Blog number 2048. World Organisation of Writer ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಮಮತಾ ಜಿ. ಸಾಗರ್ ಸಾಗರದ ಪ್ರತಿಷ್ಟಿತ ನಿರ್ಮಲಾ ಗರ್ಲ್ಸ್ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದವರು ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಸಾಗರ ಪೇಟೆಯ ಮೊದಲ ಖಾಸಾಗಿ ಮಹಿಳಾ ವೈದ್ಯರು.
#WOW_ಜಾಗತಿಕ_ಸಾಹಿತ್ಯ_ಪ್ರಶಸ್ತಿ
#ಸ್ವೀಕರಿಸಿದ_ಮಮತಾ_ಜಿ_ಸಾಗರ್
#ಇವರ_ತಾಯಿ_ಡಾಕ್ಟರ್_ಶೇಖರಿಬಾಯಿ_ಸಾಗರದ_ಮೊದಲ_ಖಾಸಾಗಿ_ಮಹಿಳಾವೈದ್ಯರು
#ಕವಿಯಿತ್ರಿ_ಮಮತಾ_ಜಿ_ಸಾಗರ್_ಸಾಗರದ_ನಿರ್ಮಲಾ_ಹೈಸ್ಕೂಲ್_ವಿದ್ಯಾರ್ಥಿನಿ_ಆಗಿದ್ದವರು.
ಜಗತ್ತಿನ ಬರಹಗಾರರ ಕ್ರಿಯಾಶೀಲ ಪ್ರಯತ್ನಗಳನ್ನು ಕಲೆ ಹಾಕುವ ಉದ್ದೇಶದಿಂದ ಸಾಹಿತಿಗಳ ಜಾಗತಿಕ ಸಂಘಟನೆ (WOW) ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಈ ಜಾಗತಿಕ ಸಾಹಿತ್ಯ ಪ್ರಶಸ್ತಿ ಭಾರತೀಯ ಕವಿಯಿತ್ರಿ ಕನಾ೯ಟಕದ ಮಮತಾ ಜಿ.ಸಾಗರ್ ಅವರಿಗೆ ದಿನಾಂಕ 6-ಏಪ್ರಿಲ್- 2024ರಂದು ನೈಜಿರಿಯಾದ ಅಬುಜದಲ್ಲಿ ಪ್ರದಾನ ಮಾಡಲಾಗಿದೆ.
ಕಾವ್ಯ ಸಂಜೆ ಎಂಬ ಸಂಘಟನೆ ಮೂಲಕ ನಿರಂತರ ಕನ್ನಡದ ಕವಿ-ಕಾವ್ಯ- ಸಂವಾದ ಕಳೆದ 10 ವರ್ಷದಿಂದ ನಡೆಸುತ್ತಿರುವ ಮಮತಾ ಜಿ.ಸಾಗರ್ ಅವರು ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ ಪಡೆದಿದ್ದಾರೆ.
ಸಾಹಿತ್ಯಕ್ಕಾಗಿ ಕೇಂದ್ರ ಸರ್ಕಾರದ ಜ್ಯೂನಿಯರ್ ಪೆಲೋಶಿಪ್ ಇವರಿಗೆ ದೊರೆತಿದೆ.
ಇವರ ತಾಯಿ ಡಾಕ್ಟರ್ ಶೇಖರಿಬಾಯಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಪೇಟೆಯ ಚಾಮರಾಜಪೇಟೆಯಲ್ಲಿ ಖಾಸಾಗಿ ವೈದ್ಯಕೀಯ ಕ್ಲೀನೀಕ್ ನಡೆಸುತ್ತಿದ್ದರು.
ಆ ಕಾಲದಲ್ಲಿ ಸಾಗರ ಪೇಟೆಯಲ್ಲಿ ಐತಾಳ್ ಡಾಕ್ಟರ್, ಕೊಳ್ಕೆಬೈಲ್ ಡಾಕ್ಟರ್, ಶ್ರೀಪಾದ ರಾವ್ ಡಾಕ್ಟರ್, ಕೋಳಿವಾಡ ಡಾಕ್ಟರ್, ಮೋಹನದಾಸ್ ಡಾಕ್ಟರ್, ಪೈ ಡಾಕ್ಟರ್ ಗಳ ಮಧ್ಯದಲ್ಲಿ ಶೇಖರಿ ಬಾಯಿ ಡಾಕ್ಟರ್ ಏಕೈಕ ಮಹಿಳಾ ವೈದ್ಯರಾಗಿದ್ದರು ಮತ್ತು ಪ್ರಸಿದ್ದರಾಗಿದ್ದರು ಇವರೇ ಈಗಿನ ಜಾಗತಿಕ ಪ್ರಶಸ್ತಿಗೆ ಬಾಜನರಾದ ಮಮತಾ ಜಿ.ಸಾಗರ್ ತಾಯಿ, ತಂದೆ ಎನ್. ಗಿರಿರಾಜ್.
ಇವರಿಗೆ ನೀಡಲಾದ ಜಾಗತಿಕ ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡಿದ ಕಾರ್ಯಕ್ರಮ ಫ್ಯಾನ್ ಆಫ್ರಿಕನ್ ಕಂಟ್ರೀಸ್, ಅಸೋಸಿಯೇಷನ್ ಆಫ್ ರೈಟರ್ಸ್ ಅಸೆಂಬ್ಲಿ ಆಪ್ ಯುರೋಪಿಯನ್ ಪೀಪಲ್ಸ್ ಮತ್ತು ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಆಯೋಜಿಸಿತ್ತು.
Thanks for this wonderful introduction. With regards,
ReplyDeleteMamta Sagar