ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಭದ್ರಾವತಿ ಮಹಾನಗರ ಪಾಲಿಕೆ ಹೊಸದಾಗಿ ರಚಿಸಿದಾಗ ಅವರ ನೀಲಿಗಣ್ಣಿನ ಹುಡುಗನOತಿದ್ದ ಮಲ್ಲಿಕಾಜು೯ನ ರಾವ್ ಮೇಯರ್ ಆಗಿ ನಾಮ ನಿದೆ೯ಶನ ಮಾಡಿದ್ದು ಇತಿಹಾಸ ಆಗ ಕಾಪೊ೯ರೇಟರ್ ಆಗಿ ರೋಜ ಷಣ್ಮುಗಂ ಕೂಡ ಆಯ್ಕೆ ಮಾಡಿದ್ದರು.
ರೋಜಾ ಸ್ವಾಮಿಯವರು punctual ಮತ್ತು ಶಿಸ್ತಿನ ವ್ಯಕ್ತಿತ್ವದವರು ಹಾಗಾಗಿ ಬಂಗಾರಪ್ಪರಿಗೆ ಇವರು ಅಚ್ಚುಮೆಚ್ಚು.
ನಂತರ ಆದ್ಯಾತ್ಮದ ಬಗ್ಗೆ ಹೆಚ್ಚು ಒಲವು ಕಾಲ ಮೀಸಲಿಟ್ಟರು ಈಗ ವಿಶ್ವಮಟ್ಟದಲ್ಲಿ ಪ್ರಖ್ಯಾತರಾಗಿರುವ ರವಿಶಂಕರ್ ಗುರೂಜಿ ಆಗ ಶಿವಮೊಗ್ಗದಲ್ಲಿ ಇವರ ವೆಸ್ಪಾ ಸ್ಕೂಟರ್ ನಲ್ಲಿ ಇವರ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು.
ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯದ ನಿಮಾ೯ಣ ಹಂತದಲ್ಲಿ ಇವರ ಭಾಗವಹಿಸುವಿಕೆ ಮತ್ತು ಮಾಗ೯ದಶ೯ನ ದೊಡ್ಡದಿದೆ.
ಆಯ್ಯಪ್ಪ ಸ್ವಾಮಿ ಮಂಡಳಿಗಳ ಗುರುಸ್ವಾಮಿಗಳ ಸಂಘ ಕನಾ೯ಟಕ ರಾಜ್ಯದಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದಾರೆ.
ದೇಶ ವಿದೇಶಗಳ ಪ್ರವಾಸ ಮಾಡಿ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯಗಳನ್ನ ಸಂದಶಿ೯ಸಿದ್ದಾರೆ.
ನಿನ್ನೆ (31- ಜನವರಿ -2020) ಸಾಗರದಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತರೋವ೯ರ ಗ್ರಹ ಪ್ರವೇಶಕ್ಕೆ ಗೆಳೆಯರೊಂದಿಗೆ ಹೊರಟವರಿಗೆ ನಮ್ಮ ಲಾಡ್ಜ್ ಬೋಡ್೯ ನೋಡಿ ನನ್ನ ಬೇಟಿ ಮಾಡಲು ವಾಪಾಸ್ ಬಂದಿದ್ದಾರೆ.
ನಾನು ನನ್ನ ಸಹೋದರ ಸಂತೋಷದಿಂದ ಇವರಿಗೆ ಅಭಿನಂದಿಸಿ ಆಶ್ರೀವಾದ ಪಡೆದು ಸಣ್ಣ ಆತಿಥ್ಯ ನೀಡಿದೆವು ಅನೇಕ ವಿಚಾರ ವಿನಿಮಯ ಆಯಿತು ಅವರಿಗೆ ಈಗ ಭಕ್ತಿಯಲ್ಲಿ ದೊಡ್ಡ ಸ್ತರ ತಲುಪಿದ್ದು ನನ್ನ ಅನುಭವಕ್ಕೆ ಬಂತು ಅವರೂ ಕೂಡ ನಾನು ಎಲ್ಲರಲ್ಲೂ ಅಯ್ಯಪ್ಪ ಸ್ವಾಮಿ ಕಾಣುತ್ತಿದ್ದೇನೆ ಎಂದರು.
ರೋಜಾ ಷಣ್ಮುಗO ಹೆಸರಿನಲ್ಲಿ ರೋಜಾ (ಗುಲಾಬಿ) ಇರುವಂತೆ ಅವರ ವ್ಯಕ್ತಿತ್ವ ಕೂಡ ಪರಿಶುದ್ಧ ಗುಲಾಬಿಯೇ ಆಗಿದೆ.
Comments
Post a Comment