ಕೊಕಾ_ಕೋಲಾ_ಪೆಪ್ಸಿ_ಹಠಾವೋ ಭಾರತ್_ದೇಶ್_ಬಚಾವೋ ... ಪ್ರತಿ ದಿನ ಬೆಳಿಗ್ಗೆ ಈ ಘೋಷಣೆಯ ಚಳವಳಿ ದೆಹಲಿಯ ಜಂತರ್ ಮಂತರ್ ನಿಂದ ಸಂಸದ್ ಭವನ ಮಾರ್ಗದವರೆಗೆ ನಿರಂತರ 14 ವರ್ಷ ನಡೆದಿತ್ತು ಅದರ ನೇತೃತ್ವ #ಕುಂದಾಪುರದ_ಕನ್ನಡಿಗ_ಅನಿಲ್_ಹೆಗ್ಡೆ ಅವರದಾಗಿತ್ತು. ನಾನು ದೆಹಲಿಯ ಸಂಸದ್ ಮಾರ್ಗದ ಪೋಲಿಸ್ ಠಾಣೆಯಲ್ಲಿ ಈ ಚಳವಳಿಯಲ್ಲಿ ಭಾಗವಹಿಸಿ ಎರೆಡು ಬಾರಿ ಬಂದನಕ್ಕೆ ಒಳಗಾಗಿದ್ದೆ. ಕುಂದಾಪುರದ ಕನ್ನಡಿಗ ದೆಹಲಿಯ ಸಂಸದ್ ಎದರು ನಿರಂತರ 14 ವರ್ಷಗಳ 5150 ದಿನ ದರಣಿ ನಡೆಸಿದ ವಿಶ್ವ ದಾಖಲೆ ನಿಮಗೆ ಗೊತ್ತಾ? ... ವಿದೇಶಿ ಕೋಕಾ ಕೋಲಾ ಮತ್ತು ಪೆಪ್ಸಿ ವಿರುದ್ಧ ನಿತ್ಯ ದೆಹಲಿಯ ಜಂತರ್ ಮಂತರ್ ನಿಂದ ಪಾರ್ಲಿಮೆಂಟ್ ಸ್ಟ್ರೀಟ್ ತನಕ ಮೆರವಣಿ,ಧರಣಿ ಮತ್ತು ದೆಹಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೋಲಿಸರಿಂದ ಬಂದನಕ್ಕೆ ಒಳಗಾಗಿ ನಂತರ ಬಿಡುಗಡೆ ಆಗುತ್ತಿತ್ತು. ಈ ಚಳವಳಿ ಹುಟ್ಟು ಹಾಕಿದವರು ಜಾರ್ಜ್ ಪರ್ನಾಂಡಿಸರ ನಿಕಟವರ್ತಿ ಕನ್ನಡಿಗ ಕುಂದಾಪುರದ ಅನಿಲ್ ಹೆಗ್ಗಡೆ. 1994 ಮಾರ್ಚ್ 1 ರಿಂದ ಇವರು ಸತತ 14 ವಷ೯ ನಿರ೦ತರವಾಗಿ 5150 ದಿನ ಒಂದು ದಿನವೂ ತಪ್ಪದೆ ಕೋಕೊಕೋಲಾ, ಪೆಪ್ಸಿ ವಿರುದ್ಧ ಪ್ರತಿ ದಿನ ದೆಹಲಿಯ ಜಂತರ್ ಮಂತರ್ ನಿಂದ ಸಂಸದ ಭವನ ಮಾರ್ಗದ ತನಕ ಮೆರವಣಿಗೆ ನಡೆಸುತ್ತಿದ್ದರು. ಪ್ರತಿದಿನ ಒಂದು ಗುಂಪು ಕನಿಷ್ಟ 30 ರಿಂದ ಗರಿಷ್ಟ ನೂರಿನ್ನೂರು ...