Skip to main content

4018 ಬೆಸ್ತರ ರಾಣಿ ಚಂಪಕಾ ಕಾದಂಬರಿ

ನಾನು_ಬರೆದ_ಕಾದಂಬರಿ

#ಬೆಸ್ತರರಾಣಿ_ಚಂಪಕಾ

#ಡಾ_ಜನಾರ್ದನಭಟ್ಟರ_ವಿಮರ್ಶಾ_ಗ್ರಂಥ

#ವಿನೂತನ_ಕಥನ_ಕಾರಣದಲ್ಲಿ.

#DrJanardhanbhat #vinuthanakathanakarana #bestararanichampaka #keladihistory #Arunprasad #Rajavenkatappanayaka

  ಡಾ.ಜನಾರ್ದನ ಭಟ್ ಅವರ ವಿನೂತನ ಕಥನ ಕಾರಣ ವಿಮರ್ಶಾ ಪುಸ್ತಕದಲ್ಲಿ ಐತಿಹಾಸಿಕ ಕಾದಂಬರಿಗಳಲ್ಲಿ ಆಧುನಿಕ ವಿಧಾನ ಎಂಬ ಪುಟಗಳಲ್ಲಿ ನಾನು ಬರೆದ ಕಾದಂಬರಿ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾದ ಉಲ್ಲೇಖ ಮಾಡಿದ್ದಾರೆ.

ಡಾಕ್ಟರ್ ಬಿ ಜನಾರ್ದನ್ ಭಟ್ ಅವರು ಸಾಹಿತ್ಯ ವಿಮರ್ಶೆಯ ವಿಶೇಷ ಪುಸ್ತಕವನ್ನು ಪ್ರಕಟ ಮಾಡಿದ್ದಾರೆ, ಅದರ ಹೆಸರು ವಿನೂತನ ಕಥನ ಕಾರಣ.

ಈ ಪುಸ್ತಕದ ಪುಟ 39ರಲ್ಲಿ ಐತಿಹಾಸಿಕ ಕಾದಂಬರಿಗಳಲ್ಲಿ ಆಧುನಿಕ ವಿಧಾನ ಎಂಬ ವಿಮರ್ಶೆಯಲ್ಲಿ ಅವರು ಈ ರೀತಿ ಉಲ್ಲೇಖ ಮಾಡಿದ್ದಾರೆ.
  
   ಹಿಂದಿನ ಐತಿಹಾಸಿಕ ಕಾದಂಬರಿಗಳಲ್ಲಿ ಅಧ್ಯಯನದ ಕೊರತೆಯಿಂದ ಅಥವಾ ಐತಿಹಾಸಿಕ ಮಾಹಿತಿಗಳ ಲಭ್ಯತೆಯಿಂದ ಅವು "ಜನಪ್ರಿಯ ರೋಚಕ ಕಾದಂಬರಿಗಳ" ಸಮುದಾಯಕ್ಕೆ ಸೇರಿ ಹೋಗಿತ್ತು. 

  ಹೆಚ್ಚಿನ ಅಧ್ಯಯನದಿಂದ ಈ ಕಾಲದಲ್ಲಿ ಬರೆಯಲ್ಪಟ್ಟಿರುವ ಐತಿಹಾಸಿಕ ಕಾದಂಬರಿಗಳು ಇತಿಹಾಸದ ಹೀರೋಗಳ ಬಗೆಗೆ ಇರದೆ ಆ ಕಾಲದ ಸಮಾಜದ ಮತ್ತು ಜನಾಂಗಗಳ ವೈಶಿಷ್ಟ್ಯ ಮತ್ತು ವ್ಯಕ್ತಿತ್ವಗಳ ಚಿತ್ರಣವನ್ನು ಉದ್ದೇಶವಾಗಿ ಇರಿಸಿಕೊಂಡಿವೆ.

    ಇವುಗಳ ಹಿಂದೆ ಅಧ್ಯಯನದ ಬಲವಿದೆ ಯಾವುದೇ ವಿಚಾರ ಹೀಗೆ ನಡೆದಿರಲಾರದು ಎಂದು ಸಂಶಯ ವ್ಯಕ್ತಪಡಿಸಿದರೆ ಅದಕ್ಕೆ ಇತಿಹಾಸದ ಪುಸ್ತಕಗಳಲ್ಲಿ ದಾಖಲೆಗಳನ್ನು ಈ ಲೇಖಕರು ತೋರಿಸಬಹುದು.

   ವಸುದೇಂದ್ರ ಅವರ #ತೇಜೋತುಂಗಭದ್ರಾ 
ರೇಖಾ ಕಾಖಂಡಕಿ ಅವರ #ದೈವಸ್ಟತ 
 ಕೆ. ಅರುಣ್ ಪ್ರಸಾದ್ ಅವರ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ_ಬೆಸ್ತರರಾಣಿ_ಚಂಪಕ 
ಗಜಾನನ ಶರ್ಮ ಅವರ #ಚೆನ್ನಬೈರಾದೇವಿ ಕಾದಂಬರಿಗಳು ಈ ಮಾದರಿಯ ಬರವಣಿಗೆಗಳು.

  ಈ ಮಾದರಿಗೆ ಕೊಡಬಹುದಾದ ಇನ್ನೊಂದು ಉದಾಹರಣೆ ಎಂದರೆ ಕೆ. ಅರುಣ್ ಪ್ರಸಾದ್ ಅವರ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕ (2020) ಎಂಬ ಕಾದಂಬರಿ.

  ಇದಕ್ಕೊಂದು ವಿವರಣೆಯು ಮುಖಪುಟದಲ್ಲಿಯೇ ಇದೆ, ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕ ರಾಣಿ ದುರಂತ ಪ್ರೇಮ ಕಥೆ.

   ಈ ಕಾದಂಬರಿಯನ್ನು ಬರೆಯುವ ಉದ್ದೇಶ ಮರೆತಿರುವ ಇತಿಹಾಸವನ್ನು ಜನರಿಗೆ ತಿಳಿಸುವುದು ಎನ್ನುವುದನ್ನು ಮೊದಲಿಗೆ ಸ್ಪಷ್ಟ ಪಡಿಸಿದಂತಾಗಿದೆ.

   ಇತಿಹಾಸದ ಘಟನೆಯೊಂದನ್ನು ಚಂಪಕ ರಾಣಿಯನ್ನು ವರ್ತಮಾನ ಕಾಲದಲ್ಲಿ ವಿಕೃತವಾಗಿ ಪರಿಚಯಿಸುತ್ತಿರುವುದನ್ನು ಕಂಡು ಅಸಮಾಧಾನ ಗೊಂಡ ಲೇಖಕರು ಇದರ ಬಗ್ಗೆ ಸತ್ಯ ಸಂಗತಿಯನ್ನು ತಿಳಿಸುವ ಉದ್ದೇಶದಿಂದ ಇದನ್ನು ರಚಿಸಲು ಮುಂದಾದರು.

   ಅಂದರೆ ಇಲ್ಲಿ ಅತೀತವಾದ ಘಟನೆಯನ್ನು ಇಟ್ಟುಕೊಂಡು ಚಿತ್ರಿಸಿದ್ದಾಗಿನ ವರ್ತಮಾನದ ಆಶಯ ವಿಕೃತ ಸಂಕಟನಗಳನ್ನು ತಡೆಗಟ್ಟುವುದು ಕೆಳದಿ ಅರಸರು ಆನಂದಪುರಂನ ಚಂಪಕ ಸರಸ್ಸು ವನ್ನು ವೇಶ್ಯೆ ಒಬ್ಬಳ ನೆನಪಿಗಾಗಿ ಕಟ್ಟಿದರು ಎಂದು ಒಮ್ಮೆ ಎಲ್ಲಾ ಪತ್ರಿಕೆಗಳಲ್ಲಿ ಬಂದ ಪರಿಚಯದ ಲೇಖನದಲ್ಲಿ ಬಂದಿತ್ತಂತೆ ಅದನ್ನು ಖಂಡಿಸಿ ಪತ್ರಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಅರುಣ್ ಪ್ರಸಾದ್ ಮುಂದೆ ಒಂದು ಸುಂದರ ಐತಿಹಾಸಿಕ ಕಾದಂಬರಿಯನ್ನೇ ಬರೆದರು.

  ಅವರು ಅತೀತದ ಘಟನೆಗೆ ಈ ಕಾಲದ ವ್ಯಕ್ತಿಗಳಿಗಿಂತ ಸಮೀಪವಿದ್ದ ವೃದ್ಧೆ ಅಗಸರ ನೀಲಜ್ಜಿ ಈ ಬಗ್ಗೆ ಹೇಳಿದ್ದ ಐತಿಹ್ಯವನ್ನು ಇಲ್ಲಿ ಬಳಸಿಕೊಂಡಿದ್ದಾರೆ, ಕ್ಷೇತ್ರಕಾರ್ಯ ಮಾಡಿದ್ದಾರೆ, ಸಾಕಷ್ಟು ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ.

   ಅವರು ವಿನಯದಿಂದ ಹೀಗೆ ಹೇಳಿದ್ದಾರೆ... ಈ ಐತಿಹಾಸಿಕ ಬೆಸ್ತರ ರಾಣಿ ಚಂಪಕ ಎಂಬ ಕಾದಂಬರಿ ಇತಿಹಾಸದ ಪುಟದಲ್ಲಿ ದಾಖಲಾದ ಮಾಹಿತಿಗಳಿಗೆ ಪೂರಕವಾಗಿ ಮತ್ತು ಜನಪದದಲ್ಲಿನ ಚಂಪಕಾಳ ಕಥೆಯ ಅನುಗುಣವಾಗಿ ಬರೆದಿದ್ದೇನೆ, ಕೆಲವೊಂದು ತಪ್ಪು ಇರಬಹುದು, ಇತಿಹಾಸಕ್ಕೂ ಈ ಕಾದಂಬರಿಗೂ ತಾಳೆ ಆಗದಿರಬಹುದು, ಇನ್ನೂ ಸ್ಪಷ್ಟವಾದ ಮಾಹಿತಿಗಳು ಸಿಕ್ಕಿದರೆ ಅದನ್ನು ಸ್ವೀಕರಿಸಲು ತಾನು ಮುಕ್ತವಾಗಿರುವುದನ್ನು ಕೂಡ ಲೇಖಕರು ಹೇಳಿದ್ದಾರೆ.

 "ಈ ಕಾದಂಬರಿ ಎಲ್ಲಾ ರೀತಿಯ ವಿಮರ್ಶೆ ಮತ್ತು ಸಲಹೆಗಳಿಗೆ ಮುಕ್ತ ನನ್ನ ವಿಚಾರಗಳೇ ಸಂಪೂರ್ಣವಾಗಿ ಸರಿ ಎಂಬ ಭಾವನೆ ನನಗಿಲ್ಲ" (ಸೃಜನಶೀಲ ಕಾದ೦ಬರಿಯನ್ನು ಬರೆದವರು ಹೀಗೆ ಹೇಳಲಾರರು).

  ಈ ಕಾದಂಬರಿಯಲ್ಲಿ ರಾಜವಂಶಸ್ಥರು ಶಿವನ ಭಕ್ತರು ಸಸ್ಯಹಾರಿಗಳು, ನಾಯಕಿ ಚಂಪಕ ಬೆಸ್ತರ ಹೆಣ್ಣು ಆಗಿದ್ದು ಆಹಾರ ಪದ್ಧತಿಯ ವ್ಯತ್ಯಾಸದಿಂದ ಆದ ಸಮಸ್ಯೆಗಳನ್ನು ಚರ್ಚಿಸಿದ್ದಾರೆ.

    ಇದರಲ್ಲಿ ಸಾಮಾಜಿಕ ಸಾಮರಸ್ಯ, ಸೌಹಾರ್ದಗಳಿಗೆ ತೊಂದರೆ ಆಗುವ ಸಮುದಾಯ ದ್ವೇಷ ಜಾತಿನಿಂದನೆ ಇತ್ಯಾದಿ ಇಲ್ಲ.

   ಮೊದಲನೆಯ ಹೆಂಡತಿ ಇದ್ದಾಗಲೇ ರಾಜ ಬೇರೆ ಜಾತಿಯ ಚಂಪಕಳನ್ನು ಮದುವೆಯಾದದು ಮುಖ್ಯವಾಗಿ ಕೌಟುಂಬಿಕ ಬಿರುಕುಗಳಿಗೆ ಕಾರಣವಾಗಿರಬೇಕು.

   ಹಿರಿಯ ರಾಣಿಯ ಕಡೆಯವರು ಚಂಪಕ ಒಬ್ಬಳು ವೇಶ್ಯೆ ಎಂದು ಪ್ರಚಾರ ಮಾಡಲು ಪ್ರಾರಂಭಿಸಿದ್ದರು ಎನ್ನುವ ಸೂಚನೆ ಇದೆ ಆದರೆ ಕಾದಂಬರಿಕಾರರ ಪ್ರಕಾರ ಅಪಪ್ರಚಾರಕ್ಕೆ ಮೂಲವಾಗಿದ್ದು ರಾಜ ಇನ್ನೊಂದು ಮದುವೆಯಾದ ಎನ್ನುವುದಾಗಿರದೆ ಆಹಾರ ಪದ್ಧತಿಯೇ.

   ಹಿರಿಯ ರಾಣಿ ಸಸ್ಯಹಾರಿಯಾಗಿದ್ದು, ಚಂಪಕಾಳ  ಬೆಸ್ತರ ಕುಲದ ಮಾಂಸಹಾರ ಪದ್ಧತಿ ಅವಳಿಗೆ ಒಪ್ಪಿತವಾಗಿರಲಿಲ್ಲ ಎಂದು ಕಾದಂಬರಿ ಹೇಳುತ್ತದೆ.

  ಇಂತಹ ತೀರ್ಮಾನಗಳಿಗೆ ಇತಿಹಾಸದ ಪುರಾವೆಯನ್ನು ನವಚಾರಿತ್ರಿಕ ವಿಶ್ಲೇಷಕರು ಪರಿಶೀಲಿಸಬಹುದು, ಈ ಸಮಸ್ಯೆ ಈಗಲೂ ಕಾಣುವ ಸಮಸ್ಯೆ ಯಾಗಿರುವುದರಿಂದ ಆಗ ಇದ್ದಿರಲಾರದು ಎಂದು ಹೇಳುವಂತಿಲ್ಲ ಆದರೆ ಬೇರೆ ದಾಖಲೆಗಳು ಸಿಕ್ಕಿದರೆ ಬೇರೆ ಕಾರಣಗಳು ಸಿಗಬಹುದು.

    ಕನ್ನಡ ಸಾಹಿತ್ಯ ಲೋಕದಲ್ಲಿ ಡಾ. ಜನಾರ್ದನ ಭಟ್ಟರಂತ ಮೇರು ವ್ಯಕ್ತಿತ್ವದ ವಿಮರ್ಶಕರು - ಸಾಹಿತಿಗಳು - ತಜ್ಞರು ನನ್ನ ಕಾದಂಬರಿಯನ್ನ ಅವರ ವಿಮರ್ಶಾ ಗ್ರಂಥದಲ್ಲಿ ದಾಖಲಿಸಿ ನನ್ನ ಕಾದಂಬರಿಗೊಂದು ವಿಶೇಷ ಸ್ಥಾನಮಾನ ನೀಡಿದ್ದಾರೆ ಅವರಿಗೆ ಕೃತಜ್ಞತೆಗಳನ್ನ ಅರ್ಪಿಸುತ್ತೇನೆ.

   ಅವನನ್ನು ಈವರೆಗೆ ಮುಖಃತಾ ಭೇಟಿ ಮಾಡಲಾಗಿಲ್ಲ ಅವರ ಭೇಟಿಗಾಗಿ ಕಾದಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...