#ನನ_ಪ್ರೀತಿಯ_ಶ೦ಭೂರಾಮನ_ಹಲಸಿನ_ಹಣ್ಣು
#ಅವನ_ಪ್ರೀತಿಯ_ಒತ್ತಾಯಕ್ಕೆ_ನಾನೇ_ಹಣ್ಣು_ಬಿಡಿಸಬೇಕಾಯಿತು.
#ಹಲಸಿನ_ಹಣ್ಣು_ತಿನ್ನಲು_ರುಚಿ
#ಹಣ್ಣು_ಕೊಯ್ದು_ತೊಳೆ_ತೆಗೆಯುವುದು_ಕಷ್ಟದ_ಕೆಲಸ
https://youtu.be/C-N7tIwKSZ0?feature=shared
ಯಾರಾದರೂ ಹಲಸಿನ ಹಣ್ಣು ಕೊಯ್ದು ಕೈಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಅದರ ಮದ್ಯದ ಹಣ್ಣಿನ ದಿಂಡಿನ ಮೇಣ ನಿವಾರಿಸಿ ತೊಳೆ ತೆಗೆದು ಅದರ ಸುತ್ತಲಿನ ಕಿರು ಸೊಳೆ ಬಿಡಿಸಿ ಅದರ ಒಳಗಿನ ಹಲಸಿನ ಬೀಜ ಬೇರ್ಪಡಿಸಿ ತಟ್ಟೆಯಲ್ಲಿ ಹಾಕಿ ಕೊಟ್ಟರೆ ತಿನ್ನಲು ಸುಲಭ.
ಆದ್ದರಿಂದ ನಾನು ಹಲಸಿನ ಹಣ್ಣಿನ ಆಪರೇಷನ್ ಮಾಡುವುದು ಬಿಟ್ಟು ಅನೇಕ ವರ್ಷವೇ ಆಗಿತ್ತು.
ಹಲಸಿನ ಹಣ್ಣು ಬಂದು 2 - 3 ದಿನ ಆದರೂ ಮನೆಯಲ್ಲಿ ಎಲ್ಲರೂ ಇದೇ ಉದಾಸೀನದ ಮೂಡಿನಲ್ಲಿದ್ದರು ಆದರೆ ಶಂಭೂ ರಾಮ ಮಾತ್ರ ಆಸೆಯ ಕಣ್ಣುಗಳಿಂದ ನೋಡುತ್ತಿದ್ದ.
ಮೊನ್ನೆ ಅವನ ತಾಳ್ಮೆಯ ಕಟ್ಟೆ ಒಡೆದು ಹೋಯಿತು ಹಲಸಿನ ಹಣ್ಣಿನ ಸುತ್ತ ಕುಣಿಯುತ್ತಾ ನನಗೆ ಅವಾಜ್ ಹಾಕಿ ಹಲಸಿನ ಹಣ್ಣು ಬಿಡಿಸುವ ಕೆಲಸಕ್ಕೆ ಹಚ್ಚಿದ್ದ.
Comments
Post a Comment