Blog number 1343. ಕನ್ನಡ ಮೀಡಿಯಂ 24X7 ಚಾನಲ್ ನ ಹೊನ್ನಾಳಿ ಚಂದ್ರಶೇಖರ್ ನನ್ನ ಅತಿಥಿ, ವಿದ್ಯಾರ್ಥಿ ಜೀವನದಿಂದ ಜನಪರ ಹೋರಾಟಗಾರರು, ವಕೀಲರು - ಪತ್ರಕರ್ತರು - ರಂಗಕಮೀಗಳು - ಸಾಹಿತಿಗಳು ಇವರಿಗೆ ಆನಂದಪುರಂನ ನಂಟು.
#ಹೊನ್ನಾಳಿ_ಚಂದ್ರಶೇಖರ್
#ಪತ್ರಿಕಾ_ಅಕಾಡಮಿ_ಪ್ರಶಸ್ತಿ_ವಿಜೇತರು
#ಕನ್ನಡ_ಪ್ರಭ_ಜಿಲ್ಲಾ_ವರದಿಗಾರರಾಗಿದ್ದರು.
#ನಿನ್ನೆ_ನನ್ನ_ಆಫೀಸಿನಲ್ಲಿ.
ಹೊನ್ನಾಳಿ ಚಂದ್ರಶೇಖರ್ ವಿದ್ಯಾರ್ಥಿ ಜೀವನದಿಂದಲೇ ಜನಪರ ಹೋರಾಟಗಾರರಾಗಿದ್ದವರು, ರಂಗಕರ್ಮಿ, ವಕೀಲರು, ಸಾಹಿತಿಗಳು, ಪತ್ರಕರ್ತರು ಈಗ ಇವರದ್ದೇ ಸ್ವಂತದ್ದಾದ ಕನ್ನಡ ಮೀಡಿಯಂ 24X7 ಚಾನೆಲ್ ಮೂಲಕ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಜನ ಈ ಚಾನೆಲ್ ನೋಡುವಂತೆ ಮಾಡಿ ಈಗ ರಾಜ್ಯದಾದ್ಯಂತ ದಿನೇ ದಿನೇ ವೀಕ್ಷಕರನ್ನು ಸೆಳೆಯುತ್ತಿರುವುದು ಮುಂದಿನ ದಿನದಲ್ಲಿ ಶಿವಮೊಗ್ಗ ಚಂದ್ರಶೇಖರ್ ರಾಜ್ಯದ ಪ್ರಮುಖ ಪತ್ರಕರ್ತರ ಸಾಲಿನಲ್ಲಿ ಸೇರಲಿದ್ದಾರೆ.
1995-2000 ಇಸವಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸುವ ಸಂದರ್ಭ ಬಂದಿತ್ತು ಇದಕ್ಕೆ ಪ್ರೇರಣೆ ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘದ ಆಗಿನ ಕ್ರಿಯಾಶೀಲ ಅಧ್ಯಕ್ಷ ಗೆಳೆಯ ಹಾ.ಮೋ. ಬಾಷಾ.
ಆಗೆಲ್ಲ ಯುವಜನ ಮೇಳದಲ್ಲಿ ಖಾಯಂ ತೀರ್ಪುಗಾರರಾಗಿ ಇರುತ್ತಿದ್ದವರ ಮೇಲೆ ಅವರ ತೀರ್ಪಿನ ಮೇಲೆ ಅನುಮಾನಗಳು ಇರುತ್ತಿತ್ತು, ಒಂದು ರೀತಿ ಮ್ಯಾಚ್ ಪಿಕ್ಸಿಂಗ್.
ಇದಕ್ಕೆ ಇತಿಶ್ರೀ ಹಾಡಲು ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬಲ್ಕೀಷ್ ಬಾನು ಮತ್ತು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಕನ್ನಡದಲ್ಲೆ ಮೊದಲ ಐಎಸ್ ಮಾಡಿದ್ದ ಚಲನಚಿತ್ರ ನಟ ಕೆ.ಶಿವರಾಂ ನನಗೆ ಪೂರ್ಣ ಪ್ರಮಾಣದ ಜವಾಬ್ದಾರಿ ನೀಡಿದ್ದರು.
ಆಗ ನಾನು ಆಹ್ವಾನಿಸಿದ ಶಿವಮೊಗ್ಗ ಜಿಲ್ಲಾ ಯುವ ಜನ ಮೇಳದ ತೀರ್ಪುಗಾರರಲ್ಲಿ ಹೊನ್ನಾಳಿ ಚಂದ್ರಶೇಖರ್ ಒಬ್ಬರು ಇವರ ಜೊತೆ ಹೊರಾಟಗಾರ ಈಸೂರು ಲೋಕೆಶ್, ಸಾಗರದ ಹೆಚ್.ಬಿ.ರಾಘವೇಂದ್ರ ಮತ್ತಿತರರು ಇದ್ದರು.
ಆಭಾರಿಯ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಅರ್ಹ ಕಲಾವಿದರಿಗೆ ಪ್ರಶಸ್ತಿಗಳು ದೊರಕಿದ ಮೊದಲ ಯುವ ಜನ ಮೇಳ ಆಗಿತ್ತು ಆದರೆ ದುರಾಸೆಯ ಮ್ಯಾಚ್ ಫಿಕ್ಸಿಂಗ್ ತೀರ್ಪುಗಾರರು ನನ್ನ ವಿರುದ್ದವೇ ದೂರು ನೀಡಿದ್ದರು ಅದರಲ್ಲಿ ಅವರು "ಶಿವಮೊಗ್ಗದ ಕಾನೂನು ಕಾಲೇಜ್ ವಿದ್ಯಾರ್ಥಿಗಳನ್ನು ತೀರ್ಪುಗಾರರಾಗಿ ಮಾಡಲಾಗಿದೆ" ಇದು ಸತ್ಯವೂ ಆಗಿತ್ತು ತೀರ್ಪುಗಾರರು ನಿಸ್ವಾರ್ಥವಾಗಿ ತಮ್ಮ ಕೆಲಸ ನಿರ್ವಹಿಸಿದ್ದರು.
ನಿನ್ನೆ ಹೊನ್ನಾಳಿ ಚಂದ್ರಶೇಖರ್ ತಮ್ಮ ಸುದ್ಧಿ ಚಾನಲ್ ಗಾಗಿ ಸೊರಬ-ಸಾಗರ ಮುಗಿಸಿ ಆನಂದಪುರಂನ ಮತದಾರರ ಸಮೀಕ್ಷೆ ಮಾಡಿ ರಿಪ್ಪನ್ ಪೇಟೆ - ತೀರ್ಥಹಳ್ಳಿ ಮಾರ್ಗವಾಗಿ ಸಾಗುವಾಗ ನನ್ನ ಕಛೇರಿಗೆ ಬಂದಿದ್ದರು.
ಆನಂದಪುರಂ ಮತದಾರರನ್ನು ಅವರು ಸಂದರ್ಶಿಸಿದ ಅವರ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ ನೋಡಿ.
https://youtu.be/eAiIcSdy_MM
ಇವರಿಗೆ ಇರುವ ತಾಳ್ಮೆ ದೊಡ್ಡದು, ಇನ್ನೂ ಒಂದು ವರ್ಷ ಶ್ರಮದ ಕಷ್ಟದ ದಾರಿ ಕ್ರಮಿಸಬೇಕಾದ ದೀರ್ಘವಾದ ಮಾರ್ಗ ಅವರ ಎದುರಿದೆ.
ಹಿಂದಿನ ದಿನಗಳ ನೆನಪು ಮಾಡಿಕೊ೦ಡು ಮತ್ತು ಮುಂದಿನ ಅವರ ಉದ್ಯಮದ ಗುರಿಗಳ ಬಗ್ಗೆ ಚರ್ಚಿಸಿದೆವು.
Comments
Post a Comment