Skip to main content

Posts

Showing posts with the label Anandapuram Elephant Corridor update up to 13-december-2024

Blog number 3369. ಆನಂದಪುರಂ ಆನೆ ಕಾರಿಡಾರ್ ದಿನಾಂಕ 13- ಡಿಸೆಂಬರ್- 2024 ರ ವರೆಗೆ ಅಪ್ಡೇಟ್

https://www.facebook.com/share/p/15pjBrQzia/ *#ಆನಂದಪುರಂ_ಆನೆ_ಕಾರಿಡಾರ್_ಅಪ್ಡೇಟ್* *10-ಡಿಸೆಂಬರ್ - 2024 ಮಂಗಳವಾರ ಮತ್ತು 11-ಡಿಸೆಂಬರ್-2024ರ ರಾತ್ರಿ 10ರ ತನಕದ ಮಾಹಿತಿ.*    *ನಿನ್ನೆ ರಾತ್ರಿ ಕಾಡಾನೆಗಳು (11 ಡಿಸೆಂಬರ್ 2024 ಬುಧವಾರ) ರಾತ್ರಿ 8 ಗಂಟೆಗೆಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಸಮೀಪದ ಚಂದಾಳಗೆರೆ ಭಾಗದಲ್ಲಿ ಕಂಡುಬಂದಿತ್ತು*    *ರಾತ್ರಿ 8:00 ಸಮಯದಲ್ಲಿ ರೈತರೊಬ್ಬರು ತಮ್ಮ ತೋಟದ ಬೋರ್ವೆಲ್ ನೀರಿನ ಪೈಪ್ ವಾಲ್  ತಿರುಗಿಸಲು ಹೋದಾಗ ಅವರ ತೋಟದ  ಮೇಲ್ಭಾಗದಲ್ಲಿ ಆನೆಗಳು ಇರುವುದು ಗೊತ್ತಾಗಿ ಊರವರಿಗೆಲ್ಲಾ ಫೋನ್ ಮಾಡಿ ಕರೆದಿದ್ದಾರೆ ನಂತರ ಊರವರೆಲ್ಲ ಸೇರಿ ಶಬ್ದ ಮಾಡಿ ಪಟಾಕಿ ಸಿಡಿಸಿದ್ದರಿಂದ ಆ ಭಾಗದಿಂದ ಆನೆಗಳು ಉದನೂರು ಕಾಡಿನ ಭಾಗಕ್ಕೆ ಹೋಗಿರುತ್ತದೆ.* *ಇದೇ ಸಂದರ್ಭದಲ್ಲಿ ಈ ಊರಿನ ಚೆನ್ನಪ್ಪ ಗೌಡರ ತೋಟವನ್ನು ಹಾದು ಹೋಗಿರುತ್ತದೆ.* *ಸೋಮವಾರ ರಾತ್ರಿ ಅಥವಾ ಮಂಗಳವಾರದ ಬೆಳಿಗಿನ ಜಾವ ಗೌತಮಪುರ ಗ್ರಾಮ ಪಂಚಾಯಿತಿಯ ಹೊಸಕೊಪ್ಪದ ಭಾಗದಲ್ಲಿ ಈ ಆನೆಗಳು ಸಂಚರಿಸಿದೆ, ಬೆಳಗಿನ ಜಾವ ಹೊಸಕೊಪ್ಪದ ರೈತ ಶಿವಾನಂದರ ಮನೆ ಪಕ್ಕದ ಗುಮ್ಮನಾಳ ಕೆರೆಗೆ ಬಂದಿದ್ದ ಆನೆಗಳು ಆ ಕೆರೆಯಲ್ಲಿ ನೀರು ಕುಡಿದು ಅಲ್ಲಿ ಲದ್ದಿಗಳನ್ನು ಹಾಕಿ ಹೋಗಿದೆ.*    *ಈ ಆನೆಗಳ ತಂಡದಲ್ಲಿ ಒಟ್ಟು ಐದು ಆನೆಗಳಿದೆ, ಒಂದು ಹೆಣ್ಣಾನೆ ಈ ಆನೆ ತಂಡದ ನ...