Skip to main content

Posts

Showing posts with the label My age-old Rajdoot Bike experience

Blog number 938. ನನ್ನ ರಾಜದೂತ್ ಬೈಕ್ ಪುರಾಣ

#ರಾಜದೂತ್_ಬೈಕ್_ಪುರಾಣ ಒ0ದು ಹಳೆಯ ರಾಜದೂತ್ ಬೈಕ್ ಖರೀದಿಸಿದ್ದೆ ನಂತರ ಅದನ್ನ ನಿಭಾಯಿಸಲಾಗದೆ ನಮ್ಮ ಹಳೆಯ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದೆ.  ಒ0ದು ದಿನ ಬೆಳ್ಳಂಬೆಳಿಗ್ಗೆ ಹೆಬ್ಬೋಡಿ ಗಣಪತಿ ಮತ್ತು ಅವನ ಮಗ ಬಂದರು ಆಗ ನನ್ನ ತಲೆ ಸೆಲೂನ್ ಕೃಷ್ಣನ ಕೈಯಲ್ಲಿತ್ತು, "ಏನ್ ಗಣಪತಿ ಬೆಳಗೇನೆ ಅಪ್ಪ ಮಗ ಎಲ್ಲಿಗೋ ಹೊರಟಿದೀರಿ" ಅಂದೆ ಎಲ್ಲೂ ಇಲ್ಲ ನಿಮ್ಮಲ್ಲಿಗೆ ಬಂದೆವು ಅಂದ, ಏನು ವಿಚಾರ ? ಅಂದದ್ದಕ್ಕೆ ನಿಮ್ಮ ಹತ್ತಿರ ಇರೋ ಹಳೇ ರಾಜದೂತ್ ಬೈಕ್ ಕೊಡುತೀರಾ? ಅಂದ, ನನಗೆ ಒಂದು ತರ ಖುಷಿ ಆಯಿತು ಹೆಂಗಿದ್ದರೂ ನನಗೆ ಬೇಡ ಆಗಿತ್ತು ಅದಕ್ಕೆ ಗಿರಾಕಿ ಬಂತಲ್ಲ ಅಂತ.   ಬೆಲೆ ಎಷ್ಟು ಅಂದಾಗ ನಾನು ಖರೀದಿಸಿದ್ದು 7 ಸಾವಿರಕ್ಕೆ ನೀನು 2 ಸಾವಿರ ಕಡಿಮೆ ಕೊಡು ಅಂದೆ ತಕ್ಷಣ ಮಗನಿಗೆ ಅಂಗಡಿಗೆ ಹೋಗು ಎಲೆ ಅಡಿಕೆ ತಾ, ಮುಂಗಡ ಕೊಡದೆ ಯಾವುದೇ ವಸ್ತು ಖರೀದಿಸ ಬಾರದು ಅಂತ ಮಗನಿಗೆ ಹೇಳುವಾಗಲೇ ಗೊತ್ತಾಯಿತು ಇವತ್ತು ಪೂಣ೯ ಹಣ ಕೊಡೊಲ್ಲ ಅಂತ.   ಏನಾದರಾಗಲಿ ಬೈಕ್ ಮಾರಾಟ ಆಯಿತಲ್ಲ ಹೆಂಗಿದ್ದರೂ ಒಂದೆರೆಡು ಸಾವಿರ ಮುಂಗಡ ಬರುತ್ತದಲ್ಲ ಅಂತ ಸುಮ್ಮನಾದೆ ಗಣಪತಿ ಎಲೆ ಅಡಿಕೆ ಮೇಲೆ 5 ರೂಪಾಯಿ ಮತ್ತು 25 ಪೈಸೆ ನಾಣ್ಯ ಇಟ್ಟು ಕೊಟ್ಟಾಗ ಕೋಪ ಬಂತು ಆದರೆ ಗಣಪತಿ ಮುಂದಿನ ವಾರದಲ್ಲಿ ತಪ್ಪದೇ ಪಾವತಿ ಮಾಡುವುದಾಗಿ ಭರವಸೆ ನೀಡಿ ರಾಜದೂತ್ ಬೈಕ್ ಚಾಲು ಮಾಡಿದ ಮಗನ ಹಿಂದೆ ಕುಳಿತು ಹೋದವನು ಎಷ್ಟು ದಿನವಾದರೂ ಬರಲಿಲ್ಲ.   ಒಮ್ಮೆ...