#ಡಾಕ್ಟರ್_ಪ್ರಸನ್ನ_ಸಂತೆಕಡೂರು_ಶಿವಮೊಗ್ಗ_ಜಿಲ್ಲೆಯವರೆಂಬುದೇ_ನನಗೆ_ಹೆಮ್ಮೆ ಬಾಲ್ಯದಲ್ಲೇ ಇವರ ಪ್ರತಿಭೆ ಗುರುತಿಸಿದವರು ಡಾ.ಶಿವರಾಂ ಕಾರಂತರು,ಇವರ ಶಾಲೆಗೆ ಸಮಾರಂಭ ಒಂದರಲ್ಲಿ ಭಾಗವಹಿಸಲು ಬಂದಾಗ ಚಿಕ್ಕ ಹುಡುಗ ಬಿಗ್ ಬ್ಯಾಂಗ್ ಬಗ್ಗೆ ಕೇಳಿದ್ದು ಅವರಿಗೆ ಕಾರಂತರಿಗೆ ಇಷ್ಟ ಆಗಿತ್ತು ಆದರೆ ಇವರಿಗೆ ಕಾರಂತರ ಬೇಟಿಗೆ ಅವಕಾಶ ಸಿಗುವುದಿಲ್ಲ ಇದು ಬಾಲಕನಿಗೆ ನಿರಾಶೆ ತರುತ್ತದೆ. ಶಾಲಾ ಕಾರ್ಯಕ್ರಮದ ನಂತರ ಶಿವರಾಂ ಕಾರಂತರೇ ಮಹತ್ವದ ಪ್ರಶ್ನೆ ಕೇಳಿದ ಭಾಲಕ ಎಲ್ಲಿ ಕರೆಯಿರಿ ಅನ್ನುತ್ತಾರೆ ಆದರೆ ಇವರು ತಮ್ಮ ಹಳ್ಳಿಗೆ ಬಸ್ ತಪ್ಪಿ ನಡೆದು ಹೋಗಿರುತ್ತಾರೆ, ಕೆಲ ದಿನದ ನಂತರ ಕಾರಂತರು ಪುಸ್ತಕದ ಸಣ್ಣ ಕಂತೆಯನ್ನು ಇವರ ಶಾಲಾ ಮುಖ್ಯಸ್ಥರಿಗೆ ಕಳಿಸಿ ಇವರಿಗೆ ತಲುಪಿಸಲು ಹೇಳುತ್ತಾರೆ ಇದು ಇವರ ಜೀವನದಲ್ಲಿ ಒಂದು ಅಪೂರ್ವ ಘಟನೆ ಎಂದು ಡಾಕ್ಟರ್ ಪ್ರಸನ್ನ ಬರೆದು ಕೊಂಡಿದ್ದಾರೆ. ಬಡತನದಿಂದಲೇ ಓದಿ ವೈದ್ಯಲೋಕದ ಸಂಶೋದಕರಾಗಿ ಈಗ ಮೈಸೂರಿನ ಜೆ.ಎಸ್.ಎಸ್.ವೈದ್ಯ ಕಾಲೇಜಿನಲ್ಲಿದ್ದಾರೆ. ಕನ್ನಡದಲ್ಲಿ ಅನೇಕ ಪುಸ್ತಕ ಬರೆದದ್ದು ಪ್ರಕಟ ಆಗಿದೆ, ಕನ್ನಡ ಪುಸ್ತಕಗಳನ್ನು ಓದಿ ಅಭಿಪ್ರಾಯಿಸಿ ಪ್ರೋತ್ಸಾಹಿಸುವ ಇವರು ನಮ್ಮ ತಾಲ್ಲೂಕಿನ ಪ್ರಸಿದ್ಧ ಬರಹಗಾರರಾದ ಗಜಾನನ ಶರ್ಮರ #ಚೆನ್ನಾಭೈರಾದೇವಿ ಕಾದಂಬರಿ ಬಗ್ಗೆ ವಿಮರ್ಶೆ ಬರೆದಿದ್ದಾರೆ. ಈ ವಿಮಷೆ೯ಯಲ್ಲಿ ನಾನು ಬರೆದ #ಬೆಸ...