Skip to main content

4044.ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ


ಫೈರ್_ಪ್ರೂಪ್_ವಸ್ತುಗಳಿಂದ_ಮಾತ್ರ_ಇಂಟಿರಿಯರ್_ಡೆಕೋರೇಷನ್_ಮಾಡಿಸಿ.

  ನೀವು ಯಾವುದೇ ಹೋಟೆಲ್ - ರೆಸ್ಟೋರೆಂಟ್ ಅಥವ ಮನೆ ಪ್ರವೇಶಿಸುವ ಮುನ್ನ ಅಲ್ಲಿನ ಇಂಟೀರಿಯರ್ ಗಮನಿಸಿ ಅದು ಅಗ್ನಿ ನಿರೋಧಕ ಆಗಿಲ್ಲದಿದ್ದರೆ ಪ್ರವೇಶ ಮಾಡಲೇ ಬೇಡಿ.

   ಹೋಟಲ್ ರೆಸ್ಟೋರೆಂಟ್ ತೆರೆಯುವ ಉದ್ಯಮಿಗಳಲ್ಲಿ ನನ್ನ ವಿನಂತಿ ದಯಮಾಡಿ ಅಗ್ನಿ ಸುರಕ್ಷತೆ ಇಲ್ಲದ ಒಳಾಂಗಣ ವಿನ್ಯಾಸ ಮಾಡಿಸಲೇ ಬೇಡಿ.

  ಹೋಟೆಲ್ - ರೆಸ್ಟೋರೆಂಟ್ - ಮಾಲ್ ಅಥವ ಮನೆಗಳಲ್ಲಿ ಅದರ ಮಾಲಿಕರುಗಳೇ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಂತಹ ದುರಂತಗಳು ಸಂಭವಿಸಿದಂತೆ ನೋಡಿಕೊಳ್ಳಬೇಕು.

   ಆದರೆ ಒಳಾಂಗಣ ವಿನ್ಯಾಸಗಾರರು ಮತ್ತು ಪಾಲ್ ಸೀಲಿಂಗ್ ಮಾಡಿಸುವ ಹೆಚ್ಚಿನ ಜನರು ಈ ಬಗ್ಗೆ ಜಾಗ್ರತೆ ವಹಿಸುವುದಿಲ್ಲ.

   ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟುತ್ತಾರೆ ಆದರೆ ಅಗ್ನಿ ನಿರೋಧಕ ಅಲ್ಲದ ವಸ್ತುವಿನಿಂದ ಒಳಾಂಗಣ ವಿನ್ಯಾಸ ಮತ್ತು ಪಾಲ್ ಸೀಲಿಂಗ್ ಗಳನ್ನ ಮಾಡಿಸುತ್ತಾರೆ.

   ಕಳೆದೆ ವರ್ಷ ಉಡುಪಿಯ ಬಾರ್ ಮಾಲಿಕ ದಂಪತಿಗಳು ಇಂತಹ ಅಗ್ನಿ ದುರಂತದಲ್ಲಿ ಬಲಿ ಆಗಿದ್ದರು.

    ನಿನ್ನೆ 2026ರ ಜೂನ್ 15ರ ಸೋಮವಾರ ಸಂಜೆ #ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆ (ನಟರಾಜ್ ಸರ್ಕಲ್ ಬಳಿ) ಇರುವ 'ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್' #ರೆಸ್ಟೋ_ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ
ಮಾಲೀಕರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

   ಅಡುಗೆ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದಾಗಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. 

  ಅಲ್ಲಿ ಆಫ್ರಿಕಾದ ಬುಡಕಟ್ಟು ಮಾದರಿಯ ಹುಲ್ಲಿನ ಗುಡಿಸಲು ಮಾದರಿಯ ಇಂಟೀರಿಯರ್ ಡೆಕೋರೇಷನ್ ಮಾಡಿಸಿದ್ದೇ ತಕ್ಷಣಕ್ಕೆ ಅಗ್ನಿ ಜ್ವಾಲೆ ಹರಡಲು ಕಾರಣ ಆಗಿದೆ.

  ಪಬ್‌ನ ಒಳಾಂಗಣ ವಿನ್ಯಾಸಕ್ಕೆ ಹುಲ್ಲು, ಮರ ಹಾಗೂ ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಬಳಸಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದೆ.

  ವಾಣಿಜ್ಯ ಉದ್ದೇಶದ ಅನೇಕ ರೆಸ್ಟೋರೆಂಟ್ ಗಳು ಈ ರೀತಿ ಹುಲ್ಲು ಬಿದಿರು ಬಳಸಿ ಒಳಾಂಗಣ ವಿನ್ಯಾಸ ಮಾಡಿದ್ದು ಬೆಂಗಳೂರಿನ ಅನೇಕ ಪ್ರತಿಷ್ಠಿತ ಬಡಾವಣೆಗಳಲ್ಲಿ ನೋಡ ಬಹುದು.

   ಇವತ್ತಲ್ಲ ನಾಳೆ ಅಲ್ಲಿ ಇಂತಹ ಅವಘಡ ಸಂಭವಿಸುವ ಮೊದಲೇ ಇದನ್ನು ಬದಲಿಸಬೇಕು.

  ರೆಸ್ಟೋ ಪಬ್ ಅಥವಾ ಯಾವುದೇ ವಾಣಿಜ್ಯ ಕಟ್ಟಡಗಳಲ್ಲಿ ಇಂತಹ ಭೀಕರ ಅಗ್ನಿ ದುರಂತಗಳನ್ನು ತಡೆಯಲು ಮತ್ತು ಪ್ರಾಣಹಾನಿಯನ್ನು ಕಡಿಮೆ ಮಾಡಲು ಅಗ್ನಿ ನಿರೋಧಕ ಒಳಾಂಗಣ ವಿನ್ಯಾಸ ಅತ್ಯಂತ ಅವಶ್ಯಕವಾಗಿದೆ.

 ​ಸಾಮಾನ್ಯವಾಗಿ ಒಳಾಂಗಣ ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್, ಸಾಧಾರಣ ಪ್ಲೈವುಡ್ ಮತ್ತು ಫೋಮ್‌ಗಳು ಬೆಂಕಿಯನ್ನು ಬೇಗನೆ ಹೀರಿಕೊಂಡು ದಟ್ಟವಾದ ವಿಷಕಾರಿ ಹೊಗೆಯನ್ನು ಸೂಸುತ್ತವೆ. 

  ಇದಕ್ಕೆ ಪರ್ಯಾಯವಾಗಿ ಬಳಸಬಹುದಾದ ಸುರಕ್ಷಿತ ಅಗ್ನಿ ನಿರೋಧಕ ವಸ್ತುಗಳನ್ನು ಬಳಸಬೇಕು.

​  ಗೋಡೆ ಮತ್ತು ಸೀಲಿಂಗ್‌ಗೆ ಸುರಕ್ಷಿತ ವಸ್ತುಗಳು
​ಫೈರ್-ರೇಟೆಡ್ ಡ್ರೈವಾಲ್ ಇವುಗಳಲ್ಲಿ ವಿಶೇಷವಾದ ಫೈಬರ್‌ಗ್ಲಾಸ್ ಇರುವುದರಿಂದ ಬೆಂಕಿ ಬೇಗನೆ ಹರಡುವುದಿಲ್ಲ
ಇವುಗಳನ್ನು 'ಟೈಪ್ ಎಕ್ಸ್' ಬೋರ್ಡ್‌ಗಳೆಂದು ಕರೆಯಲಾಗುತ್ತದೆ.

  ಒಳಾಂಗಣದ ವುಡ್ ವರ್ಕ್ ಅಥವಾ ಪೀಠೋಪಕರಣಗಳಿಗೆ ಸಾಮಾನ್ಯ ಪ್ಲೈವುಡ್ ಬದಲಿಗೆ 'ಫೈರ್ ರಿಟಾರ್ಡಂಟ್' ಪ್ಲೈವುಡ್ ಬಳಸಬೇಕು.

​ ಸೌಂಡ್ ಪ್ರೂಫಿಂಗ್ ಶಬ್ದ ನಿಯಂತ್ರಣ ಮಾಡಲು ಗೋಡೆಗಳ ನಡುವೆ ಬಳಸುವ ಥರ್ಮಕೋಲ್ ಬದಲಿಗೆ ಬೆಂಕಿ ನಿರೋಧಕ ಗ್ಲಾಸ್ ಉಣ್ಣೆ ಅಥವಾ ರಾಕ್ ವೂಲ್ ಬಳಸಬೇಕು.

​  ಸೋಫಾ, ಪರದೆ  ಮತ್ತು ಕುರ್ಚಿಗಳ ಮೇಲಣ ಅಲಂಕಾರಕ್ಕೆ ಉಣ್ಣೆ - ಚರ್ಮ ಅಥವಾ ವಿಶೇಷವಾಗಿ ಸಂಸ್ಕರಿಸಿದ ಅಗ್ನಿ ನಿರೋಧಕ ನೂಲಿನ ಬಟ್ಟೆಗಳನ್ನು ಬಳಸಬೇಕು.

  ಸೋಫಾಗಳ ಒಳಗಿರುವ ಸಾಮಾನ್ಯ ಫೋಮ್ ಬೆಂಕಿಗೆ ತಕ್ಷಣ ಆಹುತಿಯಾಗುತ್ತದೆ ಅದಕ್ಕೆ ಬದಲಾಗಿ ಅಗ್ನಿ ನಿರೋಧಕ ಗುಣವಿರುವ ಫೋಮ್ ಬಳಸಬೇಕು.

​  ​ ವುಡನ್ ಫ್ಲೋರಿಂಗ್ ಮರದ ನೆಲಹಾಸು ನೋಡಲು ಚಂದವಿದ್ದರೂ ಬೆಂಕಿಯ ಅಪಾಯ ಹೆಚ್ಚು ಅದಕ್ಕೆ ಪ್ರತಿಯಾಗಿ ಸೆರಾಮಿಕ್ ಟೈಲ್ಸ್, ಮಾರ್ಬಲ್ ಅಥವಾ ಗ್ರೆನೈಟ್ ಅತ್ಯಂತ ಸುರಕ್ಷಿತ.

​  ಕಾರ್ಪೆಟ್ ಬಳಸಲೇಬೇಕಾದಲ್ಲಿ ಅವುಗಳು 'ಫೈರ್ ರೆಸಿಸ್ಟೆಂಟ್' ಪ್ರಮಾಣೀಕರಣ ಹೊಂದಿರಬೇಕು.

  ​ ​ ಸ್ಮೋಕ್ ಡಿಟೆಕ್ಟರ್ಸ್ ಹೊಗೆ ಕಾಣಿಸಿಕೊಂಡ ತಕ್ಷಣ ಸೈರನ್ ಮೊಳಗುವ ಸಿಸ್ಟಮ್ ಮತ್ತು ಬೆಂಕಿ ಆರಿಸಲು ಸ್ವಯಂಚಾಲಿತವಾಗಿ ನೀರು ಚಿಮುಕಿಸುವ ಸ್ಪ್ರಿಂಕ್ಲರ್'ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.

​ತುರ್ತು ನಿರ್ಗಮನ ದಾರಿ ಯಾವುದೇ ಅಡೆತಡೆಗಳಿಲ್ಲದ, ಸ್ಪಷ್ಟವಾಗಿ ಕಾಣಿಸುವ ಕನಿಷ್ಠ ಎರಡು ತುರ್ತು ನಿರ್ಗಮನ ದಾರಿಗಳು ಇರಬೇಕು. 

  ಈ ದಾರಿಗಳ ಬಾಗಿಲುಗಳು ಅಗ್ನಿ ನಿರೋಧಕ ಸ್ಟೀಲ್‌ನಿಂದ  ಮಾಡಲ್ಪಟ್ಟಿರಬೇಕು.

 ​ಬೆಂಕಿ ಬಿದ್ದಾಗ ಹೊಗೆಯಿಂದಲೇ ಹೆಚ್ಚು ಜನ ಉಸಿರುಗಟ್ಟಿ ಸಾಯುತ್ತಾರೆ ಆದ್ದರಿಂದ ವಿಷಕಾರಿ ಹೊಗೆಯನ್ನು ತಕ್ಷಣ ಹೊರಹಾಕಲು ಪ್ರಬಲವಾದ ಎಕ್ಸಾಸ್ಟ್ ಫ್ಯಾನ್ ವ್ಯವಸ್ಥೆ ಇರಬೇಕು.

  ​ಯಾವುದೇ ಪಬ್ ಅಥವಾ ರೆಸ್ಟೋರೆಂಟ್‌ಗಳನ್ನು ವಿನ್ಯಾಸಗೊಳಿಸುವಾಗ ಕೇವಲ ಸೌಂದರ್ಯಕ್ಕೆ ಆದ್ಯತೆ ನೀಡದೆ, ರಾಷ್ಟ್ರೀಯ ಕಟ್ಟಡ ಸಂಹಿತೆಯ (National Building Code - NBC) ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

#fireaccident #mysore #restopub #fireproof 
#interiordecoration

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...