Skip to main content

Posts

Showing posts with the label 1960 memories of Shikaripura taluk by Nagendrappa part 1

Blog number 2046.ಭಾಗ-1.

#ಭಾಗ_1 #ಶಿಕಾರಿಪುರ_ತಾಲ್ಲೂಕಿನ_ನೆಲವಾಗಿಲು_ಎಂಬ_ಊರಿನ #ನಾಗೇಂದ್ರಪ್ಪ_ನಮ್ಮ_ಊರಲ್ಲಿ_ನೆಲೆಸಿದ್ದಾರೆ #ಇವರಿಗೆ_76ರ_ವಯಸ್ಸು #ಇವರ_ನೆನಪಿನ_ಶಕ್ತಿ_ಅಗಾದ #ಅರವತ್ತರ_ದಶಕದಲ್ಲಿನ_ಶಿಕಾರಿಪುರ_ತಾಲ್ಲೂಕಿನ_ನೆನಪುಗಳು_ಅವರಿಂದ   ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅವರ ವಿಡಿಯೋ ಸಂದರ್ಶನ ನೋಡಿ https://youtu.be/WdFfpyJ8AiA?feature=shared   ನಮ್ಮ ಊರಿನ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪಾರುಪತ್ತೆದಾರರಾಗಿ ದೇವರ ಸೇವೆ ಸಲ್ಲಿಸುತ್ತಿರುವ ನಮ್ಮ ಊರ ನಿವಾಸಿಗಳಾಗಿರುವ ನಾಗೇಂದ್ರಪ್ಪನವರ ಊರು ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು.   ಮೆಕ್ಯಾನಿಕ್- ಡ್ರೈವರ್ - ಗುಮಸ್ತರಾಗಿ ಅನೇಕ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು ಈಗ ಅವರಿಗೆ 76 ವರ್ಷ ವಯಸ್ಸು, ಕುಡಿತ ದೂಮಪಾನದಂತ ಯಾವುದೇ ದುಶ್ಚಟ ಇವರಿಗಿಲ್ಲ, ಸುಳ್ಳು ದಗಲ್ಬಾಜಿ ಇವರ ಹತ್ತರ ಸುಳಿದಿಲ್ಲ.   ದೈವ ಭಕ್ತ - ಕಲಾವಿದ-ಸಜ್ಜನರಾದ ಇವರು ನನ್ನ ಹಿರಿಯ ಮಿತ್ರರು, ನಮ್ಮ ರೈಸ್ ಮಿಲ್ ಜೋಡಿಸಿದವರು, ರೈಸ್ ಮಿಲ್ ಖರೀದಿಗೆ, ರೈಸ್ ಮಿಲ್ ನ ರಬ್ಬರ್ ಶೆಲ್ಲರ್, ಪಾಲಿಶರ್ ಇತ್ಯಾದಿಗಾಗಿ ನಾನು ಇವರು ಮೈಸೂರು-ಹಾಸನ-ಕೊಡಗು- ದಾವಣಗೆರೆ ಜಿಲ್ಲೆಗಳ ಅನೇಕ ಊರುಗಳಿಗೆ ಹೋಗಿದ್ದವರು.    ನನಗೆ ಆಶ್ಚರ್ಯ ಎಂದರೆ ಇವರ ನೆನಪಿನ ಶಕ್ತಿ, ಇವರ ಹತ್ತಿರ ಹಳೆಯ ಸಂದರ್ಭಗಳ ಮಾತು ಕೆದುಕಿದರೆ ಇವರ ನೆನಪಿನ ಜರಿ ಪ್ರವಹಿಸುತ್ತದೆ ಆ ಸಂದರ್ಭದ ಜನರ ಹೆಸ...