Skip to main content

Posts

Showing posts with the label Tiger Dance all over the world in their regional name celebrating for religious performance.

Blog number 1006. ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಮತ್ತು ದುಗಾ೯ ದೇವಿ ವಾಹನ ಹುಲಿ ಕೂಡ.

#ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ, #ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ #ದುರ್ಗಾದೇವಿಯ_ವಾಹನ_ಹುಲಿ #ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ  #ಹುಲಿ_ವೇಷ_ಮೂಲ_ಎಲ್ಲಿ ?     ನಮ್ಮ ಆನಂದಪುರಂನಲ್ಲಿ ಪ್ರತಿ ದಸರಾದಲ್ಲಿ ಹುಲಿ ವೇಷ ಹಾಕುತ್ತಿದ್ದವರು ಸ್ಕೂಲ್ ಜಗನಾಥಣ್ಣ ಅದೂ ಆಯಿಲ್ ಪೇಯಿಂಟ್ ನಲ್ಲಿ ಹುಲಿಯಾಗಿ ಕುಣಿಯುತ್ತಿದ್ದರು ಜೊತೆಗೆ ಕುಪ್ಪಣ್ಣನ ಹಲಿಗೆಯ ನಕ್ಕ-ಚಕ್ಕ ಆಕರ್ಷಣೆ ಊರಿಗೆಲ್ಲ ಮನೋರಂಜನೆ ಆಗಿರುತ್ತಿತ್ತು.     ಸಾಗರದ ಮುನ್ಸಿಪಲ್‌ ಆಫೀಸಲ್ಲಿ ನಮ್ಮ ಸಂಬಂದಿಗಳಾದ ರಾಮಕೃಷ್ಣಣ್ಣ ಕೆಲಸದಲ್ಲಿದ್ದರು ಅವರು ಪ್ರತಿ ದಸರಾದಲ್ಲಿ ಮತ್ತು ಎಳ್ಳಮಾವಸ್ಯೆಯಲ್ಲಿ ತೀರ್ಥಳ್ಳಿಗೆ ತಪ್ಪದೇ ಹೋಗಿ ಹುಲಿವೇಶ ಹಾಕುತ್ತಿದ್ದರು.    ಈ ಹುಲಿ ವೇಷ ಏಕೆ? ಅದರ ಮೂಲ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕೂಡ ಆಸಕ್ತಿದಾಯಕವಾಗಿದೆ.     ಕರಾವಳಿಯಲ್ಲಿ ನವರಾತ್ರಿಯಲ್ಲಿ ಮನುಷ್ಯ ಹುಲಿಯಾಗಿ ಬದಲಾಗಿ ದೇವಿ ಸೇವೆ ಮಾಡುವುದೇ ಹುಲಿ ವೇಷ ಮತ್ತು ದುರ್ಗಾ ದೇವಿಯ ವಾಹನ ಹುಲಿ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ.   200 ವರ್ಷದ ಹಿಂದೆ ಕೇರಳದ ಮಹಾರಾಜ ರಾಮ ವರ್ಮ ಸಕ್ತಾನ ಪಂಪಪುರವನ್ ಕೇರಳದ ದೊಡ್ಡ ಸಂಖ್ಯೆಯ ಕಲಾವಿದರಿಗೆ ತರಬೇತಿ ನೀಡಿ ಹುಲಿ ವೇಷವನ್ನು ಒಣಂ ಹಬ್ಬದ ನಾಲ್ಕ...