ದ್ಯಾವನೂರು_ಮಹಾದೇವ_78. ದೇವನೂರು ಮಹಾದೇವ ಅವರು 1948ರ ಜೂನ್ 10 ರಂದು ಜನಿಸಿದರು ಆ ಲೆಕ್ಕಾಚಾರದಲ್ಲಿ ಇಂದು ಜೂನ್ 10 ಅವರ 78ನೇ ಹುಟ್ಟುಹಬ್ಬ. ದೇವನೂರು' ಮತ್ತು 'ದ್ಯಾವನೂರು' ಎರಡೂ ಸರಿಯೇ, ಆದರೆ ಅವುಗಳನ್ನು ಬಳಸುವ ಸಂದರ್ಭಗಳು ಬೇರೆ ಬೇರೆ. ದೇವನೂರು' ಎಂಬ ಊರಿನ ಹೆಸರನ್ನೇ ಆ ಭಾಗದ ಗ್ರಾಮೀಣ ಜನ ಆಡುಭಾಷೆಯಲ್ಲಿ ಜನಪದ ಶೈಲಿಯಲ್ಲಿ 'ದ್ಯಾವನೂರು' ಎಂದು ಕರೆಯುತ್ತಾರೆ. #ದ್ಯಾವನೂರು' ಎಂಬುದು ದೇವನೂರು ಮಹಾದೇವ ಅವರು 1973 ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಸಣ್ಣಕಥೆಗಳ ಸಂಕಲನದ ಹೆಸರು. ಇವರ ಎದೆಗೆ ಬಿದ್ದ ಅಕ್ಷರ ಪುಸ್ತಕ ನನ್ನ ಜೊತೆ ಇದೆ, ಪುಸ್ತಕ ಅರ್ಧ ಓದಿದ್ದೇನೆ,ನಿದಾನವಾಗಿ ಓದುವುದು ನನ್ನ ಅಭ್ಯಾಸ ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಪ್ರಭಾವಶಾಲಿ ಮತ್ತು ವಿಶಿಷ್ಟ ಲೇಖಕರಲ್ಲಿ ಒಬ್ಬರು. ತಮ್ಮ ಸಾಮಾಜಿಕ ಬದ್ಧತೆ, ದಲಿತ ಚಳವಳಿಯ ನೇತೃತ್ವ ಮತ್ತು ಅನನ್ಯ ಬರವಣಿಗೆಯ ಶೈಲಿಯಿಂದ ಅವರು ಪ್ರಸಿದ್ಧರಾಗಿದ್ದಾರೆ. ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇದೇ ಹಳ್ಳಿಯ ಹೆಸರೇ ಅವರ ಹೆಸರಿನ ಮುಂದಿದೆ. ನಾನು ಈವರೆಗೆ ಅವರ ಮುಖತಃ ಬೇಟಿ ಆಗಲು ಆಗಲೇ ಇಲ್ಲ ಆದರೆ ಅವರ ಜೊತೆ ಫೋನ್ ಸಂಬಾಷಣೆ ಮಾಡುವ ಅವಕಾಶ ಮೈಸೂರಿನ ಮಿತ್ರ ಕರುಣಾಕರ್ ಮಾಡಿಕೊಟ್ಟಿದ್ದರು. ಇವತ್ತು ...