#ಭಾಗ_1
#ಶಿಕಾರಿಪುರ_ತಾಲ್ಲೂಕಿನ_ನೆಲವಾಗಿಲು_ಎಂಬ_ಊರಿನ
#ನಾಗೇಂದ್ರಪ್ಪ_ನಮ್ಮ_ಊರಲ್ಲಿ_ನೆಲೆಸಿದ್ದಾರೆ
#ಇವರಿಗೆ_76ರ_ವಯಸ್ಸು
#ಇವರ_ನೆನಪಿನ_ಶಕ್ತಿ_ಅಗಾದ
#ಅರವತ್ತರ_ದಶಕದಲ್ಲಿನ_ಶಿಕಾರಿಪುರ_ತಾಲ್ಲೂಕಿನ_ನೆನಪುಗಳು_ಅವರಿಂದ
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅವರ ವಿಡಿಯೋ ಸಂದರ್ಶನ ನೋಡಿ
https://youtu.be/WdFfpyJ8AiA?feature=shared
ನಮ್ಮ ಊರಿನ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪಾರುಪತ್ತೆದಾರರಾಗಿ ದೇವರ ಸೇವೆ ಸಲ್ಲಿಸುತ್ತಿರುವ ನಮ್ಮ ಊರ ನಿವಾಸಿಗಳಾಗಿರುವ
ನಾಗೇಂದ್ರಪ್ಪನವರ ಊರು ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು.
ಮೆಕ್ಯಾನಿಕ್- ಡ್ರೈವರ್ - ಗುಮಸ್ತರಾಗಿ ಅನೇಕ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು ಈಗ ಅವರಿಗೆ 76 ವರ್ಷ ವಯಸ್ಸು, ಕುಡಿತ ದೂಮಪಾನದಂತ ಯಾವುದೇ ದುಶ್ಚಟ ಇವರಿಗಿಲ್ಲ, ಸುಳ್ಳು ದಗಲ್ಬಾಜಿ ಇವರ ಹತ್ತರ ಸುಳಿದಿಲ್ಲ.
ದೈವ ಭಕ್ತ - ಕಲಾವಿದ-ಸಜ್ಜನರಾದ ಇವರು ನನ್ನ ಹಿರಿಯ ಮಿತ್ರರು, ನಮ್ಮ ರೈಸ್ ಮಿಲ್ ಜೋಡಿಸಿದವರು, ರೈಸ್ ಮಿಲ್ ಖರೀದಿಗೆ, ರೈಸ್ ಮಿಲ್ ನ ರಬ್ಬರ್ ಶೆಲ್ಲರ್, ಪಾಲಿಶರ್ ಇತ್ಯಾದಿಗಾಗಿ ನಾನು ಇವರು ಮೈಸೂರು-ಹಾಸನ-ಕೊಡಗು- ದಾವಣಗೆರೆ ಜಿಲ್ಲೆಗಳ ಅನೇಕ ಊರುಗಳಿಗೆ ಹೋಗಿದ್ದವರು.
ನನಗೆ ಆಶ್ಚರ್ಯ ಎಂದರೆ ಇವರ ನೆನಪಿನ ಶಕ್ತಿ, ಇವರ ಹತ್ತಿರ ಹಳೆಯ ಸಂದರ್ಭಗಳ ಮಾತು ಕೆದುಕಿದರೆ ಇವರ ನೆನಪಿನ ಜರಿ ಪ್ರವಹಿಸುತ್ತದೆ ಆ ಸಂದರ್ಭದ ಜನರ ಹೆಸರು ದಿನಾಂಕ ಸಮಯ ಎಲ್ಲಾ ಹೇಳುತ್ತಾ ಹೋಗುತ್ತಾರೆ.
ಆದ್ದರಿಂದ 60 ರ ದಶಕದ ಶಿಕಾರಿಪುರದ ಚಿತ್ರಣ ಇವರ ನೆನಪಿನಿಂದ ಹೊರ ತೆಗೆಯುವ ಪ್ರಯತ್ನ ನನ್ನದು.
ಇವತ್ತು ಶಿಕಾರಿಪುರ ತಾಲ್ಲೂಕು ಪ್ರಸಿದ್ಧಿ ಪಡೆದಿದೆ ಆದರೆ ಇದು 1960 ರಿಂದ 2005 ರ ವರೆಗೆ ಶಿವಮೊಗ್ಗ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲ್ಲೂಕು ಆಗಿತ್ತು.
ಮೊದಲ ಭಾಗದಲ್ಲಿ ಆ ಕಾಲದಲ್ಲಿ ಇಡೀ ಶಿಕಾರಿಪುರ ತಾಲ್ಲೂಕಿನಲ್ಲಿ ಅತ್ಯಂತ ಶ್ರೀಮಂತ ಕೊಡುಗೈ ದಾನಿ ಆಗಿದ್ದವರು ಸುರುಗಿಹಳ್ಳಿ ಹಾಲಪ್ಪನವರು ಅವರ ಬಗ್ಗೆ ನಾಗೇಂದ್ರಪ್ಪರ ನೆನಪುಗಳು ಈ ವಿಡಿಯೋದಲ್ಲಿದೆ.
ಮುಂದಿನ ಭಾಗಗಳಲ್ಲಿ ಶಿಕಾರಿಪುರದ ಆ ಕಾಲದ ವಿಶೇಷ ವ್ಯಕ್ತಿಗಳ ಬಗ್ಗೆ ಘಟನೆಗಳ ಬಗ್ಗೆ ನಾಗೇಂದ್ರಪ್ಪ ಮಾತಾಡಲಿದ್ದಾರೆ ಇದು ಅವತ್ತಿನ ಕಾಲಘಟ್ಟವನ್ನ ನೆನಪಿಸಲಿದೆ.
Comments
Post a Comment