#ಮಳೆ_ಬಂತು_ಮಳೆ
#ಕೊಡೆ_ಹಿಡಿದು_ನಡೆ
#ಇವತ್ತು_ಸೂರ್ಯೋದಯಕ್ಕೆ_ಮುಂಚಿತವಾಗಿ_ಗುಡುಗು_ಸಿಡಿಲಿನ_ಮಳೆ
#ಇದು_ನಮ್ಮ_ಊರಲ್ಲಿ_ಈ_ವರ್ಷದ_ಆರನೆ_ಮುಂಗಾರು_ಪೂರ್ವ_ಮಳೆ
#ಏಳು_ತಿಂಗಳ_ನಂತರ_ಬಿಚ್ಚಿದ_ಕೊಡೆ
#ಮುಂದಿನ_ಹತ್ತು_ವರ್ಷದಲ್ಲಿ_ನಮ್ಮ_ಊರು_ಅರೆ_ಮಲೆನಾಡು_ಅಥವ_ಬಯಲು_ಸೀಮೆ_ಆದೀತು.
https://youtu.be/KYT1NWHtMOo?feature=shared
ಬೆಳಿಗ್ಗೆ 5 ಕ್ಕೆ ಪಳ್ಳ್ ಎಂದು ಮಿಂಚಿದ ಪ್ರಖರ ಬೆಳಕಿನ ಹಿಂದೆಯೇ ದೊಡ್ಡ ಸಿಡಿಲಿನ ಶಬ್ದ ಇಲ್ಲೇ ಸಮೀಪದಲ್ಲಿ ಸಿಡಿಲು ಸಂಭವಿಸಿದ ಸಾಕ್ಷಿ ನನ್ನ ಸೆಲ್ ಫೋನಿನ ಆಕ್ಯೂವೆದರ್ ಆ್ಯಪ್ ನೋಡಿದರೆ ಮಳೆಯ ಸೂಚನೆ ಇಲ್ಲ ಅಷ್ಟರಲ್ಲಿ ಸಣ್ಣಗೆ ಬೀಳಲು ಪ್ರಾರಂಬಿಸಿದ ಮಳೆ ಹನಿಗಳು ನಿರಂತರವಾಗಿ ಬೆಳಗಿನ 8 ಗಂಟೆವರೆಗೆ ಬೀಳುತ್ತಲೇ ಇತ್ತು.
ಇದು ಈ ವರ್ಷದ ಪೂರ್ವ ಮುಂಗಾರಿನ ಆರನೇ ಮಳೆ ಮೊದಲಿನ ಮಳೆ ಹೂಮಳೆ ಅದರಿಂದ ಭೂಮಿ ತಣ್ಣಗಾಗಲಿಲ್ಲ ನಂತರದ ಐದು ಮಳೆ ಇಳೆ ತಂಪಾಗಿಸಿದೆ.
ಮಲೆನಾಡಿಗರು ಈ ವರ್ಷದ ಪೂರ್ವ ಮುಂಗಾರು ಸಂಭ್ರಮಿಸಲು ಕಾರಣ ಕಳೆದ ಅಕ್ಟೋಬರ್ ನಿಂದ ಇವತ್ತಿನವರೆಗೆ ಏಳು ತಿಂಗಳಿಂದ ಮಳೆ ನೋಡಿಲ್ಲ, ಕೃಷಿ ತೋಟಗಾರಿಕೆಗೆ ನೀರಿನ ಕೊರತೆ ಆಗಿದೆ, ಬೋರ್ ವೆಲ್ ಗಳೇ ಕೈ ಚೆಲ್ಲಿದೆ, ಹವಾಮಾನದ ಉಷ್ಣಾಂಶ ಅತಿ ಹೆಚ್ಚು (43.9) ದಾಖಲಾಗಿದೆ ಆದ್ದರಿಂದ ಈ ಪೂರ್ವ ಮುಂಗಾರಿನ ಸಂಪ್ರದಾಯಿಕ ಮಳೆಗೆ ಮಲೆನಾಡಿಗರು ಪುಳಕಿತರಾಗಿ ಸಂಭ್ರಮಿಸುತ್ತಿದ್ದಾರೆ.
ನನ್ನ ಮತ್ತು ಶಂಭೂರಾಮನ ವಾಕಿಂಗ್ ತಡವಾಗಿ ಪ್ರಾರಂಬಿಸಿದರೂ ಮಳೆ ನಿಲ್ಲಲೇ ಇಲ್ಲ, ನಾನು ಮಳೆಗಾಗಿ ಛತ್ರಿ ಬಿಚ್ಚಿಕೊಂಡೆ ಅರ್ದ ಗಂಟೆ ನಂತರ ಮಳೆ ನೀರಲ್ಲಿ ತೊಯ್ದ ಶಂಭೂರಾಮನ ಮನೆಗೆ ಬಿಟ್ಟು ಒಂದು ಗಂಟೆಯ ವಾಕಿಂಗ್ ಮುಗಿಸಿದಾಗ ಮಳೆಗಾಲದ ವಾಕಿಂಗ್ ನಂತೆ ಅನುಭವ ಪಟ್ಟೆ.
ನಮ್ಮ ಊರಿನ ಪೂರ್ವ ಭಾಗಕ್ಕೆ 10 ಕಿಮಿ ಕ್ರಮಿಸಿದರೆ ಅಲ್ಲಿ ಮಳೆ ತುಂಬಾ ಕಡಿಮೆ, ಬಯಲು ಸೀಮೆ ವೇಗವಾಗಿ ಪಶ್ಚಿಮಕ್ಕೆ ಸಾಗುತ್ತಿದೆ ಮುಂದಿನ 10 ವರ್ಷದಲ್ಲಿ ಆನಂದಪುರಂ ಬಯಲು ಸೀಮೆ ಆಗಲಿದೆ.
Comments
Post a Comment