Skip to main content

4034. DSS ಬಿ.ಕೃಷ್ಣಪ್ಪರ 88 ನೇ ಹುಟ್ಟುಹಬ್ಬ


ಬಿ_ಕೃಷ್ಣಪ್ಪ_ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರು.

    9- ಜೂನ್ 1938 ಪ್ರೋಪೆಸರ್ ಬಸಪ್ಪ ಕೃಷ್ಣಪ್ಪರ ಜನ್ಮದಿನ ಇವತ್ತು ಅವರ 88ನೇ ಹುಟ್ಟು ಹಬ್ಬ.

  ಇವರು ಭದ್ರಾವತಿಯ ಸಿಲ್ವರ್ ಜುಬಿಲಿ ಕಾಲೇಜಿನಲ್ಲಿ (ಈಗಿನ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜು) ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

​  ಕರ್ನಾಟಕದಲ್ಲಿ ನಡೆದ #ಬೂಸಾ ಚಳವಳಿಯ ನಂತರ ದಲಿತರಲ್ಲಿ ಜಾಗೃತಿ ಉಂಟಾಯಿತು. 

  ಈ ಹಿನ್ನೆಲೆಯಲ್ಲಿ 1974ರಲ್ಲಿ ಬಿ. ಕೃಷ್ಣಪ್ಪ, #ದೇವನೂರುಮಹಾದೇವ, #ಸಿದ್ದಲಿಂಗಯ್ಯ ಮುಂತಾದ ಪ್ರಮುಖ ಪ್ರಗತಿಪರ ಚಿಂತಕರೊಂದಿಗೆ ಸೇರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಯನ್ನು ಸ್ಥಾಪಿಸಿದರು.

  ​ಕೃಷ್ಣಪ್ಪನವರು ಈ ಸಂಘಟನೆಯ ರಾಜ್ಯ ಸಂಚಾಲಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದರು.

  ಇವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಮಾರ್ಕ್ಸ್‌ವಾದಿ ತತ್ವಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು.

   ಜಾತಿ ಪದ್ಧತಿಯ ನಿರ್ಮೂಲನೆ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ, ಭೂ ರಹಿತ ದಲಿತರಿಗೆ ಭೂಮಿ ಕೊಡಿಸುವುದು ಮತ್ತು ಶಿಕ್ಷಣದ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಹಗಲಿರುಳು ಶ್ರಮಿಸಿದರು.

  ​ಇವರ ಹೋರಾಟ ಅದು ಕೇವಲ ನಗರ ಕೇಂದ್ರಿತವಾಗಿರದೆ, ಕರ್ನಾಟಕದ ಹಳ್ಳಿ ಹಳ್ಳಿಗಳಿಗೂ ತಲುಪಿ ಶೋಷಿತರಲ್ಲಿ ಆತ್ಮಗೌರವವನ್ನು ಜಾಗೃತಗೊಳಿಸಿತು.

   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಕಾರ್ಮಿಕ ಹೋರಾಟಕ್ಕೆ ಅವರು ಬೆಂಬಲಿಸಿದ್ದರು.

ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇದಕ್ಕೆ ಕಾರಣವಾಗಿತ್ತು ಅವರ ಹೋರಾಟ.

   ಹರಿಹರ ಅವರ ಹುಟ್ಟಿದ ಊರು, ಅವರ ಶಿಕ್ಷಣ ಚಿತ್ರದುರ್ಗದಲ್ಲಿ ಆಯಿತು,ಬಿ.ಕೃಷ್ಣಪ್ಪರ ಮೊದಲ ಉದ್ಯೋಗ #ಸಾಗರದ_ಲಾಲ್_ಬಹದ್ದೂರ್_ಶಾಸ್ತ್ರಿ_ಕಾಲೇಜಿನಲ್ಲಿ.

  ಸಾಗರದ LB ಕಾಲೇಜಿನಲ್ಲಿ ಅವರು ತಾತ್ಕಲಿಕ ಉಪನ್ಯಾಸ ಹುದ್ದೆಗೆ ಸೇರುತ್ತಾರೆ.

   ನಂತರ ಭದ್ರಾವತಿ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದ್ದರು.

   ಇಡೀ ರಾಜ್ಯದಲ್ಲಿ ದಲಿತರ ಹಕ್ಕುಗಳ ಬಗ್ಗೆ ಜನ ಜಾಗೃತಿಯ ಆಂದೋಲನದ ಜ್ಯೋತಿ ಬೆಳಗಿದ ಅವರ ಹೋರಾಟ ಸಣ್ಣದಲ್ಲ.

  ಅವರ ಯೌವನದಲ್ಲಿ ಅವರು ಫ್ರೋ. ನಂಜುಂಡ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶರ ಜೊತೆ ಸಮಾಜವಾದಿ ಯುವ ಜನ ಸಭಾದಲ್ಲಿ ಮುಂಚೂಣಿಯಲ್ಲಿದ್ದರು.

   ಆ ಸಮಯದಲ್ಲೇ ಅವರ ಪ್ರೇಮ ವಿವಾಹ ಕವಿ ಗೋಪಾಲ ಕೃಷ್ಣ ಅಡಿಗರ ಅಣ್ಣನ ಪುತ್ರಿ ಇಂದಿರಾ ಜೊತೆ ಆಗುತ್ತದೆ.

  ಬಿ.ಕೃಷ್ಣಪ್ಪ ಮತ್ತು ಇಂದಿರಾ ವಿವಾಹ ದಲಿತ ಮತ್ತು ಬ್ರಾಹ್ಮಣರ ಅಂತರ್ಜಾತಿ ವಿವಾಹವಾದ್ದರಿಂದ ಆ ಕಾಲದಲ್ಲಿ ಭದ್ರಾವತಿಯಲ್ಲಿ ಜಾತಿ ಕಲಹಕ್ಕೆ ಕಾರಣವಾಗಿತ್ತು.
   
   1983-84ರಲ್ಲಿ ನಮ್ಮ ಊರು ಆನಂದಪುರಂನ ರೈತಬಂದು ಗ್ರಾಮೋದ್ಯೋಗದ ರೈಸ್ ಮಿಲ್ ಐಕಾನ್ ಸುಬ್ಬಣ್ಣನಾಯಕರು ಸುಪ್ರ ಸಿದ್ದರು, ಆ ಕಾಲದಲ್ಲೇ ಸಂಸ್ಥೆಯ ನಾಲ್ವರು ಕಾರ್ಮಿಕರ ಕೊಲೆ ಆಗುತ್ತದೆ ಇದನ್ನು ತನಿಖೆಗೆ ಒತ್ತಾಯಿಸಿ ನಾವು ಹೋರಾಟ ಮಾಡಿದ್ದೆವು.

   ಆಗಿನ ಹೋರಾಟಕ್ಕೆ ಸಾಗರದ ಆಗಿನ ಜನರಲ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ #S_S_ನಾಗರಾಜ್, ಆಗಿನ ಸಾಗರ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ #ಶಿವಾನಂದಕುಗ್ವೆ, ಜನಪರ ಹೋರಾಟಗಾರ ನ್ಯಾಯದ ತಕ್ಕಡಿ ಪತ್ರಿಕೆ ಸಂಪಾದಕ #ತೀನಾ_ಶ್ರೀನಿವಾಸ್, ಆಗಿನ ವಿದ್ಯಾರ್ಥಿ ಮುಖಂಡ #ಅದರಂತೆವಿಶ್ವನಾಥಗೌಡ, ಆಗಿನ ಯುವ ಮುಖಂಡರಾದ #ಕುಗ್ವೆವಸಂತ್, #ಪ್ರೆಡರಿಕ್, #ಆಟೋಮೋಹನ್,#ಮಂಡಗಳಲೆನಾರಾಯಣ್ ಮುಂತಾದವರೆಲ್ಲ ಬೆಂಬಲಿಸಿ ಬಂದಿದ್ದರು.

 ಪ್ರತಿಭಟನೆ ನಡೆಸುವವರ ಮೇಲೆ ಲಾಠಿ ಛಾರ್ಜ್, ಬಂದನ ಹೀಗೆ ಅನೇಕ ಹಿಂಸೆ ಹೋರಾಟಗಾರರು ಅನುಭವಿಸ ಬೇಕಾಯಿತು ಆಗ ನಮ್ಮ ಬೆಂಬಲಕ್ಕೆ ಬಂದವರು ಡಿ.ಎಸ್. ಎಸ್. ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರು.

   ನಾವು ಆನಂದಪುರಂನಿಂದ ಶಿವಮೊಗ್ಗಕ್ಕೆ ನೂರಾರು ಯುವಕರು ಸೈಕಲ್ ಜಾಥಾ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಲು ಶಿವಮೊಗ್ಗ ತಲುಪಿದಾಗ ಶಿವಮೊಗ್ಗದ ಸರ್ಕಿಟ್ ಹೌಸ್ ಎದರು ನಮ್ಮ ಸೈಕಲ್ ಜಾತಾ ಸ್ವಾಗತಿಸಲು ಬಿ. ಕೃಷ್ಣಪ್ಪನವರು ಭದ್ರಾವತಿಯಿಂದ ತಮ್ಮ ನೀಲಿ ಬಣ್ಣದ ಬಜಾಜ್ ಸ್ಕೂಟರ್ ನಲ್ಲಿ ಬಂದಿದ್ದರು.

  ಪ್ರತಿಭಟನಾ ಸಭೆಯಲ್ಲಿ ಬಿ.ಕೃಷ್ಣಪ್ಪನವರು ನಮ್ಮ ಹೋರಾಟ ಬೆಂಬಲಿಸಿ ಮಾತಾಡಿದ್ದರು.

   ಆಗ ಶಿವಮೊಗ್ಗದ ಕಾರ್ಮಿಕ ಮುಖಂಡ ವಕೀಲರಾದ #ತಿರುಕಪ್ಪನವರು, ಡಿವಿಎಸ್ ಕಾಲೇಜಿನ ಉಪನ್ಯಾಸಕರಾದ ಜನಪರ ಹೋರಾಟಗಾರ #ರಾಚಯ್ಯ, ವಿದ್ಯಾರ್ಥಿ ಮುಖಂಡ #ಈಸೂರುಲೋಕೇಶ್ ಮತ್ತು ಗೆಳೆಯರು ನಮ್ಮ ಹೋರಾಟ ಬೆಂಬಲಿಸಿದ್ದರು.

  30 ಏಪ್ರಿಲ್ 1997ರಂದು ತಮ್ಮ 58 ನೆ ವರ್ಷಕ್ಕೆ ಇಹಲೋಕ ಯಾತ್ರೆ ಮುಗಿಸಿದ ಬಿ.ಕೃಷ್ಣಪ್ಪರ ದಲಿತ ಜನ ಜಾಗೃತೆ ಅಸಾಧಾರಣ ಹೋರಾಟವಾಗಿ ದಾಖಲಾಗಿದೆ.

   #ಶಿಕ್ಷಣ_ಸಂಘಟನೆ_ಮತ್ತು_ಹೋರಾಟ ಎಂಬ ಅಂಬೇಡ್ಕರ್ ಅವರ ತತ್ವವನ್ನು ಕರ್ನಾಟಕದ ನೆಲದಲ್ಲಿ ಅಕ್ಷರಶಃ ಜಾರಿಗೆ ತರಲು ಶ್ರಮಿಸಿದ ಕೆಲವೇ ಕೆಲವು ನಾಯಕರಲ್ಲಿ ಬಿ. ಕೃಷ್ಣಪ್ಪನವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. 

   ಇವರನ್ನು ಇಂದಿಗೂ ದಲಿತ ಚಳವಳಿಯ ಸಾಕ್ಷಿಪ್ರಜ್ಞೆ ಎಂದು ಗೌರವಿಸಲಾಗುತ್ತದೆ.

   ಇವತ್ತು ನಾಡಿನಾದ್ಯಂತ ಸಂಘ ಸಂಸ್ಥೆಗಳು ಬಿ. ಕೃಷ್ಣಪ್ಪನವರ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ ನಮ್ಮ ಸಾಗರ ಪಟ್ಟಣದಲ್ಲಿ ನಮ್ಮೂರಿನವರೇ ಆದ ದಲಿತ ನಾಯಕ #ಹೊಸಕೊಪ್ಪರೇವಪ್ಪ ಬಿ. ಕೃಷ್ಣಪ್ಪರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಸಿದ ಸುದ್ದಿ ಮಾಧ್ಯಮದಲ್ಲಿ ನೋಡಿ ಸಂತೋಷ ಆಯಿತು.

#DSS  #bkrishnappa  #sagar #revappa #birthday  #Chandragutt #devanurumahadeva #siddalingai

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...