Skip to main content

Blog number 1334.ಜೋತಿಷ್ಯ ರತ್ನ - ದೈವಜ್ಞ ಡಾ.ನೆ.ಶ್ರೀ. ವಿಶ್ವಪತಿ ಶಾಸ್ತ್ರೀ ವಿಜಯನಗರ ಬೆಂಗಳೂರು ಇವರ ಜೋತಿಷ್ಯ ವಾಣಿ ಪಂಚಾಂಗ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ

#ನೂತನಶಾವ೯ರಿಸಂವತ್ಸರಕ್ಕೆಸ್ವಾಗತಸವ೯ರಿಗೂಯುಗಾದಿಹೊಸವಷ೯ದಶುಭಾಷಯಗಳು
# ಡಾ.ನೆ.ಶ್ರೀ.ವಿಶ್ವಪತಿ ಶಾಸ್ತ್ರಿಗಳು ವಿಜಯನಗರ ಬೆಂಗಳೂರು ಇವರ ಈ ವಷ೯ದ ಶಾವ೯ರಿ ಸಂವತ್ಸರ 2020-2021ರ ಪಂಚಾ೦ಗ ಬಿಡುಗಡೆ ಆಗಿದೆ#
   ನನ್ನ ಗುರುಗಳು, ನಮ್ಮ ಊರಿನಲ್ಲಿ ಶ್ರೀ ವರ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನ ನಿಮಿ೯ಸಲು ಪ್ರೇರೇಕರು ವಾಸ್ತು ಮಾಗ೯ದಶ೯ಕರು, ನನ್ನ ಜೀವನದ ಮಾಗ೯ದಶ೯ಕರು ಆಗಿರುವ ಡಾ. N S ವಿಶ್ವ ಪತಿ ಶಾಸ್ತ್ರಿಗಳು ನಾಳೆ ಅಂದರೆ 25 - ಮಾಚ್೯ - 2020 ರ ಯುಗಾದಿಯಿ೦ದ ಪ್ರಾರಂಭ ಆಗುವ ನೂತನ ಶಾವ೯ರಿ ಸಂವತ್ಸರದ ಪಂಚಾಂಗ ಕಳಿಸಿದ್ದಾರೆ ಅವರ ಜೋತಿಷವಾಣಿ ಪಂಚಾ೦ಗ 1985ರಿಂದ ಪ್ರಕಟ ಆಗುತ್ತಿದೆ.
  ಇವರ ತಂದೆ ಕೂಡ ಮೈಸೂರು ಆಸ್ಥಾನ ಜೊತಿಷಿಗಳಾಗಿದ್ದರು, ಇವರು BEL ನಲ್ಲಿ ಮೊದಲ ಕಂಪ್ಯೂಟರ್ ಇಂಜಿನಿಯರ್ ಆಗಿದ್ದವರು, ಸಾಗರ ತಾಲ್ಲೂಕಿನ ತ್ಯಾಗತಿ೯ಯ ಭೂಮಾಲಿಕರು ಇನಾಂದಾರ್ ಆಗಿದ್ದ ಗುರುಮೂತಿ೯ ರಾಯರ ಕಿರಿ ಅಳಿಯ.
   ದೇವೇಗೌಡರು ಪ್ರದಾನ ಮಂತ್ರಿ ಆಗುತ್ತಾರೆಂದು ಭವಿಷ್ಯ ನುಡಿದವರು ಇವರು, ಡಾ.ರಾಜ್ ಕುಮಾರ್ ರ ಒಡನಾಡಿ ಆಗಿದ್ದವರು ಅವರ ಅಂತಿಮ ಸಮಾದಿ ಸ್ಥಳ ನಿಗದಿ ಮಾಡಿದವರು ಇವರು.
  ಇವರು ಬರೆದ ಪಂಚಾಂಗ ತುಂಬಾ ನಿಕರವಾಗಿರುತ್ತದೆ ಎಂದು ಇವರ ಪಂಚಾ೦ಗ ಓದಿದವರು ಹೇಳುತ್ತಾರೆ.
  ಇವರು ಜಾತಿವಾದಿಗಳಲ್ಲ ನಮ್ಮ ಊರಿನ ದೇವಸ್ಥಾನದಲ್ಲಿ ಭಕ್ತರು ತಯಾರಿಸುವ ಪ್ರಸಾದ ಸ್ವೀಕರಿಸುತ್ತಾರೆ ಅದನ್ನ ನಿರಾಕರಿಸುವ ಉತ್ತಮರಿಗೆ ಅವರು ಬಾಷಣ ಒಂದರಲ್ಲಿ ಪ್ರಶ್ನೆ ಮಾಡಿದ್ದು ನನಗೆ ಇವತ್ತೂ ನೆನಪಿದೆ "ಹೋಟೆಲ್ಲಲ್ಲಿ ಮಸಾಲೆ ದೊಸೆ ತಿಂತಿರಾ! ಬೇಲ್ ಪುರಿ ಮOಡಕ್ಕಿ ತಿಂತಿರಾ!ಇಲ್ಲಿ ನೀವು ಭಕ್ತಿಯಿಂದ ಭಕ್ತರು ಸ್ನಾನ ಮಾಡಿ ಶುದ್ದಿಯಿ೦ದ ಮಾಡಿದ ಅನ್ನವನ್ನ ಜಾತಿ ಕಾರಣದಿಂದ ನಿರಾಕರಿಸುವುದು ಎಷ್ಟು ಸರಿ? ಹೋಟೆಲ್ ಲ್ಲಿ ಅಡುಗೆ ಮಾಡುವವರು ಅಡುಗೆ ಮಾಡಿ ನಂತರ ಸ್ನಾನ ಮಾಡುತ್ತಾರೆ ಗೊತ್ತಾ? ಹಾಗೆ ಇರುವಾಗ ಯಾವುದು ಶುಚಿ?"ಅಂತ.
  ಪಂಚಾಂಗ ಕತ೯ರಾದ ಅವರಿಗೆ ದೇವರು ಆಯುರಾರೋಗ್ಯ, ಆಯುಸ್ಸು ಮತ್ತು  ಯಶಸ್ಸು ದಯಪಾಲಿಸಲಿ ಎಂದು ಪ್ರಾಥಿ೯ಸುತ್ತೇನೆ ಜೊತೆಗೆ ಪೇಸ್ ಬುಕ್ ಗೆಳೆಯರಿಗೆ ನೂತನ ಶಾವ೯ರಿ ಸಂವತ್ಸರದ ಯುಗಾದಿ ಹೊಸ ವಷ೯ದ ಶುಭ ಹಾರೈಕೆ ಹಾರೈಸುತ್ತೇನೆ.
  *ಪಂಚಾoಗ/ ಕೃಷ್ಣಮೂತಿ೯ ಪದ್ದತಿಯ ಜ್ಯೋತಿಷ್ಯವಾಣಿ ಕಂಪ್ಯೂಟರ್ ಜನ್ಮ ಪತ್ರಿಕೆ ಬೇಕಾದವರು ಇವರನ್ನ e-mail:vishwapathi.ns@gmail.com ಅಥವ ಸಂಜೆ 5ರಿಂದ 7ರವರೆಗೆ ಇವರ ಸೆಲ್ ನಂಬರ್ 94480 18711 ಗೆ ಸಂಪಕಿ೯ಸಬಹುದಾಗಿದೆ.

Comments