Skip to main content

Posts

Showing posts with the label Rice papad preparation is unique taste -aroma-crispy

Blog number 2121. ಮಲೆನಾಡಿನ ಅಕ್ಕಿ ಹಪ್ಪಳ ತಯಾರಿಸುವ ವಿಧಾನ ಬೇರಾವ ಹಪ್ಪಳ ತಯಾರಿಗಿಂತ ಬಿನ್ನವಾದದ್ದು ಮತ್ತು ರುಚಿ - ಘಮ- ಕರಂ ಕುರುಂ ಕೂಡ.

#ಅಕ್ಕಿಯಿಂದ_ತಯಾರಿಸುವ_ಹಪ್ಪಳ #ಈ_ರೀತಿ_ಬೇರಾವ_ದಾನ್ಯದಿಂದಲೂ_ಹಪ್ಪಳ_ತಯಾರಿಸುವುದಿಲ್ಲ #ಅಕ್ಕಿ_ಹಪ್ಪಳದ_ರುಚಿ_ಘಮ_ವಿಶಿಷ್ಟ #ಅಕ್ಕಿ_ಹಪ್ಪಳ_ಎಣ್ಣೆಯಲ್ಲಿ_ಹುರಿದು_ಅಥವ_ರೋಸ್ಟ್_ಆಗಿ_ಸುಟ್ಟು_ತಿನ್ನಬಹುದು #ಬಾಯಲ್ಲಿಟ್ಟರೆ_ಕರ0_ಕುರುಂ_ಅಂತ_ನಾಲಿಗೆ_ಮೇಲೆ_ಕರಗಿ_ಹೋಗುವ_ಅಕ್ಕಿ_ಹಪ್ಪಳ. https://youtu.be/E8VfANXgLE8?feature=shared  ಪಶ್ಚಿಮ ಘಟ್ಟಗಳ ಪ್ರದೇಶವಾದ ಮಲೆನಾಡು ಬತ್ತ ಬೆಳೆಯುವ ಮತ್ತು ಅಕ್ಕಿ ಹೆಚ್ಚು ಬಳಸುವ ಪ್ರದೇಶ.   ಇಲ್ಲಿ ಅಕ್ಕಿ ರೊಟ್ಟಿ- ಉಂಡೆ ಕಡಬು -ವಿವಿದ ಬಾಳೆ ಎಲೆ, ಅರಿಶಿಣದ ಎಲೆ, ಹಲಸಿನ ಎಲೆ ಕೊಟ್ಟೆ ಕಡಬು, ವಿವಿಧ  ಹಣ್ಣು- ಸೌತೆ ತರಕಾರಿ- ಸಬ್ಬಸಗೆ ಸೊಪ್ಪು ಬಳಸಿ ತಯಾರಿಸುವ ದೋಸೆ, ಸೌತೆಕಾಯಿ ರೊಟ್ಟಿ, ಅಕ್ಕಿ ರವೆ ಉಪ್ಪಿಟ್ಟು.   ಅಕ್ಕಿಯಿಂದ ಮಾಡುವ ಸಿಹಿ ತಿಂಡಿಗಳಾದ ಕಬ್ಬಿನ ಹಾಲು ಅಥವ ಬೆಲ್ಲದಿಂದ ಮಾಡುವ ಮಣ್ಣಿ, ತೊಡೆದೇವು.  ಮೊಗೆ ಕಾಯಿ ಅಕ್ಕಿ ಬೆರೆಸಿದ ತೆಳ್ಳಾವ್, ಪೊಂಗಲ್, ಚಿತ್ರನ್ನ, ಪಲಾವ್, ಬಿಸಿಬೇಳೆಬಾತ್ ಇತ್ಯಾದಿಗಳ ಜೊತೆಗೆ ಅಕ್ಕಿ ಹಪ್ಪಳ ಕೂಡ ಪೇಮಸ್.   ಪ್ರತಿ ವರ್ಷ ಮುಂಗಾರಿಗೆ ಮುನ್ನ ನಮ್ಮ ಕಲ್ಯಾಣ ಮಂಟಪದಲ್ಲಿ ಅಕ್ಕಿ ಹಪ್ಪಳ ತಯಾರಿಸಿ ನಮ್ಮ ಸಿಬ್ಬಂದಿಗಳಿಗೆ ಮತ್ತು ನಮ್ಮ ಸಂಸ್ಥೆಯ ಆಪ್ತರಿಗೆ ನೀಡಿ ಉಳಿದದ್ದು ನಮ್ಮ ಮನೆಗಳಿಗೆ.