#ಆಗುಂಬೆ_ಘಾಟಿ_ಪ್ರಯಾಣ
#ಎಪ್ಪತ್ತರ_ದಶಕದಲ್ಲಿ
#ನನ್ನ_ಅನುಭವ.
#ಪ್ರತಿಷ್ಟಿತರಿಗೆ_ಜಾತಿ_ಅಂತಸ್ತು_ಇದ್ದವರಿಗೆ_ಏಜೆಂಟರ_ಮರ್ಜಿಯವರಿಗೆ_ಪ್ರಥಮ_ಪ್ರಾಶಸ್ತ್ಯ_ಇತ್ತು
#ಆಗಿನ_ಆಗುಂಬೆ_ಘಾಟಿ_ಏಜೆಂಟರು_ಗ್ರಾಹಕ_ಸ್ನೇಹಿ_ಆಗಿರಲಿಲ್ಲ.
#ಆಗುಂಬೆ_ಘಾಟಿ_ಪ್ರಯಾಣ_ಕೆಟ್ಟ_ಅನುಭವ_ಆಗಿರುತ್ತಿತ್ತು_ಕೂಲಿ_ಕಾರ್ಮಿಕರಿಗೆ
#ಐವತ್ತು_ವರ್ಷದಲ್ಲಿ_ಸಂಪೂರ್ಣ_ಬದಲಾಗಿದೆ
#ಇದನ್ನು_ಈಗ_ಓದಿದವರಿಗೆ_ನಂಬಲು_ಸಾಧ್ಯವಿಲ್ಲ.
#ರಾಷ್ಟ್ರ_ಪ್ರಶಸ್ತಿ_ವಿಜೇತ_ಚೋಮನದುಡಿ_ಚಿತ್ರದಲ್ಲಿ_ಆ_ಕಾಲದ
#ಆಗುಂಬೆ_ಘಾಟಿಯ__ಆಗಿನ_ಕಾಲದ_ಬಸ್_ಪ್ರಯಾಣದ_ದೃಶ್ಯವಿದೆ.
1968-69 ರಲ್ಲಿ ನಮ್ಮ ಊರಿಂದ ನನ್ನ ತಂದೆ ತಾಯಿ ಜೊತೆ ಬಿದನೂರು ನಗರದ ದೇವಗಂಗೆಗೆ ನನ್ನ ದೊಡ್ಡಮ್ಮನ ಮನೆಗೆ ಹೋಗಿ ಮರುದಿನ ಬೆಳಿಗ್ಗೆ ದೋಣಿಯಲ್ಲಿ ವಾಪಾಸು ನಗರ ಬಸ್ ನಿಲ್ದಾಣಕ್ಕೆ ತಲುಪಿ ಅಲ್ಲಿಂದ ಬಸ್ಸಿನಲ್ಲಿ ತೀರ್ಥಳ್ಳಿ ತಲುಪಿ ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಆಗುಂಬೆ ತಲುಪಿದ್ದೆವು ಅಲ್ಲಿಂದ ಆಗುಂಬೆ ಘಾಟಿಗೆ ಮೀಸಲಿಟ್ಟ ವಿಶೇಷ ವಿನ್ಯಾಸದ ಬಸ್ಸು ಅಲ್ಲ ವ್ಯಾನು ಅಲ್ಲ ಎಂಬಂತ ಆ ಕಾಲದ ವಾಹನದಲ್ಲಿ ಆಗುಂಬೆ ಘಾಟಿ ಇಳಿದು ಧರ್ಮಸ್ಥಳ ಹೋಗಿದ್ದು ನೆನಪು ಆಗ ನನ್ನ ವಯಸ್ಸು 4 ಮತ್ತು 5 ರ ಮಧ್ಯದ್ದು.
ಆಗುಂಬೆ ಮೇಲೆ ಮತ್ತು ಕೆಳಗಿನ ಸೋಮೇಶ್ವರದಲ್ಲಿ ಕೊಂಕಣಿ ಮತ್ತು ತುಳು ಮಾತಾಡುವ ಗೌಡ ಸಾರಸ್ವತ ಬಸ್ ಏಜೆಂಟರದ್ದೇ ಮಾನಾಪಲ್ಲಿ ಆಗಿತ್ತು.
ಚಾರ್ ಕೋಲ್ ಇಂಜಿನ್ ಕಾಲ ಮುಗಿದು ಪೆಟ್ರೋಲ್ ಡಿಸೇಲ್ ಇಂಜಿನ್ ಪ್ರಾರಂಭವಾಗಿತ್ತು ಆಗಿನ CKMS (ಸೆಂಟ್ರಲ್ ಕನಾ೯ಟಕ ಮೋಟಾರ್ ಸರ್ವಿಸ್) ಬಸ್ಸಿನ ಪೋಟೋ ಲಗತ್ತಿಸಿದೆ ಇಂತಹ ಬಸ್ಸುಗಳು ನಾಕಾರು ಆಗುಂಬೆ ಘಾಟಿಯ ಮೇಲಿಂದ ಪ್ರಯಾಣಿಕರನ್ನು ಘಾಟಿ ಕೆಳಗಿನ ಸೋಮೇಶ್ವರದಲ್ಲಿ ಇಳಿಸಿ ಅಲ್ಲಿಂದ ಘಟ್ಟ ಹತ್ತುವವರನ್ನ ಆಗುಂಬೆಗೆ ತಂದು ಬಿಡುವ ಕೆಲಸ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡುತ್ತಿದ್ದವು.
ಮೊದಲೇ ಏಜೆಂಟರಿಂದ ಟಿಕೆಟ್ ಖರೀದಿಸಿ ಪ್ರಯಾಣದ ಸರತಿಗೆ ಕಾಯಬೇಕಾಗಿತ್ತು, ಆಗಿನ ಬಸ್ ಏಜೆಂಟರ ವರ್ತನೆ ಗ್ರಾಹಕ ಸ್ನೇಹಿ ಆಗಿರಲಿಲ್ಲ, ಒರಟು ಮಾತು ಮತ್ತು ನಡತೆ ಮುಗ್ದ ಪ್ರಯಾಣಿಕರಿಗೆ ಹಿಂಸೆ ಮತ್ತು ಅವಮಾನಗೊಳಿಸುತ್ತಿದ್ದರೂ ಅನಿವಾರ್ಯವಾಗಿ ಪ್ರಯಾಣಿಕರು ಅನುಭವಿಸಬೇಕಾಗಿತ್ತು.
ಅರ್ದ ದಿನ ಆಗುಂಬೆ ಘಾಟಿ ಇಳಿಯಲು ಪ್ರಯಾಣಿಕರು ಕಾಯ ಬೇಕಾಗಿತ್ತು ಅದೇ ರೀತಿ ಘಾಟಿ ಹತ್ತುವವರು ಕೂಡ.
ಆ ದಿನಗಳಲ್ಲಿ ಘಟ್ಟ ಹತ್ತುವವರು ಇಳಿಯುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಆದರೆ ಅವರನ್ನು ಸಾಗಾಣಿಕೆ ಮಾಡುವ ಬಸ್ಸುಗಳ ಸಂಖ್ಯೆ ಕಡಿಮೆ ಮತ್ತು ಏಕ ಮುಖ ಸಂಚಾರ ಒಂದು ಬಸ್ಸು ಆಗುಂಬೆಯಿಂದ ಘಾಟಿ ಇಳಿದ ಮೇಲೆ ಅಲ್ಲಿನ ಬಸ್ಸು ಆಗುಂಬೆ ಘಾಟಿ ಎರಬೇಕು ಆಗಿನ ರಸ್ತೆ ಅಷ್ಟು ಸಣ್ಣದು ಆಗಿತ್ತು.
ಚೋಮನ ದುಡಿ ಸಿನಿಮಾದಲ್ಲಿ ಚೋಮನ ಮಕ್ಕಳು ಆಗುಂಬೆ ಘಾಟಿ ಇಂತಹ ಬಸ್ಸಿನಲ್ಲಿ ಹತ್ತುವ ದೃಶ್ಯವು ಇದೆ, ಕೂಲಿ ಕಾರ್ಮಿಕರ ಜೊತೆ ಇತರ ಪ್ರಯಾಣಿಕರು ಪ್ರಯಾಣಿಸಲು ಇಷ್ಟ ಪಡದ ಕಾಲ ಅಂದಿನದ್ದು.
ಇದರ ಮಧ್ಯದಲ್ಲಿ ಪ್ರತಿಷ್ಟಿತರಿಗೆ - ಏಜೆಂಟರ ಮರ್ಜಿಗೆ ಸರತಿಗಾಗಿ ಕಾಯುವವರನ್ನ ಕಡೆಗಾಣಿಸಲಾಗುತ್ತಿತ್ತು ಅಲ್ಲಿ ಮೇಲ್ಜಾತಿ ಕೆಳಜಾತಿಗಳ ತಾರತಮ್ಯ, ಶ್ರೀಮಂತರು ಮತ್ತು ಬಡವರೆಂಬ ಅಂತಸ್ತುಗಳ ತಾರತಮ್ಯವೂ ಇತ್ತು.
ಲಗೇಜುಗಳ ಜೊತೆ ಆಗುಂಬೆ ಪ್ರಯಾಣ ಪ್ರಾಯಾಸದ ಜಂಜಾಟದ ಪ್ರಯಾಣ ಆಗಿರುತ್ತಿತ್ತು.
ಈಗ ಆದುನಿಕ ವಾಹನಗಳು ಮತ್ತು ವಿಸ್ತಾರವಾದ ಆಗುಂಬೆ ಘಾಟಿಯಲ್ಲಿ ಕೇವಲ 10 ನಿಮಿಷದಲ್ಲಿ ಆಗುಂಬೆ ಘಾಟಿ ಪ್ರಯಾಣ ಮುಗಿಯುತ್ತದೆ.
ಕೇವಲ 50 ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ.
Comments
Post a Comment