Blog number 1277. ಗೇರುಸೊಪ್ಪೆ ಸಮೀಪದ ಕೆಪ್ಪ ಜೋಗಕ್ಕೆ ಪರಿಸರವಾದಿಗಳು ಖ್ಯಾತ ಪರಿಸರ ಹೋರಾಟಗಾರ್ತಿ ಡಾಕ್ಟರ್ ಕುಸುಮ ಸೊರಬ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಿ ಬಂಗಾರ ಕುಸುಮ ಜಲಪಾತ ಎಂದು ನಾಮಕರಣ ಮಾಡಿದ್ದಾರೆ.
#ಗೇರುಸೊಪ್ಪದಿಂದ_ಹೊನ್ನಾವರದ_ರಾಷ್ಟ್ರೀಯ_ಹೆದ್ದಾರಿಯಲ್ಲಿದೆ.
#ಬಂಗಾರ_ಕುಸುಮ_ಜಲಪಾತ
#ಡಾಕ್ಟರ್_ಕುಸುಮಾಸೊರಬ_ಮತ್ತು_ಬ೦ಗಾರಮಕ್ಕಿ_ಹೆಸರು_ಸೇರಿದೆ
#ಸಿದ್ದಾಪುರದ_ಒಳಭಾಗದ_ಲಂಬಾಪುರ_ಇಟಗಿಯಿಂದ_ಹರಿದು_ಬರುವ_ಹೊಳೆ.
#ಸಾಗರ_ತಾಲ್ಲೂಕಿನ_ಹಂದಿಗೋಡು_ನಿಗೂಡ_ಕಾಯಿಲೆ_ಸಂಶೋದನೆಯಲ್ಲಿ_ಭಾಗವಾಗಿದ್ದರು.
#ಶರಾವತಿ_ನದಿ_ಕಾಡು_ಸಂರಕ್ಷಣೆಗೆ_ಧ್ವನಿಯಾಗಿ_ಜಲಪಾತದ_ಹೆಸರಿಂದ_ಚಿರಸ್ಥಾಯಿ
#ಇದರ_ಮೂಲ_ಹೆಸರು_ಕೆಪ್ಪಜೋಗ_ಚಿಕ್ಕಜಲಪಾತ.
#ಉತ್ತರಕನ್ನಡ_ಜಿಲ್ಲೆಯ_ಹೊನ್ನಾವರ_ತಾಲ್ಲೂಕಿನ_ಗೇರುಸೊಪ್ಪೆ_ಸಮೀಪದ_ಮಾಸ್ತಿಕಾಂಬ_ದೇವಾಲಯ_ಸಮೀಪದಲ್ಲಿದೆ.
ಜೋಗ್ ಜಲಪಾತ ನೋಡಿ ಮಾವಿನಗುಂಡಿ ಜಂಕ್ಷನ್ ನಿಂದ ಹೊನ್ನಾವರದ ಮಾರ್ಗದಲ್ಲಿ ಘಟ್ಟ ಇಳಿದು ಗೇರುಸೊಪ್ಪೆಯಿಂದ ಮುಂದೆ ಸಾಗಿದರೆ ಬಲಬಾಗದಲ್ಲಿ
ಮಾಸ್ತಿಕಾಂಭಾ ದೇವಾಲಯವಿದೆ ಅದರ ಹಿಂಬದಿಯಿಂದ ಗೇರುಸೊಪ್ಪೆ ಡ್ಯಾಂ ನಿರ್ಮಾಣದ ಸಮಯದಲ್ಲಿ ಕಲ್ಲು ಮಣ್ಣು ಸಾಗಿಸಲು ಮಾಡಿದ ಕಚ್ಚಾ ರಸ್ತೆಯಲ್ಲಿ ಒಂದು ಕಿ.ಮಿ ಸಾಗಿದರೆ ಬಂಗಾರ - ಕುಸುಮ ಜಲಪಾದ ಪಾದ ದಶ೯ನವಾಗುತ್ತದೆ.
ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನೇಕ ಕೋನಗಳಿಂದ ಮಳೆಗಾಲದಿಂದ ಜನವರಿ ತಿಂಗಳವರೆಗೆ ಈ ಜಲಪಾತ ದರ್ಶನ ಆಗುತ್ತದೆ.
ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಳಬಾಗದ ಲಂಬಾಪುರ ಮತ್ತು ಇಟಗಿಯ ಹೊಳೆ ಎತ್ತರದ ಗುಡ್ಡದ ಮೇಲಿಂದ ದಟ್ಟ ಅರಣ್ಯದಲ್ಲಿ ಹಂತ ಹಂತವಾಗಿ ಬಿದ್ದು ಚದುರಿ ನಂತರ ಶರಾವತಿ ನದಿಗೆ ಸೇರಿ ಅರಬ್ಬಿ ಸಮುದ್ರ ಸೇರುತ್ತದೆ.
ಇದನ್ನು ಕೆಪ್ಪ ಜೋಗ ಎಂಬ ಹೆಸರಲ್ಲಿ ಮತ್ತು ಚಿಕ್ಕ ಜಲಪಾತ ಎಂದಲೂ ಜನ ಕರೆಯುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಖ್ಯಾತ ಪರಿಸರವಾದಿ ಡಾ.ಕುಸುಮಾ ಸೊರಬ ಅವರ ಹೆಸರು ಮತ್ತು ಸ್ಥಳಿಯ ಬಂಗಾರು ಮಕ್ಕಿ ದೇವಾಲಯದ ಹೆಸರು ಸೇರಿಸಿ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ್ದಾರೆ.
ಭಾರತದ ಅತಿ ಎತ್ತರದ ಜಲಪಾತ ಹಿಮಾಚಲ ಪ್ರದೇಶದ ನೋಹಾಕಾಲಿಕಾ ಕೈ ಜಲಪಾತ ಕೂಡ ವಿದವೆ ತನ್ನ ಪ್ರೀತಿಯ ಮಗಳು ಮಲತಂದೆಯಿಂದ ಹತ್ಯೆ ಆದದ್ದುನ್ನು ಸಹಿಸಲಾರದೆ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುಃಖದ ಕಥೆಯಿಂದ ನೋಹಾ ಕಾಲಿಕಾ ಕೈ ಹೆಸರನ್ನೆ ಆ ಜಲಪಾತಕ್ಕೆ ಇಟ್ಟಿದ್ದಾರೆ.
ಡಾ. ಕುಸುಮಾ ಸೊರಬ ಹೊನ್ನಾವರ ಸಮೀಪದ ಕೆರವಳ್ಳಿಯಲ್ಲಿ 1937 ರಲ್ಲಿ ಜನಿಸಿದವರು ನಂತರ MBBS - MS General Surgen ಮಾಡಿ ಮುಂಬೈನಲ್ಲಿ ಸೇವೆ ಸಲ್ಲಿಸಿ ನಂತರ ತಮ್ಮ ಹುಟ್ಟೂರು ಸಮೀಪದ ಹೊನ್ನಾವರದ ಕಾಸರಕೋಡಿನಲ್ಲಿ ಹನ್ನೊಂದು ಎಕರೆ ಜಮೀನು ಖರೀದಿಸಿ ಅಲ್ಲಿ ಸ್ನೇಹ ಕುಂಜ ವಿವೇಕಾನಂದ ಆರೋಗ್ಯ ದಾಮ ನಿರ್ಮಿಸಿದ್ದರು.
ಗಾಂಧೀವಾದಿ ಪರಿಸರ ಹೋರಾಟಗಾರ್ತಿ ಆದ ಡಾ. ಕುಸುಮಾ ಸೊರಬ ಸಾಗರ ತಾಲ್ಲೂಕಿನ ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆಗಾಗಿ 1985 ರಲ್ಲಿ ಸ್ವಯಂ ಬಾಗಿ ಆಗಿದ್ದವರು.
ಅವರು ರಾತ್ರಿ ಪ್ರಯಾಣದಲ್ಲಿ ಬಸ್ಸಿನಿಂದ ಇಳಿದಾಗ ಅಪಘಾತವಾಗಿ ಇಹಲೋಕ ತ್ಯಜಿಸಿದರು ಅವರ ಪಶ್ಚಿಮ ಘಟ್ಟ ಉಳಿಸುವ, ಪರಿಸರ ಸಂರಕ್ಷಣೆ, ಜಲಮೂಲ - ನದಿ ಮೂಲಗಳ ಸಂರಕ್ಷಣೆಗಾಗಿ ಜನ ಜಾಗೃತಿ ಮತ್ತು ಹೊರಾಟಗಳನ್ನು ಮಾಡಿದವರು.
Comments
Post a Comment