ಹಾವಿನ ನಡೆ ಸತ್ಯವೋ ಮಿಥ್ಯವೋ?
ಇದರ ಮದ್ಯೆ ನಾಗ ಪಾತ್ರಿಗಳು, ಅವರು ಆಯೋಜಿಸುವ ಅಧ್ದೂರಿ ನಾಗಮಂಡಲಗಳು, ನಾಗಪ್ರತಿಷ್ಟೆಗಳು ಇದಕ್ಕಾಗಿ ದುಬಾರಿ ಖಚು೯ ವೆಚ್ಚ ಭಕ್ತಿಗಿOತ ಭಯ ಇಲ್ಲಿ ವಿಜೃoಬಿಸುತ್ತಿದೆ.
ನಾಗನ ನಡೆ ಇದೆ ಇಲ್ಲಿ ಯಾವುದೇ ಅಡ್ಡಗೋಡೆ ಕಟ್ಟಡ ಕಟ್ಟಬೇಡಿ ಅಂತ ಹಿರಿಯರು ಹೇಳುತ್ತಿದ್ದ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ನೋಡಿದಾಗ ಇದು ನಂಬಬೇಕೋ ಅಥವ ಮೂಡ ನಂಬಿಕೆಯೋ ಎಂಬ ಅನುಮಾನ ಸಹಜ ಆದರೆ ವಾಸ್ತವವಾಗಿ ಈ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ಸತ್ಯ.
ಇವತ್ತು ವೈಜ್ಞಾನಿಕವಾಗಿ ಸಾಲ್ಮನ್ ಮೀನು ವಂಶಾಭಿವೃದ್ಧಿಗಾಗಿ ಮೊಟ್ಟೆ ಇಡಲು ಪ್ರತಿ ವಷ೯ ನಿದಿ೯ಷ್ಟ ಸಮುದ್ರ ಮಾಗ೯ದಲ್ಲಿ ಸಾಗಿ ಹೋಗುವುದು ಸಂಶೋದನೆಯಿಂದ ಸಾಬೀತಾಗಿದೆ, ಉತ್ತರ ಅಟ್ಲಾ೦ಟಿಕ್ ನಿಂದ ಅಮೇರಿಕಾದ ಅಲಾಸ್ಕ ಮತ್ತು ಕೆನಡಾ ದೇಶದ ನದಿಗಳಿಗೆ ಸಾಗುವ ವಿಸ್ಮಯ ಘಟನೆ ನಡೆಯುತ್ತಿದೆ ಈ ಸಮಯದಲ್ಲಿ ಚಳಿಗಾಲದ ನಿದ್ರೆಯಿ೦ದ ಎದ್ದ ಕರಡಿಗಳಿ ಈ ಮೀನುಗಳೆ ಊಟ.
ಹಾಗಿರುವಾಗ ಹಾವುಗಳು ನಿದಿ೯ಷ್ಟ ಮಾಗ೯ದಲ್ಲಿ ವಂಶವೃದ್ದಿಗಾಗಿ ಪ್ರತಿ ವಷ೯ ಸಾಗುವ ಮಾಗ೯ ಮತ್ತು ಮರಿಗಳು ಪುನಃ ವಾಪಾಸ್ಸು ಅದೇ ಮಾಗ೯ದಲ್ಲಿ ಹೋಗುವುದೇ ಹಾವಿನ ನಡೆ ಅಥವ ನಾಗನ ನಡೆ ಎಂಬುದಾಗಿರ ಬಹುದು.
ಇದನ್ನ ನನ್ನ ಸ್ವಂತ ಅನುಭವದಲ್ಲಿ ನೋಡಿದ್ದೇನೆ, ನನ್ನ ಅಜ್ಜಿ ಕಾಲದಲ್ಲಿ ಒಂದು ಮಾಗ೯ ನಾಗನ ನಡೆ ಅಂತ ಬಿಟ್ಟಿದ್ದರು ಅಲ್ಲಿ ಯಾವುದೇ ಕಟ್ಟಡದ ಅಡೆತಡೆ ಮಾಡ ಬಾರದಾಗಿ ನಡೆದು ಬಂದಿತ್ತು ಆ ಮಾಗ೯ದಲ್ಲಿ ಹಾವುಗಳು ಸಂಚರಿಸುತ್ತಿದ್ದವು ಅದನ್ನ ನನ್ನ ಕಾಲದಲ್ಲಿ ಕಟ್ಟಡ ಕಟ್ಟಿ ಬ೦ದ್ ಮಾಡಿ ನೋಡಿದೆ ಮತ್ತು ತೆರವು ಮಾಡಿಯೂ ನೋಡಿದೆ ಹಾವುಗಳು ನಿದಿ೯ಷ್ಟ ಮಾಗ೯ದಲ್ಲೆ ವಂಶಾಭಿವೃದ್ಧಿಗೆ ಹರಿದು ಹೋಗುವುದು ನಂತರ ಅದೇ ಮಾಗ೯ದಲ್ಲಿ ಮರಿಗಳು ವಾಪಾಸ್ ಬರುವುದು ಸತ್ಯ.
ಈ ಬಗ್ಗೆ ಸಂಶೋದನೆ ಅಗತ್ಯವಿದೆ.
Comments
Post a Comment