#ಕೋಲಾರ_ಜಿಲ್ಲೆಯ_ಚಾಣಕ್ಷ_ಕೊತ್ತೂರು_ಮಂಜುನಾಥ್
#ಕೋಲಾರ_ಜಿಲ್ಲೆಯ_ರಾಜಕಾರಣವನ್ನೆ_ಬದಲಿಸಿದವರು
#ಈ_ಬಾರಿ_ಯಾರು_ಕೋಲಾರದಿಂದ_ಲೋಕಸಭೆಗೆ?
ಕೋಲಾರ ರಾಜಕಾರಣದ ಬೆಂಕಿ ಚೆಂಡು ಕೊತ್ತೂರು ಮಂಜುನಾಥ ಸ್ವತಃ ಸ್ವರ್ಧಿಸಿ ಗೆಲುವುದು ಮಾತ್ರ ಅಲ್ಲ ಅವರು ಯಾರನ್ನಾದರು ಕರೆತಂದು ನಿಲ್ಲಿಸಿದರೂ ಅವರನ್ನೂ ಗೆಲ್ಲಿಸುತ್ತಾರೆ ಅದಕ್ಕೆ ಉದಾಹರಣೆ ಮುಳಬಾಗಿಲಿನಲ್ಲಿ ಹೆಚ್. ನಾಗೇಶ್ ಶಾಸಕರಾಗಿ ಮಂತ್ರಿ ಆಗಿದ್ದು.
ಇದೇ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್.ಮುನಿಯಪ್ಪ ಎಂಬ ಬೆಂಗಳೂರಿನ ಕಾರ್ಪೊರೇಟರ್ ಕರೆತಂದು ಕೊಲಾರದಲ್ಲಿ ಬಿಜೆಪಿಯಿಂದ ನಿಲ್ಲಿಸಿ ಕಾಂಗ್ರೇಸ್ ಮಾಜಿ ಕೇಂದ್ರ ಮಂತ್ರಿ ಕೆ. ಹೆಚ್. ಮುನಿಯಪ್ಪರನ್ನ ಸೋಲಿಸಿದ್ದು,
ಆದರೆ ಹೆಚ್. ನಾಗೇಶ್ ಮತ್ತು ಎಸ್. ಮುನಿಯಪ್ಪ ಕೊತ್ತೂರು ಮಂಜುನಾಥರ ಬದ್ದ ವಿರೋದಿಗಳಾಗಿ ಬದಲಾಗಿದ್ದು ದೊಡ್ಡ ವಿಶ್ವಾಸ ದ್ರೋಹ ಆದ್ದರಿಂದ ಹೆಚ್. ನಾಗೇಶ್ ಗೆ ಯಾವುದೇ ಅವಕಾಶ ಸಿಗಲಿಲ್ಲ,ಸಿಗದಂತೆ ಕೊತ್ತೂರು ಮಂಜುನಾಥ್ ನೋಡಿಕೊಂಡರೆಂದು ಸುದ್ದಿ ಆಯಿತು.
ಕಳೆದ ವರ್ಷದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನ ಕೋಲಾರದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಕೊತ್ತೂರು ಮಂಜುನಾಥ್ ಆಹ್ವಾನಿಸಿದ್ದರು ಆದರೆ ಸಿದ್ದರಾಮಯ್ಯ ಮನಸು ಮಾಡಲಿಲ್ಲ ಆದರೆ ಅದೇ ಕ್ಷೇತ್ರದಿಂದ ಕೊತ್ತೂರು ಮಂಜುನಾಥ ಸ್ವತಃ ಸ್ವರ್ದಿಸಿ ಗೆದ್ದು ಬಂದರು, ಇವರನ್ನ ಮಂತ್ರಿ ಮಾಡಬೇಕಿತ್ತು ಆದರೆ ಮಾಜಿ ಕೇಂದ್ರದ ಮಂತ್ರಿ ಕೆ.ಹೆಚ್. ಮುನಿಯಪ್ಪರನ್ನ ಮಂತ್ರಿ ಮಾಡಿದರು.
ಈಗ ಕೋಲಾರ ಲೋಕ ಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಎಸ್. ಮುನಿಯಪ್ಪರಿಗೆ ಬಿಜೆಪಿಯಲ್ಲಿ ಸ್ವರ್ದಿಸಲು ಅವಕಾಶವೇ ಇಲ್ಲವಾಯಿತು ಈ ಕ್ಷೇತ್ರ NDA ಅಂಗ ಪಕ್ಷ ಜೆಡಿಎಸ್ ಪಡೆದುಕೊಂಡಿದೆ, ಇದೂ ಕೊತ್ತೂರು ಮಂಜುನಾಥರ ಒಳಹೊಡೆತ ಎನ್ನುತ್ತಾರೆ ಇದನ್ನು ಹಾಲಿ ಸಂಸದ ಎಸ್. ಮುನಿಯಪ್ಪ ನಿರೀಕ್ಷಿಸಿರಲಿಲ್ಲ.
ಕೋಲಾರದಿಂದ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ರಾಜ್ಯ ಮಂತ್ರಿ ಕೆ. ಹೆಚ್. ಮುನಿಯಪ್ಪ ಕಾಂಗ್ರೆಸ್ಸಿನಿಂದ ಸ್ಪರ್ದಿಸಿದ್ದಾರೆ ಆದರೆ ಕೊತ್ತೂರು ಮಂಜುನಾಥ್ ರ ಅಜನ್ಮ ಶತ್ರು ಕೆ.ಹೆಚ್.ಮುನಿಯಪ್ಪರ ಗೆಲುವು ಸುಲಭವಾ? ...
ಇದಕ್ಕೆ ಕಾರಣ ಆಗಿರುವ ಘಟನಾವಳಿಗಳನ್ನು ನಾನು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬರೆದ ಅಂಕಣದಲ್ಲಿ ಓದಬಹುದು
#ರಾಜಕಾರಣದ_ಒಳಗುಟ್ಟು
#ಲೋಕಸಭಾ_ಚುನಾವಣಾ_ಅಂಕಣ
#ಭಾಗ_16.
ಕೋಲಾರ ಜಿಲ್ಲೆಯ ರಾಜಕಾರಣ ಬದಲಾಯಿಸಲಿರುವ ಕೊತ್ತೂರು ಮಂಜುನಾಥ್ ಎಂಬ ರಾಜಕಾರಣದ ಬೆಂಕಿ ಚೆಂಡು.
ಈ ಸಾರಿ ಕೋಲಾರದ ಲೋಕಸಭಾ ಚುನಾವಣೆಯಲ್ಲಿ 7 ನೇ ಬಾರಿ ಸಂಸದರಾಗುವ ಅವಕಾಶ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪರಿಗೆ ಅಷ್ಟು ಸುಲಭವಾಗಿಲ್ಲ.
ಇವರ ಎದುರು ದಿಡೀರ್ ಆಗಿ ಬಿಜೆಪಿಯಿಂದ ಬೆಂಗಳೂರಿನ ಕಾಪೊ೯ರೇಟರ್ S. ಮುನಿಸ್ವಾಮಿಯವರನ್ನ ನಿಲ್ಲಿಸಲಾಗಿದೆ.
ಕಾಂಗ್ರೇಸ್ ನವರು ಮೈತ್ರಿ ದಮ೯ ಮುರಿದಿದ್ದಾರೆ, ಇದಕ್ಕೆ ದೀಘ೯ವಾದ ಇತಿಹಾಸವು ಇದೆ.
ಕೆ.ಹೆಚ್.ಮುನಿಯಪ್ಪ ಸತತ ಲೋಕಸಭೆಗೆ ಮೀಸಲು ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು ಆದರೆ ಇಡೀ ಜಿಲ್ಲೆಯಲ್ಲಿ ಬೇರಾರನ್ನು ಬೆಳೆಸಿದವರಲ್ಲ, ಸ್ವಂತ ಆಹ೯ತೆಯಿಂದ ಕಾಂಗ್ರೇಸ್ ರಾಜಕಾರಣದಲ್ಲಿ ಬೆಳೆದರೆ ಅವರ ರಾಜಕೀಯ ಜೀವನ ಮುಗಿಸುವ ತನಕ ವಿರಮಿಸದ ದುಷ್ಟ ರಾಜಕಾರಣ ಇವರದ್ದು.
2013 ರಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರ ( ಮೀಸಲು ಕ್ಷೇತ್ರ)ದಿಂದ ಕಾಂಗ್ರೇಸ್ನಿಂದ ಸ್ಪದಿ೯ಸಲು ಕೊತ್ತುರು ಮಂಜುನಾಥ ಇಡೀ ಕ್ಷೇತ್ರ ಸ೦ಘಟನೆ ಮಾಡುತ್ತಾರೆ, ಅವರ ಸಂಘಟನಾ ಚತುರತೆ, ಜನಪ್ರಿಯತೆ ನೋಡಿದವರು ಮುನಿಯಪ್ಪರಿಗೆ ಚಾಡಿ ಚುಚ್ಚುತ್ತಾರೆ, ಮOಜುನಾಥಗೆ ಮುಳಬಾಗಿಲಿಂದ ಕಾಂಗ್ರೇಸ್ ನಿಂದ ಶಾಸಕನಾಗಿ ಮಾಡಿದರೆ ಮುಂದೆ ಅವರು ನಿಮ್ಮ ಲೋಕಸಭಾ ಸ್ಥಾನಕ್ಕೆ ಚ್ಯುತಿ ತರುತ್ತಾರೆ ಅಂತ, ಇದರಿಂದ ಮಂಜುನಾಥಗೆ ಕಾಂಗ್ರೇಸ್ ಟಿಕೇಟ್ ಸಿಗದಂತೆ ಮಾಡುತ್ತಾರೆ.
ಇದನ್ನ ಸವಾಲಾಗಿ ಸ್ವೀಕರಿಸಿದ ಕೊತ್ತುರು ಮಂಜುನಾಥ ಪಕ್ಷೇತರ ಸ್ಪದೆ೯ ಮಾಡಿ ಎಲ್ಲಾ ರಾಷ್ಟ್ರಿಯ ಪಕ್ಷಗಳ ಠೇವಣಿ ಇಲ್ಲದಂತೆ ಮಾಡಿದರು,2015ರಲ್ಲಿ ಪುನಃ ಮುಖ್ಯಮಂತ್ರಿ ಸಿದ್ದರಾಮಯ್ಯರ ಒತ್ತಾಯಕ್ಕೆ ಕಾಂಗ್ರೇಸ್ ಸೇರುತ್ತಾರೆ.
ಇವರನ್ನ ಸಂಪೂಣ೯ ರಾಜಕೀಯದಿಂದ ತೆಗೆಯುವ ಪ್ರಯತ್ನದಲ್ಲಿ ವಿಪಲರಾದ ವಿರೋದಿಗಳು ಇವರ ಜಾತಿ ದೃಡೀಕರಣದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತಾರೆ, ಬುಡಗ ಜಂಗಮ ಜಾತಿಯವರಲ್ಲ ಎಂದು ವಾದಿಸುತ್ತಾರೆ.
2018ರಲ್ಲಿ ಇವರು ಕಾಂಗ್ರೇಸ್ ಅಧಿಕೃತ ಅಭ್ಯಥಿ೯ ಆಗಿ ನಾಮ ಪತ್ರ ಸಲ್ಲಿಸಿದಾಗ ಜೆಡಿಎಸ್ ಅಭ್ಯಥಿ೯ ನಾಮಪತ್ರ ಪರಿಶೀಲನೆಯಲ್ಲಿ ಆಕ್ಷೇಪಿಸುತ್ತಾರೆ, ಹಿಂದಿನ ಹೈ ಕೊಟ್೯ ಆದೇಶ ಮಂಡಿಸುತ್ತಾರೆ ಇವರ ನಾಮಪತ್ರ ರದ್ದಾಗುತ್ತದೆ.
ಇದೆಲ್ಲದರ ತೆರೆಮರೆಯ ರೂವಾರಿ ಸಂಸದ ಮುನಿಯಪ್ಪ ತಮ್ಮ ಮಗಳು ನಂದಿನಿಯವರನ್ನ ಇಲ್ಲಿ ಪಕ್ಷೇತರ ಅಭ್ಯಥಿ೯ ಆಗಿ ನಾಮ ಪತ್ರ ಸಲ್ಲಿಸಿರುತ್ತಾರೆ, ಇವರ ನಾಮ ಪತ್ರ ರದ್ದಾಗಿದ್ದರಿಂದ ಕಾಂಗ್ರೇಸ್ ಪಕ್ಷ ತನ್ನ ಮಗಳಿಗೆ ಅವಕಾಶ ನೀಡುತ್ತೆ ಎಂಬ ಅವರ ನಂಬಿಕೆ ಹುಸಿ ಆಗುತ್ತೆ ಏಕೆಂದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೊತ್ತೂರು ಮಂಜುನಾಥ ಯಾರನ್ನ ಹೇಳುತ್ತಾರೋ ಅವರನ್ನ ಪಕ್ಷ ಬೆಂಬಲಿಸುತ್ತದೆ ಎನ್ನುತ್ತಾರೆ.
ಕೊತ್ತೂರು ಮಂಜುನಾಥ್ ತಮ್ಮ ಗೆಳೆಯ H.ನಾಗೇಶ್ ರನ್ನ ಕರೆತಂದು ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸುತ್ತಾರೆ, ರಾಜ್ಯದಲ್ಲಿ ಕಾಂಗ್ರೇಸ್ ಬಹುಮತ ಕಳೆದುಕೊಳ್ಳುವುದು ಗೊತ್ತಾಗಿ ಡಿ.ಕೆ. ಶಿವಕುಮಾರ್ ನಾಗೇಶ್ ರನ್ನ ಮಂತ್ರಿ ಮಾಡುವುದಾಗಿ ಕೊತ್ತುರು ಮಂಜುನಾಥರಿಗೆ ಭರವಸೆ ನೀಡಿ ಕೌಂಟಿ0ಗ್ ಮುಗಿಯುವ ಮೊದಲೆ ಅವರ ಕಾರಿನಲ್ಲಿ ಕರೆದೊಯ್ಯುತ್ತಾರೆ ನಂತರ JDS ಹೊಂದಾಣಿಕೆ ಆದಾಗ H. ನಾಗೇಶ್ ಗೆ ಮತ್ತು ರಮೇಶ್ ಕುಮಾರ್ ಗೆ ಮಂತ್ರಿ ಸ್ಥಾನ ಸಿಗದ೦ತೆ ವಿರೋದಿಗಳು ಯಶಸ್ವಿ ಆಗುತ್ತಾರೆ.
ಹಾಗಾಗಿ ಈ ಬಾರಿ ಕೊತ್ತುರು ಮಂಜುನಾಥ,ಸ್ಪೀಕರ್ ರಮೇಶ್ ಕುಮಾರ್ ಮತ್ತು ಕೋಲಾರದ ಮುಖ೦ಡರೆಲ್ಲ ಸೇರಿ ದೆಹಲಿಗೆ ಹೋಗಿ ರಾಹುಲ್ ಗಾಂಧಿಗೆ ಮುನಿಯಪ್ಪರ ಬದಲು ಬೇರಾರನ್ನಾದರೂ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ ಅಂದಿದ್ದರು ಈ ಹಂತದಲ್ಲಿ ದೇವೇಗೌಡರ ಬೆಂಬಲದಿಂದ ಮುನಿಯಪ್ಪ ಪುನಃ ಕಾಂಗ್ರೇಸ್ ಅಭ್ಯಥಿ೯ ಆದರು ಇದರಿಂದ ಕೊತ್ತುರು ಮಂಜುನಾಥ ಯಡೂರಪ್ಪರ ಮುಖಾಂತರ ಅಮಿತ್ ಶಾಹರನ್ನ ಒಪ್ಪಿಸಿ ಬೆಂಗಳೂರಿನ ಕಾರ್ಪೋರೇಟರ್ S. ಮುನಿಸ್ವಾಮಿಯವರನ್ನ ಕರೆತಂದು ಬಿಜೆಪಿಯಿಂದ ಅಭ್ಯಥಿ೯ ಮಾಡಿ ಚುನಾವಣೆ ಮುಗಿಸಿದ್ದಾರೆ.
ಗುಪ್ತಚಾರ ವರದಿ ಕಾಂಗ್ರೇಸ್ ಮಾಜಿ ಮಂತ್ರಿ ಕೆ. ಹೆಚ್.ಮುನಿಯಪ್ಪರ ಗೆಲುವ ಕಷ್ಟ ಅನ್ನುತ್ತಿದೆ, ಈವರೆಗೆ ತುಳಿಸಿಕೊಂಡವರೆಲ್ಲ ಮುನಿಯಪ್ಪರನ್ನ ಎದುರಿಸಲಾರದೆ ಬದಿಗೆ ಸರಿದವರು ಕೊತ್ತುರು ಮಂಜುನಾಥ್ ಎಂಬ ಬೆಂಕಿ ಚೆಂಡಿನಂತ ಯುವ ಸ೦ಘಟಕ ಕೆ.ಹೆಚ್. ಮುನಿಯಪ್ಪರನ್ನ ನೇರವಾಗಿ ಎದುರಿಸಿ ನಿಂತಿದ್ದರಿಂದ ಎಲ್ಲರೂ ಒಂದಾಗಿ ಕೆ ಹೆಚ್.ಮುನಿಯಪ್ಪರ ಸೋಲಿಗೆ ಕೈ ಜೋಡಿಸಿದ್ದಾರೆ.
ಪಲಿತಾಂಶ ಏನೇ ಆಗಲಿ ಕೋಲಾರ ಜಿಲ್ಲೆಯ ರಾಜಕಾರಣ ಮುಂದಿನ ದಿನದಲ್ಲಿ ಬದಲಾಗಲಿದೆ.
Comments
Post a Comment