Skip to main content

Posts

Showing posts with the label kogodu land struggle founder H.Ganapathiyappa

ಕಾಗೋಡು ಭೂಮಿ ಹೋರಾಟದ ಚಳವಳಿಯ ನೇತಾರ ಗಣಪತಿಯಪ್ಪ

ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ, ಭಾರತೀಯ ರೈತ ನಾಯಕ ನೆನಪು - 1 .  ಕಾಗೋಡು ರೈತ ಹೋರಾಟಕ್ಕೆ 13 - 6 - 1951ರಲ್ಲಿ ಡಾ.ರಾಮಮನೋಹರ ಲೋಹಿಯಾ ಭಾಗವಾಹಿಸಿ ಕಾಗೋಡಿನ ಅರಳಿ ಮರದ ಕಟ್ಟೆಯ ಮೇಲೆ ಮಾಡಿದ ಭಾಷಣ "ನಿಮ್ಮ ಹೋರಾಟ ನ್ಯಾಯಬದ್ದವಾಗಿದೆ ಆದ್ದರಿಂದ ನಿಮಗೆ ನನ್ನ ಬೆಂಬಲ,ನ್ಯಾಯ ಸಿಗುವವರೆಗೆ ಹೋರಾಟ ನಡೆಯಲಿ, ಸರಕಾರ ಭೂಮಾಲಿಕರ ಪರವಹಿಸಿ ಕಳಂಕಿತವಾಗಿದೆ" ಎಂಬ ವಾಕ್ಯದೊಂದಿಗೆ ಉಳುವವನೇ ಹೊಲದೊಡೆಯ ಘೋಷಣೆ ಮಾಡಿ ಕಾಗೋಡು ಒಡೆಯರ ಗದ್ದೆಗೆ ಪ್ರವೇಶಿಸಿದರು.   ಸೇರಿದ್ದ ಜನಸ್ತೋಮ " ಲೋಹಿಯಾ ಜಿಂದಾಬಾದ್ " " ಸೋಷಿಲಿಸ್ಟ ಪಾಟಿ೯ ಜಿಂದಾಬಾದ್ " " ಗೋಪಾಲ ಗೌಡ ಜಿಂದಾಬಾದ್ " " ಗಣಪತಿಯಪ್ಪ ಜಿಂದಾಬಾದ್' ಘೋಷಣೆ ಮುಗಿಲು ಮುಟ್ಟಿತ್ತು.   ಇದು ಸ್ವಾತಂತ್ರ ಭಾರತದ ಮೊದಲ ಗೇಣಿ ರೈತ ಚಳವಳಿ ಇದರ ನೇತಾರ ಹೆಚ್.ಗಣಪತಿಯಪ್ಪರು ಸಾಗರದ ಜೈಲಿನಲ್ಲಿದ್ದರು ಕಾಗೋಡಿಗೆ ತೆರಳುವ ಮುನ್ನ ಲೋಹಿಯಾರು ಸಾಗರ ಜೈಲಿಗೆ ತೆರಳಿ ಗಣಪತಿಯಪ್ಪರ ಯೋಗ ಕ್ಷೇಮ ವಿಚಾರಿಸಿ "ಇದೊಂದು ದೇಶದಲ್ಲೇ ಮಹತ್ವಪೂಣ೯ವಾದ ಹೋರಾಟವನ್ನು ಪ್ರಾರಂಬಿಸಿರುವುದು ನಮಗೆಲ್ಲ ಆನಂದವಾಗಿದೆ, ಈ ಹೋರಾಟದಲ್ಲಿ ಜಯ ನಿಮ್ಮದಾಗುತ್ತದೆ, ಭಯ ಪಡಬೇಡಿ" ಎನ್ನುತ್ತಾರೆ.   ಸತ್ಯಾಗ್ರಹ ಸ್ಥಳದಲ್ಲಿ ಲೋಹಿಯಾರನ್ನು ಪೋಲಿಸರು ಬಂದಿಸಲಾಗದೆ ನಿಸ್ಸಾಹಯಕರಾಗುತ್ತಾರೆ ಆದರೆ ಅವತ್ತಿನ ರಾತ್ರಿ ಪೋಲಿಸರು ಕಾ...