಶಗಳು_ಸಕ್ಕರೆ_ಕಾಯಿಲೆ_ಪೀಡಿತರ
#ದೇಹದಲ್ಲಿ_ಕಡಿಮೆ_ಉತ್ಪಾದನೆ_ಆಗುವ_ಇನ್ಸುಲಿನ್_ಇಂಜೆಕ್ಷನ್_ಮೂಲಕ_ನೀಡುವ_ಕ್ರಮ_ಇದೆ.
  
ಬಾರತೀಯ ವೈದ್ಯರು ಕೇವಲ ಗುಳಿಗೆಗಳನ್ನು ಮಾತ್ರ ನೀಡುತ್ತಾರೆ ಮತ್ತು #ನಿಮಗೆ_ಇನ್ಸುಲಿನ್_ನೀಡುವ_ಹಂತ_ಇನ್ನೂ_ಬಂದಿಲ್ಲ ಎನ್ನುವುದು ರೋಗಿಗಳಿಗೆ ಇನ್ಸುಲಿನ್ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಕಾರಣ ಆಗಿದೆ

    ಭಾರತದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಅತಿ ಹೆಚ್ಚು, ಸಣ್ಣ ವಯಸ್ಸಿನವರೂ ಹೆಚ್ಚಿದ್ದಾರೆ ಮತ್ತು 40 ವರ್ಷ ದಾಟುತ್ತಿದ್ದಂತೆ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ.
   ವಿಪರೀತ ಬಾಯಾರಿಕೆ, ತೊಡೆಗಳಲ್ಲಿ ವಿಪರೀತ ನೋವು ಮತ್ತು ಪದೇ ಪದೇ ಮೂತ್ರ ವಿಸಜ೯ನೆಯಿಂದ ಈ ಕಾಯಿಲೆ ಪ್ರಾರಂಬಿಕವಾಗಿ ಗೋಚರಿಸಿ ವಿಪರೀತ ತೂಕ ಇಳಿತವೂ ಆದಾಗಲೇ ವೈದ್ಯರ ಹತ್ತಿರ ಹೋಗುತ್ತೇವೆ.
  ಸಕ್ಕರೆ ಕಾಯಿಲೆ ಬಂತು ಅಂತ ಬಿಕ್ಕಿ ಬಿಕ್ಕಿ ಅತ್ತವರನ್ನೂ ನೋಡಿದ್ದೇನೆ ಅದಕ್ಕೆ ಕಾರಣ ಕೆಲ ತಪ್ಪು ತಿಳುವಳಿಕೆಗಳು.
  ವೈದ್ಯರು ಪ್ರಾರಂಭದಲ್ಲಿ ಗುಳಿಗೆಗಳಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರುತ್ತಾರೆ, ರೋಗಿಗಳು ಆಹಾರ ಕ್ರಮ ನಿಯಂತ್ರಣ ಮತ್ತು ನಿರಂತರ ನಡಿಗೆಗಳಿಂದ ಅದನ್ನು ಮುಂದುವರಿಸಬಹುದಾದರೂ ಅನೇಕರಿಗೆ ಈ ಕಾಯಿಲೆಯ 10 ನೇ ವರ್ಷದ ನಂತರ ನಿಯಂತ್ರಣ ತಪ್ಪುವುದು ಹೆಚ್ಚು.
  ಅವಾಗಲೇ ವೈದ್ಯರು ಇನ್ಸುಲಿನ್ ತೆಗೆದುಕೊಳ್ಳಲು ಶಿಪಾರಸ್ಸು ಮಾಡುತ್ತಾರೆ.

  ಆದರೆ ಇನ್ಸುಲಿನ್ ಸಕ್ಕರೆ ರೋಗದ ಪ್ರಾರಂಭದಲ್ಲೇ ಬಾರತ ಹೊರತು ಪಡಿಸಿ ಹೆಚ್ಚಿನ ದೇಶಗಳಲ್ಲಿ ಬಳಸಲು ವೈದ್ಯರು ಹೇಳುತ್ತಾರೆ ಇದಕ್ಕೆ ಕಾರಣ ಮಾತ್ರೆ ಮಾತ್ರದಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ನಿಯಂತ್ರಣಕ್ಕೆ ಬರುವುದಿಲ್ಲ ಹಾಗಾದಾಗಲೆಲ್ಲ ದೇಹದಲ್ಲಿನ ಕಿಡ್ನಿ ಹೃದಯ ಮುಂತಾದ ಅವಯುವಗಳು ಹೆಚ್ಚಿನ ಡ್ಯಾಮೇಜ್ ಆಗುವ ಪ್ರಮೆಯವೇ ಹೆಚ್ಚು ಹಾಗಾಗದಂತೆ ತಡೆಯಲು ದೇಹಕ್ಕೆ ಬೇಕಾದ ಇನ್ಸುಲಿನ್ ನಾವೇ ಹೊರಗಿನಿಂದ ದೇಹಕ್ಕೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುವುದು ಸರಿಯಾದ ಸುರಕ್ಷಿತ ಮಾಗ೯ ಆದರೆ ಭಾರತದ ವೈದ್ಯರೇ "ಇನ್ಸುಲಿನ್ ತೆಗೆದುಕೊಳ್ಳುವ ಹಂತಕ್ಕೆ ನೀವು ಇನ್ನು ಹೋಗಿಲ್ಲ" ಎಂಬ ವಾಕ್ಯವೇ ಭಾರತೀಯರಿಗೆ ಇನ್ಸುಲಿನ್ ಬಳಕೆಯಿಂದ ದೂರ ಮಾಡಿದೆ ಆದರೆ ಇದು ಅನೇಕ ರೀತಿಯ ಅನಾಹುತಕ್ಕೆ ಕಾರಣ ಆಗಿದೆ.

  ಈಗಿನ ಅದುನಿಕ ಇನ್ಸುಲಿನ್ ಪೆನ್ ಇಂಜೆಕ್ಷನ್ ಮತ್ತು ಅದರಲ್ಲಿನ ಮೈಕ್ರೋ ನೀಡಲ್ ನೋವಿನ ಅನುಭವವೇ ಆಗದೇ ಇನ್ಸುಲಿನ್ ತೆಗೆದುಕೊಳ್ಳುವ ಸುಲಭ ಸರಳ ವ್ಯವಸ್ಥೆ ಆಗಿರುವುದರಿಂದ ಟೈಪ್ - 2 ಡಯಾಬಿಟೀಸ್ ರೋಗಿಗಳು  ವೈದ್ಯರನ್ನು ತಮಗೆ ಇನ್ಸುಲಿನ್ ಕೊಡಲು ಒತ್ತಾಯಿಸ ಬೇಕು ಇದರಿಂದ ದೇಹದ ಅವಯವ ರಕ್ಷಣೆ ಸಾಧ್ಯವಿದೆ.

 #ಶಿವಮೊಗ್ಗದಲ್ಲಿ_ಡಾಕ್ಟರ್_ಪ್ರೀತಂ_ಡಯಾಬಿಟಿಸ್_ತಜ್ಞವೈದ್ಯರಾಗಿದ್ದಾರೆ ಅನೇಕ ಸಕ್ಕರೆ ಕಾಯಿಲೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ನಾನು ಇವರಿಂದ 2006ರಿಂದ  ಚಿಕಿತ್ಸೆ ಪಡೆಯುತ್ತಿದ್ದೇನೆ ಅವರ ಸಂಪಕ೯ ಸೆಲ್ ನಂಬರ್ 9449138546

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...