Skip to main content

4035. ದೇವನೂರು ಮಹಾದೇವ 78

ದ್ಯಾವನೂರು_ಮಹಾದೇವ_78.

 ದೇವನೂರು ಮಹಾದೇವ ಅವರು 1948ರ ಜೂನ್ 10 ರಂದು ಜನಿಸಿದರು ಆ ಲೆಕ್ಕಾಚಾರದಲ್ಲಿ ಇಂದು ಜೂನ್ 10 ಅವರ 78ನೇ ಹುಟ್ಟುಹಬ್ಬ.

 ದೇವನೂರು' ಮತ್ತು 'ದ್ಯಾವನೂರು' ಎರಡೂ ಸರಿಯೇ, ಆದರೆ ಅವುಗಳನ್ನು ಬಳಸುವ ಸಂದರ್ಭಗಳು ಬೇರೆ ಬೇರೆ.

  ದೇವನೂರು' ಎಂಬ ಊರಿನ ಹೆಸರನ್ನೇ ಆ ಭಾಗದ ಗ್ರಾಮೀಣ ಜನ ಆಡುಭಾಷೆಯಲ್ಲಿ ಜನಪದ ಶೈಲಿಯಲ್ಲಿ 'ದ್ಯಾವನೂರು' ಎಂದು ಕರೆಯುತ್ತಾರೆ.

  #ದ್ಯಾವನೂರು' ಎಂಬುದು ದೇವನೂರು ಮಹಾದೇವ ಅವರು 1973 ರಲ್ಲಿ ಪ್ರಕಟಿಸಿದ ತಮ್ಮ ಮೊದಲ ಸಣ್ಣಕಥೆಗಳ ಸಂಕಲನದ ಹೆಸರು.

   ಇವರ ಎದೆಗೆ ಬಿದ್ದ ಅಕ್ಷರ ಪುಸ್ತಕ ನನ್ನ ಜೊತೆ ಇದೆ, ಪುಸ್ತಕ ಅರ್ಧ ಓದಿದ್ದೇನೆ,ನಿದಾನವಾಗಿ ಓದುವುದು ನನ್ನ ಅಭ್ಯಾಸ

 ದೇವನೂರು ಮಹಾದೇವ ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಪ್ರಭಾವಶಾಲಿ ಮತ್ತು ವಿಶಿಷ್ಟ ಲೇಖಕರಲ್ಲಿ ಒಬ್ಬರು. 

  ತಮ್ಮ ಸಾಮಾಜಿಕ ಬದ್ಧತೆ, ದಲಿತ ಚಳವಳಿಯ ನೇತೃತ್ವ ಮತ್ತು ಅನನ್ಯ ಬರವಣಿಗೆಯ ಶೈಲಿಯಿಂದ ಅವರು ಪ್ರಸಿದ್ಧರಾಗಿದ್ದಾರೆ.

  ​ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇದೇ ಹಳ್ಳಿಯ ಹೆಸರೇ ಅವರ ಹೆಸರಿನ ಮುಂದಿದೆ.

ನಾನು ಈವರೆಗೆ ಅವರ ಮುಖತಃ ಬೇಟಿ ಆಗಲು ಆಗಲೇ ಇಲ್ಲ ಆದರೆ
ಅವರ ಜೊತೆ ಫೋನ್ ಸಂಬಾಷಣೆ ಮಾಡುವ ಅವಕಾಶ ಮೈಸೂರಿನ ಮಿತ್ರ ಕರುಣಾಕರ್ ಮಾಡಿಕೊಟ್ಟಿದ್ದರು.

  ಇವತ್ತು ನಮ್ಮ ಖ್ಯಾತ ಕವಿ ದೇವನೂರು ಮಹಾದೇವರ 78ನೇ ಹುಟ್ಟು ಹಬ್ಬ ಅವರಿಗೆ ನನ್ನ ಶುಭ ಕಾಮನೆಗಳನ್ನ ಅರ್ಪಿಸುತ್ತಾ ಅವರ ಜೊತೆ ಪೋನಿನಲ್ಲಿ ಒಮ್ಮೆ ಮಾತ್ರ ಮಾತನಾಡಿದ ನೆನಪುಗಳ ಮತ್ತೊಮ್ಮೆ ಬರೆಯ ಬೇಕನ್ನಿಸಿತು...

  ಅವತ್ತು ಬೆಳಿಗ್ಗೆ 4-ನವೆಂಬರ್-2016 ರಂದು ದೇವನೂರು ಮಹದೇವರಿಂದ ಪೋನ್ ಬಂದಿತ್ತು.....

    ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು....
 "#ಹಲೋ_ನಾನು_ದೇವನೂರು_ಮಹಾದೇವ" ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ....

   ನೀವು ಬರೆದ #ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ...

  "ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ" ಅಂದರು.

 ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ನಮ್ಮ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ.... 

  ನೀವು ದಸರಾ ಉದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ... 
"ಹಾಗೇನಿಲ್ಲ ಆ ಸಂದಭ೯ ಹಾಗಿತ್ತು ಆದ್ದರಿಂದ ನಿರಾಕರಿಸಿದೆ..." ಎಂದರು...

ಈ ಸಾರಿಯ 29- ಡಿಸೆಂಬರ್-2016ರ #ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು...

    ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ? ಅಂತ ಕೇಳಿದೆ...
"ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ".... ಅಂದರು.

     "ಮೈಸೂರಿಗೆ ಬನ್ನಿ"  ಎಂದು ಅಮಂತ್ರಿಸಿದರು....

   ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿತ್ತು, ಮುಖತಃ ಅವರನ್ನ ಬೇಟಿ ಮಾಡಬೇಕುಆದರೆ ಕಾಲ ಈವರೆಗೆ ಕೂಡಿ ಬಂದಿಲ್ಲ.

  ದೇವನೂರು ಮಹಾದೇವ ಅವರು ಪ್ರಕಟಿಸಿರುವ ಸ್ವತಂತ್ರ ಪುಸ್ತಕಗಳ ಒಟ್ಟು ಸಂಖ್ಯೆ ತೀರಾ ಕಡಿಮೆ — ಸುಮಾರು 6 ರಿಂದ 7 ಮುಖ್ಯ ಪುಸ್ತಕಗಳು ಮಾತ್ರ. 

    ಅವರು ಸಂಖ್ಯೆಗಿಂತ ಕೃತಿಯ ಗುಣಮಟ್ಟ ಮತ್ತು ಆಳಕ್ಕೆ ಹೆಸರಾದವರು.

  ​ಅವರ ಒಟ್ಟು ಪ್ರಕಟಣೆಗಳು
​1. ಸೃಜನಶೀಲ ಸಾಹಿತ್ಯ (ಕಥೆ/ಕಾದಂಬರಿ) - 3 ಪುಸ್ತಕಗಳು

​ದ್ಯಾವನೂರು (1973) – ಸಣ್ಣಕಥೆಗಳ ಸಂಕಲನ
​ಒಡಲಾಳ (1978) – ಕಿರುಕಾದಂಬರಿ/ದೀರ್ಘಕಥೆ
​ಕುಸುಮಬಾಲೆ (1988) – ಕಾದಂಬರಿ.

​2. ವೈಚಾರಿಕ ಮತ್ತು ಪ್ರಬಂಧ ಸಂಕಲನಗಳು - 3 ಪುಸ್ತಕಗಳು

 ​ಎದೆಗೆ ಬಿದ್ದ ಅಕ್ಷರ – ಬಿಡಿ ಲೇಖನಗಳು ಮತ್ತು ಭಾಷಣಗಳ ಸಂಕಲನ.

 ​ನೋಡು ಮತ್ತು ಕೂಡು – ಚಿಂತನೆಗಳ ಕೃತಿ

 ​ಆರ್.ಎಸ್.ಎಸ್. ಆಳ ಮತ್ತು ಅಗಲ (2022) – ಸಮಕಾಲೀನ ರಾಜಕೀಯ/ಸಾಮಾಜಿಕ ವಿಶ್ಲೇಷಣೆಯ ಪುಸ್ತಿಕೆ.

​3. ಸಮಗ್ರ ಸಂಪುಟಗಳು
​ಇವುಗಳ ಹೊರತಾಗಿ, ಅವರ ಇಷ್ಟು ಕೃತಿಗಳನ್ನು ಒಟ್ಟುಗೂಡಿಸಿ "ದೇವನೂರು ಮಹಾದೇವ ಅವರ ಕೃತಿ ಸಂಪುಟ" (ಅಥವಾ ಎಲ್ಲ ಕತೆ, ಕಾದಂಬರಿಗಳು) ಮತ್ತು "ಆಯ್ದ ಕಥೆಗಳು" ಎಂಬ ಹೆಸರಿನಲ್ಲಿಯೂ ಪುಸ್ತಕಗಳು ಪ್ರಕಟವಾಗಿವೆ.

 ಹಾಗಾಗಿ ಮೂಲ ಕೃತಿಗಳ ಲೆಕ್ಕಾಚಾರದಲ್ಲಿ ಅವರ ಒಟ್ಟು ಪುಸ್ತಕಗಳು 6 ಎಂದು ಹೇಳಬಹುದು.

   ​ಇವರ ಬರಹಗಳು ಕೇವಲ ಶೋಷಣೆಯನ್ನು ಮಾತ್ರ ಹೇಳದೆ, ಶೋಷಿತರ ಒಳಗಿನ ಆತ್ಮಗೌರವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿಹಿಡಿಯುತ್ತವೆ.

 ​ಇವರು ತೀರಾ ಕಡಿಮೆ ಬರೆದಿದ್ದರೂ ಬರೆದ ಪ್ರತಿಯೊಂದು ಕೃತಿಯೂ ಕನ್ನಡ ಸಾಹಿತ್ಯದ ಮೇಲೆ ಆಳವಾದ ಪ್ರಭಾವ ಬೀರಿವೆ.

 ​ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕುಸುಮಬಾಲೆ ಕಾದಂಬರಿಗೆ ನೀಡಿದೆ,​ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
​ರಾಜ್ಯೋತ್ಸವ ಪ್ರಶಸ್ತಿ ಮತ್ತು
​ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತಾದರೂ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಪ್ರತಿಭಟಿಸಿ ಅವರು ಆ ಪ್ರಶಸ್ತಿಯನ್ನು ನಿರಾಕರಿಸಿದರು.

#kusumabale #mysore #devanrumahadeva
#dyavanuru #odalala #birthday

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...