ಹಜ್_ಯಾತ್ರೆ_ಭಾಗ_2.
ಮುಸ್ಲಿಂ ಧರ್ಮಿಯರ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.
ಒಬ್ಬ ಭಾರತೀಯ ಮುಸ್ಲಿಂ ಸಮುದಾಯದ ವ್ಯಕ್ತಿ ಹಜ್ ಯಾತ್ರೆ ಮಾಡಲು ಹಣ ಎಷ್ಟು ಬೇಕು ?..
ಭಾರತದಿಂದ ಹಜ್ ಯಾತ್ರೆ ಮಾಡಲು ಒಬ್ಬರಿಗೆ ಸರಿಸುಮಾರು ರೂ 3.5 ಲಕ್ಷದಿಂದ ರೂ 10 ಲಕ್ಷದವರೆಗೆ ವೆಚ್ಚವಾಗುತ್ತದೆ.
ಈ ಮೊತ್ತವು ನೀವು ಆಯ್ಕೆ ಮಾಡುವ ಪ್ಯಾಕೇಜ್ (ಸರ್ಕಾರಿ ಅಥವಾ ಖಾಸಗಿ) ಮತ್ತು ಸೌಲಭ್ಯಗಳನ್ನು ಅವಲಂಬಿಸಿರುತ್ತದೆ.
ಹಜ್ ಯಾತ್ರೆಯ ಖರ್ಚುಗಳನ್ನು ಕೆಳಗೆ ವಿವರಿಸಲಾಗಿದೆ.
1.#ಭಾರತೀಯ_ಹಜ್_ಸಮಿತಿ (Haj Committee of India) ಸರ್ಕಾರಿ ಹಜ್ ಸಮಿತಿಯ ಮೂಲಕ ಪ್ರಯಾಣಿಸಿದರೆ ಒಬ್ಬರಿಗೆ ಸುಮಾರು ರೂ 3.5 ಲಕ್ಷದಿಂದ ರೂ 4.5 ಲಕ್ಷದವರೆಗೆ ಖರ್ಚಾಗುತ್ತದೆ.
ಇದರಲ್ಲಿ ವಿಮಾನ ಪ್ರಯಾಣ, ವಸತಿ, ಸಾರಿಗೆ ಮತ್ತು ಮೂಲಭೂತ ಸೌಕರ್ಯಗಳು ಒಳಗೊಂಡಿರುತ್ತವೆ.
2. #ಖಾಸಗಿ_ಹಜ್_ಟ್ರಾವೆಲ್ ಏಜೆನ್ಸಿಗಳ (Private Tour Operators) ಮೂಲಕ ಖಾಸಗಿ ಆಪರೇಟರ್‌ಗಳು ನೀಡುವ ಐಷಾರಾಮಿ ಸೌಲಭ್ಯಗಳ ಆಧಾರದ ಮೇಲೆ ಒಬ್ಬರಿಗೆ ರೂ 6 ಲಕ್ಷದಿಂದ ರೂ 10 ಲಕ್ಷದವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚವಾಗಬಹುದು.
ಹರಾಮ್ ಮಸೀದಿಯ ಸಮೀಪದ ಹೋಟೆಲ್‌ಗಳು, ಉತ್ತಮ ಊಟದ ವ್ಯವಸ್ಥೆ ಮತ್ತು ವಿಶೇಷ ಮಾರ್ಗದರ್ಶಕರನ್ನು ಇವರು ಒದಗಿಸುತ್ತಾರೆ.
ಇತರ ಹೆಚ್ಚುವರಿ ವೆಚ್ಚಗಳು ವಿಮಾನ ದರ, ಇತ್ತೀಚಿನ ವರ್ಷಗಳಲ್ಲಿ ವಿಮಾನ ಇಂಧನ ದರ ಏರಿಕೆಯಿಂದಾಗಿ ವಿಮಾನದ ಪ್ರಯಾಣ ದರದಲ್ಲಿ ಬದಲಾವಣೆಗಳಾಗುತ್ತಿವೆ.
#ಖುರ್ಬಾನಿ (Qurbani) ಬಲಿ ನೀಡಲು ಪ್ರತ್ಯೇಕವಾಗಿ ಹಣ ಸುಮಾರು ರೂ 15,000 ರಿಂದ ರೂ17,000 ಬೇಕಾಗುತ್ತದೆ.
ಖಾಸಗಿ ಖರ್ಚು ಮಕ್ಕಾ ಮತ್ತು ಮದೀನಾದಲ್ಲಿ ನಿಮ್ಮ ವೈಯಕ್ತಿಕ ಶಾಪಿಂಗ್ ಮತ್ತು ಸ್ಥಳೀಯ ಪ್ರಯಾಣಕ್ಕೆ ಸೌದಿ ರಿಯಾಲ್ (Saudi Riyal) ಅಗತ್ಯವಿರುತ್ತದೆ.
2026 (1447 AH) ಗಾಗಿ ಸೌದಿ ಅರೇಬಿಯಾದಲ್ಲಿ ಚಂದ್ರನ ವೀಕ್ಷಣೆಗೆ ಒಳಪಟ್ಟು ದಿನಾಂಕ ಮೇ ತಿಂಗಳ 25-30 ರಂದು ಪ್ರಮುಖ ದಿನಗಳನ್ನು ನಿರೀಕ್ಷಿಸಲಾಗಿದೆ.
ಹಜ್ ಯಾತ್ರೆಯ ನನ್ನ ಈ ಲೇಖನ ಸರಣಿಯಲ್ಲಿ ಹಜ್ ಯಾತ್ರೆಇತಿಹಾಸ - ದುರಂತಗಳು - ಧಾರ್ಮಿಕ ಕ್ರಮಗಳ ವಿವರಗಳು ವಿಶೇಷವಾಗಿ ಮುಸ್ಲೀಮೇತರರು ತಿಳಿಯುವಂತೆ ಬರೆಯಲಾಗುತ್ತದೆ.
ಈ ಲೇಖನ ಸರಣಿ ದೀರ್ಘವಾಗಿರುವುದರಿಂದ ಅದನ್ನು ಕೆಲವು ಭಾಗಗಳಾಗಿ ವಿಂಗಡಿಸಿ ಪ್ರಕಟಿಸಲಾಗುತ್ತದೆ ಭಾಗ -3 ಮುಂದಿನ ದಿನದಲ್ಲಿ ನಿರೀಕ್ಷಿಸಿ.
#islamreligion #mecca #Qurbani
#hajj #soudiarabia
Comments
Post a Comment