ಹಾವಿನ ನಡೆ ಸತ್ಯವೋ ಮಿಥ್ಯವೋ? ಇವತ್ತಿಗೂ ಹಾವಿಗೂ ಮನುಷ್ಯರಿಗೆ ನಡೆಯುತ್ತಿರುವ ನಂಬಿಕೆ ಮತ್ತು ಮೂಡ ನಂಬಿಕೆಗಳು ಇತ್ಯಥ್೯ ಆಗಿಲ್ಲ. ಇದರ ಮದ್ಯೆ ನಾಗ ಪಾತ್ರಿಗಳು, ಅವರು ಆಯೋಜಿಸುವ ಅಧ್ದೂರಿ ನಾಗಮಂಡಲಗಳು, ನಾಗಪ್ರತಿಷ್ಟೆಗಳು ಇದಕ್ಕಾಗಿ ದುಬಾರಿ ಖಚು೯ ವೆಚ್ಚ ಭಕ್ತಿಗಿOತ ಭಯ ಇಲ್ಲಿ ವಿಜೃoಬಿಸುತ್ತಿದೆ. ನಾಗನ ನಡೆ ಇದೆ ಇಲ್ಲಿ ಯಾವುದೇ ಅಡ್ಡಗೋಡೆ ಕಟ್ಟಡ ಕಟ್ಟಬೇಡಿ ಅಂತ ಹಿರಿಯರು ಹೇಳುತ್ತಿದ್ದ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ನೋಡಿದಾಗ ಇದು ನಂಬಬೇಕೋ ಅಥವ ಮೂಡ ನಂಬಿಕೆಯೋ ಎಂಬ ಅನುಮಾನ ಸಹಜ ಆದರೆ ವಾಸ್ತವವಾಗಿ ಈ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ಸತ್ಯ. ಇವತ್ತು ವೈಜ್ಞಾನಿಕವಾಗಿ ಸಾಲ್ಮನ್ ಮೀನು ವಂಶಾಭಿವೃದ್ಧಿಗಾಗಿ ಮೊಟ್ಟೆ ಇಡಲು ಪ್ರತಿ ವಷ೯ ನಿದಿ೯ಷ್ಟ ಸಮುದ್ರ ಮಾಗ೯ದಲ್ಲಿ ಸಾಗಿ ಹೋಗುವುದು ಸಂಶೋದನೆಯಿಂದ ಸಾಬೀತಾಗಿದೆ, ಉತ್ತರ ಅಟ್ಲಾ೦ಟಿಕ್ ನಿಂದ ಅಮೇರಿಕಾದ ಅಲಾಸ್ಕ ಮತ್ತು ಕೆನಡಾ ದೇಶದ ನದಿಗಳಿಗೆ ಸಾಗುವ ವಿಸ್ಮಯ ಘಟನೆ ನಡೆಯುತ್ತಿದೆ ಈ ಸಮಯದಲ್ಲಿ ಚಳಿಗಾಲದ ನಿದ್ರೆಯಿ೦ದ ಎದ್ದ ಕರಡಿಗಳಿ ಈ ಮೀನುಗಳೆ ಊಟ. ಹಾಗಿರುವಾಗ ಹಾವುಗಳು ನಿದಿ೯ಷ್ಟ ಮಾಗ೯ದಲ್ಲಿ ವಂಶವೃದ್ದಿಗಾಗಿ ಪ್ರತಿ ವಷ೯ ಸಾಗುವ ಮಾಗ೯ ಮತ್ತು ಮರಿಗಳು ಪುನಃ ವಾಪಾಸ್ಸು ಅದೇ ಮಾಗ೯ದಲ್ಲಿ ಹೋಗುವುದೇ ಹಾವಿನ ನಡೆ ಅಥವ ನಾಗನ ನಡೆ ಎಂಬುದಾಗಿರ ಬಹುದು. ಇದನ್ನ ನನ್ನ ಸ್ವಂತ ಅನ...