ದೆಹಲಿ ಕ್ರೇಜಿವಾಲಾ ದಬಾ೯ರ್
ಬಿಜೆಪಿಯೇತರ ಪಕ್ಷಗಳು ಪ್ರಾದೇಶಿಕ ಪಕ್ಷಗಳು ದೆಹಲಿ ಆಮ್ ಆದ್ಮಿ ಪಕ್ಷದ ಗೆಲುವಿನಿಂದ ಕಳೆದುಕೊಂಡ ಉತ್ಸಾಹ ಮರಳಿ ಪಡೆದು ಮೈ ಕೊಡವಿಕೊಳ್ಳುತ್ತಿದೆ.
ಆದರೆ ದೆಹಲಿ ವಾಸ್ತವ ಬೇರೆಯದೇ ಇದೆ, ಕಡಿಮೆ ಬ್ರಷ್ಟಾಚಾರ ಹೆಚ್ಚು ಜನಪರ ಕೆಲಸಗಳನ್ನ ವಿದ್ಯ ಮತ್ತು ಬುದ್ದಿಮತ್ತೆ ಪಡೆದ ಕ್ರೇಜಿವಾಲರಿ೦ದ ನಿವ೯ಹಿಸಲ್ಪಡುತ್ತಿರುವುದು ಒಂದು ಕಾರಣ ಆದರೆ ಇನ್ನೊಂದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಇಡೀ ಕೇಂದ್ರ ಸಕಾ೯ರ ಮತ್ತು ಬಿಜೆಪಿ ಕೇಜ್ರೀವಾಲರ ಸಕಾ೯ರದ ಮೇಲೆ ಮುರಿದುಕೊಂಡು ಬಿದ್ದದ್ದು ಜನಸಾಮಾನ್ಯರ ಅನುಕಂಪಕ್ಕೆ ಕಾರಣವಾಗಿದೆ ಈ ಸಂಧಭ೯ವನ್ನ ಆಪ್ ಪಾಟಿ೯ ಸರಿಯಾಗಿ ಬಳಸಿಕೊಂಡಿತು ಅನಾವಶ್ಯಕ ಅಪ್ರಬುದ್ಧ ತಿರಸ್ಕಾರದ ಹೇಳಿ ಕೆ ಸಿಟ್ಟು ಬೈಯ್ಗುಳ ಸಾವ೯ಜನಿಕವಾಗಿ ಪ್ರದಶಿ೯ಸಲಿಲ್ಲ.
ಅಷ್ಟೆ ಅಲ್ಲ ಇತ್ತೀಚಿನ ರಾಷ್ಟ್ರೀಯ ವಿಚಾರಗಳಲ್ಲಿ ಪರ ವಿರೋದವು ವ್ಯಕ್ತಪಡಿಸದೆ ಅವರ ಮತ ಸ್ವೀಕರಿಸಲು ಅವಕಾಶ ಮಾಡಿಕೊಂಡರು.
ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳು ತಮ್ಮ ಸಂಘಟನೆ ಜಾತ್ಯಾತೀತವಾಗಿ ಬ್ರಷ್ಟಾಚಾರ ವಿರೋದಿಯಾಗಿ ಜನಪರವಾಗಿ ವಿದ್ಯಾವಂತ ಬುದ್ಧಿವಂತರ ಹೊಸಮುಖ ಮುಂಚೂಣಿಯಾಗಿ ನಿಲ್ಲಿಸಿಕೊಂಡು ತಲೆ ನಾಲಿಗೆಗಳ ಹಿಡಿತದ ಸಾವ೯ಜನಿಕ ಹೇಳಿಕೆ ಮತ್ತು ನಡತೆಯಲ್ಲಿ ಕಾಣಿಸಿ ಕೊಂಡರೆ ಮತದಾರರ ಬದಲಾಗಬಹುದು ಆದರೆ ಆದೇ ಮುಖ ಜಾತಿವಾದ ಹಣ ಇದ್ದವನೆ ಬಾಸ್ ಅವರ ಕುಟುಂಬವೇ ಪಕ್ಷ ಯದ್ವಾತದ್ವಾ ಆಸ್ತಿ ಹಣ ಪ್ರದಶ೯ನ ಮತದಾರನಿಗೆ ರೇಜಿಗೆ ತರಿಸಿದೆ ಹೀಗೆ ಮುಂದುವರಿದರೆ ಪಲಿತಾಂಶ ಹೇಗೆ ಬದಲಾದೀತು.
Comments
Post a Comment