#2017ರ ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ಸನ್ಮಾನ ಸ್ವೀಕರಿಸಿದ ಚಲನ ಚಿತ್ರ ತಾರೆ ಪದ್ಮಾ ಕುಮುಟಾ 2020ರ ಜಾತ್ರೆಯಲ್ಲಿ ನೆನಪು ಮಾತ್ರ#
#17 ಪೆಬ್ರವರಿ 2017ರ ಸಾಗರ ಮಾರಿಕಾಂ ಜಾತ್ರೆಯಲ್ಲಿ ಸನ್ಮಾನ ಸ್ವೀಕರಿಸಿದ ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತೆ ಚೋಮನ ದುಡಿ ಸಿನಿಮಾ ಖ್ಯಾತಿಯ ಪದ್ಮಾ ಕುಮುಟಾ ಮತ್ತು ಸನ್ಮಾನಿಸಿದ ಕಾಗೋಡು ತಿಮ್ಮಪ್ಪರ ಅಣ್ಣನ ಮಗ ಕಾಗೋಡು ಅಣ್ಣಪ್ಪ 18 ಪೆಬ್ರವರಿ 2020ರ ಸಾಗರ ಮಾರಿಕಾಂಬ ಜಾತ್ರೆಯಲ್ಲಿ ಸ್ಮರಣೆ ಮಾಡಲೇ ಬೇಕಾದ ಚೇತನಗಳು#
ಪ್ರಖ್ಯಾತ ಕನ್ನಡದ ಸಾಹಿತಿ ಶಿವರಾಂ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಸಿನಿಮಾದ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಗರದ ರಾಜಕಾರಣದ ಗುರು S. S. ಕುಮುಟಾರ ಪುತ್ರಿ ಪದ್ಮಾ ಕುಮುಟಾ ಕಳೆದ 3 ವಷ೯ದ ಹಿಂದಿನ ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ದೇವಿ ದಶ೯ನ ಮಾಡಿದ್ದರು ಅವರನ್ನ ಜಾತ್ರ ಸಮಿತಿ ಕಾಗೋಡು ರಂಗಮಂಚದ ರೂವಾರಿ ಕಾಗೋಡು ಅಣ್ಣಪ್ಪರಿಂದ ಸನ್ಮಾನಿಸಿತ್ತು ಆದರೆ ವಿದಿ ಮತ್ತು ಕಾಲದ ಪ್ರಕೃತಿ ನಿಯಮದಲ್ಲಿ ಅವರಿಬ್ಬರು ಈ ಜಾತ್ರಯಲ್ಲಿ ಇಲ್ಲ.
ಅವರಿಬ್ಬರನ್ನ ಸ್ಮರಿಸಲಿಕ್ಕಾಗಿ ಜಾತ್ರಾ ವೇದಿಕೆಗೆ ಮುಖಮಂಟಪಕ್ಕೆ ಇವರಿಬ್ಬರ ಹೆಸರು ಜಾತ್ರಾ ಸಮಿತಿ ಬಳಸಬಹುದಾಗಿದೆ.
ಇದು ಅವರುಗಳು ನಿದ೯ರಿಸಿರಬಹುದು ಅಥವ ನಿದ೯ರಿಸದಿದ್ದರೆ ನೆನಪಿಸಲಿಕ್ಕಾಗಿ ಈ ಲೇಖನ.
Comments
Post a Comment