#ಮಾರೀಕಾ೦ಬಾ ಜಾತ್ರೆಯ ಹರಕೆ ಕೋಳಿ#
ಈ ವಷ೯ದ ಮಾರೀಕಾಂಬಾ ಜಾತ್ರೆ ಮುಗಿಯುತ್ತಿದೆ ಪ್ರತಿ ಮಾರೀಕಾ೦ಭಾ ಜಾತ್ರೆ ಪ್ರಾರಂಭದಲ್ಲಿ ತೌರು ಮನೆಯಿಂದ ಗಂಡನ ಮನೆಗೆ ದೇವಿ ಮೆರವಣಿಗೆ ಹೊರಟಾಗ ಸಾಗರ ಹೋಟೆಲ್ ಸಕ೯ಲ್ನಿಂದ ಹರಕೆ ಕೋಳಿಗಳನ್ನ ಹಾರಿ ಬಿಡುವ ಸಂಪ್ರದಾಯವಿದೆ. (ಇದು ಎಲ್ಲಾ ಊರಿನ ಮಾರಿಕಾOಬಾ ಜಾತ್ರೆಯಲ್ಲಿ ಈ ಸಂಪ್ರದಾಯವಿದೆ.)
ಸಾಗರದಲ್ಲಿ ಹಾರಿ ಬಿಡುವ ಕೋಳಿ ಹಿಡಿಯಲೆಂದೇ ನೂರಾರು ಜನರು ಮಾರಿಕಾಂಬಾ ಮೆರವಣಿಗೆಯಲ್ಲಿ ಸೇರಿರುತ್ತಾರೆ, ಹಾರಿಬಿಟ್ಟ ಕೋಳಿಗಳು ಸ್ವಾತಂತ್ರ ಪಡೆದ ಸಂತೋಷದಲ್ಲಿ ಹಾರಿದವು ಮೆರವಣಿಗೆಯ ದೀಪಾಲಂಕಾರ ವಾದ್ಯದ ಶಬ್ದ ಮತ್ತು ನೆರೆದ ಸಾವಿರಾರು ಜನರ ನೋಡಿ ಭಯದಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಬಳಸಿ ಅತಿ ಎತ್ತರಕ್ಕೆ ಹಾರಿದರು ಕೊನೆಗೆ ಎಲ್ಲೋ ಒಂದು ಕಡೆ ಶಕ್ತಿ ಕಳೆದುಕೊಂಡು ಇಳಿದು ಬಿಡುತ್ತದೆ ಆಗ ಇದಕ್ಕಾಗಿಯೇ ಹೊಂಚು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರ ಕೈ ಸೇರಿ ಆವರೊಡನೆ ಚೀಲ ಹಿಡಿದು ಸಾಗುವ ಬಗಲಿಯ ಕೈಚೀಲ ಸೇರುತ್ತದೆ.
ಸಾಗರದಲ್ಲಿ ಬ್ರಾಂಡಿ ಶಾಪ್ ನಡೆಸುತ್ತಿದ್ದ ಆಥ೯ರ್ ಡಿಕಾಸ್ಟ ಮಾತ್ರ ಮಾರಿ ಜಾತ್ರೆ ಗಮ್ಮತ್ತಾಗಿ ಮಾಡುತ್ತಿದ್ದರು ಅವರಿಗೆ ಈ ಬೆಳೆದ ಹರಕೆ ಕೋಳಿ ಅಂದರೆ ಭಾರೀ ಇಷ್ಟ ಪ್ರತಿ ಜಾತ್ರೆಯಲ್ಲಿ ಇಂತಾ ಹತ್ತಾರು ಕೋಳಿ ಸಂಪಾದಿಸುತ್ತಾರೆ ಅಂತ ಅವರ ಗೆಳೆಯರು ಹೇಳುತ್ತಿದ್ದರು ಒಮ್ಮೆ ಅವರ ಹತ್ತಿರ ಈ ಬಗ್ಗೆ ಕೇಳಿದಾಗ ಅವರ ಸುಲಭ ಮಾಗ೯ ತಿಳಿದು ನಗು ತಡೆಯಲಾಗಲಿಲ್ಲ ಅದೇನೆಂದರೆ ಮೆರವಣಿಗೆಯಲ್ಲಿರುತ್ತಿದ್ದ ಪೋಲಿಸರಿಗೆ ಇವರು ಪಾಟಿ೯ಕೊಟ್ಟು ಅವರ ಹಿಂದೆ ದೊಡ್ಡ ಚೀಲ ಹಿಡಿದು ಕೊಂಡು ಹೋಗುತ್ತಿದ್ದರಂತೆ ಹಾರಿ ಬಿಟ್ಟ ಹರಕೆ ಕೋಳಿ ಕೆಳಗೆ ಬಂದು ಅದಕಾಗಿ ಕಾಯುವವರ ಕೈ ಸೇರುವಾಗ ನಡೆಯುವ ಫೈಪೋಟಿ ಮದ್ಯ ಫೋಲಿಸರು ನೆರೆದವರನ್ನ ಸರಿಸಿ ಕೋಳಿ ಹಿಡಿದು ಆಥ೯ರ್ ಚೀಲಕ್ಕೆ ಹಾಕುತ್ತಿದ್ದರಂತೆ, ಕ್ರಮೇಣ ಪೋಲಿಸ್ ಇಲಾಖೆಯಲ್ಲಿ ವಿದ್ಯಾವಂತ ಯುವಕರ ಸೇಪ೯ಡೆ ಜಾಸ್ತಿ ಆಗಿ ಇದು ಕಡಿಮೆ ಆಯಿತಂತೆ.
ಆಥ೯ರ್ ಡಿಕಾಸ್ಟ ನಂತರ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು ಈಗ ಮಂಗಳೂರಲ್ಲಿ ನೆಲೆಸಿದ್ದಾರೆಂದು ಹೇಳುತ್ತಾರೆ.
Comments
Post a Comment