Skip to main content

Posts

Showing posts with the label Natha Pantha Rahmat Tarikere

Blog number 1344. ನಾಥ ಪಂಥ ರಹಮತ್ ತರೀಕೆರೆ

#ರಹಮತ್ತರೀಕೆರೆ ಇವರ ಸಂಶೋದನಾ ಗ್ರOಥ #ಕನಾ೯ಟಕದನಾಥಪಂಥ#    ನಾಸಿಕ್ ಕುಂಬ ಮೇಳದಿಂದ ಪ್ರತಿ 12 ವಷ೯ಕ್ಕೆ ಒಮ್ಮೆ ಮOಗಳೂರಿನ ಕದ್ರಿ ಮಠಕ್ಕೆ ನೂರಾರು ಸನ್ಯಾಸಿಗಳು ಪಶ್ಚಿಮ ಘಟ್ಟದ ಮಾಗ೯ದಲ್ಲೇ ನಡೆದು ಬರುವ ಬಾರಾ ಪಂಥಾ ಎಂಬ ಜೂOಡಿಯಾತ್ರೆ, ಇದನ್ನ ಸಾವಿರಾರು ವಷ೯ದಿಂದ ನಡೆಸಿಕೊಂಡು ಬರುವ ನಾಥಪ೦ಥದ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನ ವಿವರವಾಗಿ ತಿಳಿಯಲಾಗಿರಲಿಲ್ಲ.   4 ವಷ೯ದ ಹಿಂದೆ ಬಂದ ಬಾರಾ ಪಂಥ ಯಾತ್ರೆ ಸುದ್ದಿ ಹಾಯ್ ಬೆಂಗಳೂರಲ್ಲಿ ಮಾಡಿದ್ದ ಶ್ರOಗೇಶ್ ಈ ಪುಸ್ತಕದ ಬಗ್ಗೆ ತಿಳಿಸಿದ್ದರು ಆದರೆ ಈ ಪುಸ್ತಕ ನನಗೆ ಸಿಕ್ಕಿರಲಿಲ್ಲ ಮೊನ್ನೆ ಶ್ರOಗೇಶ್ ರವರೇ ಹುಡುಕಿ ಖರೀದಿಸಿ ತಂದು ಕೊಟ್ಟಿದ್ದು ಮೊನ್ನೆ ಜನತಾ ಕಪ್ಯೂ೯ನಿಂದ ಎರಡನೇ ದಿನದ ಲಾಕ್ ಡೌನ್ ವರೆಗೆ ಓದಿ ತಿಳಿದುಕೊಳ್ಳಲು ಕಾರಣ ಆಯಿತು.    ನಾಥಪಂಥದ ಆದಿ ಚುOಚನಗಿರಿ ಬಾರಾ ಪಂಥದ ಕೈತಪ್ಪಿದ ಅಪರೂಪದ ದಾಖಲೆ ಸಹಿತ ವಿವರವಾದ ಮಾಹಿತಿ ಈ ಪುಸ್ತಕದಲ್ಲಿ ಇದೆ.    ಕೃಷಿಕರ, ಕುರುಬರ, ನೇಕಾರರ ಮತ್ತು ಮೀನುಗಾರರೆಲ್ಲರಿಗೂ ನಾಥಪಂತದ ಮಚೆ೦ದ್ರ ನಾಥರು ಗೋರಕನಾಥರು ಅಧಿಪತಿಗಳು ಆದರೆ ಅದೆಲ್ಲದರ ಮಹತ್ವ ಇತಿಹಾಸ ಆಯಾ ಜನಾ೦ಗದ ಅವರಿಗೇ ಮರೆತು ಹೋಗಿದೆ.   ಬಾರಾ ಪಂಥದ ಕೇಂದ್ರ ಉತ್ತರ ಪ್ರದೇಶದ ಗೋರಕ್ ಪುರ ಅಲ್ಲಿನ ಮಹಾಂತರೇ ಇದರ ಅಧ್ಯಕ್ಷರು ಅವರು ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು.   ...