Skip to main content

Posts

Showing posts with the label Naga Sadhus protecting Barapantha yatra

4118. ಭಾಗ_1_ನಾಥಪಂಥದ_ಬಾರಾ_ಪಂಥ್_ಯಾತ್ರೆಯಲ್ಲಿ #ದರ್ಮದ_ಸಂರಕ್ಷಕರಾಗಿ_ನಾಗಸಾಧುಗಳು_ಬರುತ್ತಾರೆ.

ಭಾಗ_1_ನಾಥಪಂಥದ_ಬಾರಾ_ಪಂಥ್_ಯಾತ್ರೆಯಲ್ಲಿ  #ದರ್ಮದ_ಸಂರಕ್ಷಕರಾಗಿ_ನಾಗಸಾಧುಗಳು_ಬರುತ್ತಾರೆ.   ನಾಗ ಸಾಧುಗಳು ಧರ್ಮದ ರಕ್ಷಕರು ಅಥವಾ ಸನಾತನ ಧರ್ಮದ ಸೈನಿಕರು ಎಂದೇ ಭಾರತೀಯ ಹಿಂದೂ ಧರ್ಮದ ಎಲ್ಲಾ ಅಖಾಡಗಳು ಹೇಳುತ್ತದೆ.   2027 ರ ಶಿವರಾತ್ರಿ ದಿನದಂದು ಲೋಕಾರ್ಪಣೆ ಆಗಲಿರುವ ನಾನು ಬರೆದ ನಾಥ ಪಂಥದ ಬಾರಾ ಪಂಥ್ ಯಾತ್ರೆ ಪುಸ್ತಕದಲ್ಲಿನ ಈ ಅಧ್ಯಾಯ ನಿಮಗಿಷ್ಟವಾಗಬಹುದು...   ಸ್ವಲ್ಪ ದೀರ್ಘವಾದ ನಾಗ ಸಾದು ಗಳ ಈ ಅದ್ಯಾಯ ಎರಡು ಭಾಗಗಳಾಗಿ ಇಲ್ಲದೆ ಓದಿ.   ನಾಥಪಂಥದ ನಾಸಿಕ್‌ನಿಂದ ಕದ್ರಿ ತನಕದ ಬಾರಾ ಪಂಥ್ ಯಾತ್ರೆ ಯಲ್ಲಿ ನಾಗಾಸಾಧುಗಳ ಉಪಸ್ಥಿತಿ ಮತ್ತು ಅವರ ಪಾತ್ರದ ಕುರಿತಾದ ಮಾಹಿತಿ ಗುಪ್ತವಾಗಿರುತ್ತದೆ.   2015 ರ ಆಗಸ್ಟ್‌ನಲ್ಲಿ ನಾಸಿಕ್ ತ್ರಿಯಂಬಕೇಶ್ವರದಲ್ಲಿ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಜುಂಡಿ ಯಾತ್ರೆ ಹೊರಡುವ ಮುನ್ನ ನಡೆದ ಧಾರ್ಮಿಕ ವಿಧಿವಿಧಾನಗಳು ಹಾಗೂ ಶಾಹಿ ಸ್ನಾನಗಳಲ್ಲಿ ದಿಗಂಬರ (ನಗ್ನ) ನಾಗಾಸಾಧುಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.    ನಾಸಿಕ್‌ನಿಂದ ಮಂಗಳೂರಿನ ಕದ್ರಿ ತನಕ ಸಾಗಿದ 1,100 ಕಿ.ಮೀ. ಸುದೀರ್ಘ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾಧುಗಳು ಪ್ರಧಾನವಾಗಿ ನಾಥಪಂಥದ 'ದೀಕ್ಷಿತ ಕನ್ಫಟಾ ಯೋಗಿಗಳು' (ಕೇಸರಿ ವಸ್ತ್ರಧಾರಿಗಳು).    ಯಾತ್ರೆಯ ಭದ್ರತೆ, ಶಿಸ್ತು ಮತ್ತು ಸಾಂಪ್ರದಾಯಿಕ ಧ್ವಜಗಳನ್ನು ಹಿಡಿದು ಮುನ್ನಡೆ...