2058. ರಾಣಿ ಚೆನ್ನಬೈರಾದೇವಿ ವಂಶಸ್ತರೂ ಆದ ಸಾಗರ ತಾಲೂಕಿನ ಹೆನ್ನೆಯ ಲೋಕರಾಜ ಜೈನರು ಜೈನ ಧರ್ಮದ ಇತಿಹಾಸದ ಚಿನ್ನದ ಗಣಿ ಆಗಿದ್ದಾರೆ.
#ಲೋಕರಾಜ_ಜೈನರು_ಜೈನ_ಇತಿಹಾಸದ_ಚಿನ್ನದ_ಗಣಿ
#ನಮ್ಮ_ಸಾಗರ_ತಾಲ್ಲೂಕಿನ_ಶರಾವತಿ_ತಟದ_ಹೆನ್ನೆ_ಊರಿನವರು
#ಬ್ಯಾಕೋಡಿನಲ್ಲಿ_ಉಪನ್ಯಾಸಕರು
#ಜೈನ_ದರ್ಮದ_ಬಗ್ಗೆ_ಆಚರಣೆ_ಬಗ್ಗೆ
#ಜೈನ_ಶಿಲ್ಪಶಾಸ್ತ್ರದ_ಬಗ್ಗೆ
#ಕಾಳುಮೆಣಸಿನ_ರಾಣಿ_ಎಂದೇ_ಪ್ರಖ್ಯಾತಳಾದ_ರಾಣಿಚೆನ್ನಬೈರಾದೇವಿ_ಬಗ್ಗೆ
#ಇವರಷ್ಟು_ಓದು_ಸಂಶೋದನೆ_ಮಾಡಿದವರು_ಇದ್ದಾರ?
#ಇವರು_ರಾಣಿ_ಚೆನ್ನ_ಬೈರಾದೇವಿ_ವಂಶಸ್ತರೂ_ಹೌದು
#ಖ್ಯಾತ_ಚಲನ_ಚಿತ್ರ_ನಟ_ದೊಡ್ಡಣ್ಣ_ಇವರ_ಪೋನ್_ನಂಬರ್_ಪಡೆದು_ಅಭಿನಂದಿಸಿದ್ದಾರೆ.
#ನಮ್ಮ_ಊರಿಗೆ_ಬಂದಾಗ_ಲೋಕರಾಜಜೈನರ_ಬೇಟಿ_ಮಾಡುವವರಿದ್ದಾರೆ.
ದೊಡ್ಡಣ್ಣ ಕರುನಾಡಿನ ಪ್ರಖ್ಯಾತ ಚಲನ ಚಿತ್ರ ನಟರು ಅವರ ಹುಟ್ಟೂರು ಅರಸಿಕೆರೆ ಆದರೆ ಅವರ ಕಾರ್ಯಕ್ಷೇತ್ರ ಶಿವಮೊಗ್ಗ ಜಿಲ್ಲೆ.
#ದೊಡ್ಡಣ್ಣ ಕಲಾವಿದರು ಮಾತ್ರ ಅಲ್ಲ ಕಲಾ ಆರಾದಕರು ಅವರು ಚಲನ ಚಿತ್ರಕಲಾವಿದರ ಸಂಘದ ಅಧ್ಯಕ್ಷರಾಗಿ ಚಲನ ಚಿತ್ರಕಲಾವಿದರಿಗೆ ಸುಸಜ್ಜಿತ ಬೃಹತ್ ಚಲನ ಚಿತ್ರ ಕಲಾವಿದರ ಭವನ ನಿರ್ಮಿಸಲು ಹೆಚ್ಚು ಶ್ರಮಿಸಿದವರು.
ನನ್ನ ನಿತ್ಯದ ಲೇಖನ ಓದುವ ಪ್ರತಿಕ್ರಿಯಿಸುವ ಸಹೃದಯರಲ್ಲಿ ದೊಡ್ಡಣ್ಣ ಮೊದಲಿಗರು ನನ್ನ #ಆನಂದಪುರಂ_ಇತಿಹಾಸ ಪುಸ್ತಕದ ಎಲ್ಲಾ ಅಧ್ಯಾಯ ಓದಿದ್ದಾರೆ ಮತ್ತು ಪ್ರಕಟವಾಗಲಿರುವ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ನಿನ್ನೆ ರಾತ್ರಿ ಪೋನಾಯಿಸಿ ರಾಣಿ ಚೆನ್ನಬೈರಾದೇವಿ ಬಗ್ಗೆ #ಡಿಜಿಟಲ್_ಮಾಧ್ಯಮ ನಿತ್ಯ ಪ್ರಕಟಿಸುತ್ತಿರುವುದರಲ್ಲಿ ಜೈನ ಧರ್ಮದ ಬಗ್ಗೆ ಅದರ ಆಚರಣೆ ಬಗ್ಗೆ, ಜೈನ ಶಿಲ್ಪ ಶಾಸ್ತ್ರದ ಬಗ್ಗೆ ಮತ್ತು ಜೈನ ರಾಣಿ ಚೆನ್ನಬೈರಾದೇವಿ ಆಡಳಿತದ ಬಗ್ಗೆ ಹಾಗೂ ಅಳಿದುಳಿದ ಸ್ಮಾರಕ ಕೋಟೆ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡುತ್ತಿರುವ ಲೋಕರಾಜ ಜೈನರ ಬಗ್ಗೆ ವಿಚಾರಿಸಿದ್ದರು.
ಅವರ ಫೋನ್ ನಂಬರ್ ಪಡೆದಿದ್ದಾರೆ, ಅವರಿಗೆ ಅಭಿನಂದಿಸುತ್ತೇನೆ ಎಂದಿದ್ದಾರೆ ಮುಂದಿನ ಬಾರಿ ನನ್ನಲ್ಲಿಗೆ ಬರುವಾಗ ಲೋಕರಾಜ ಜೈನರನ್ನ ಕರೆಸಿ ಬೇಟಿ ಮಾಡಿಸಲು ತಿಳಿಸಿದ್ದಾರೆ.
ಲೋಕರಾಜ ಜೈನರು ಜೈನ ಧರ್ಮ-ಇತಿಹಾಸ - ಶಿಲಾಶಾಸನ - ಶಿಲ್ಪಶಾಸ್ತ್ರ - ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿ ಬಗ್ಗೆ ಹೆಚ್ಚಿನ ಓದು ಸಂಶೋದನೆಗಳನ್ನು ಮಾಡಿದವರು ಅವರು ಜೈನ ಇತಿಹಾಸದ ಚಿನ್ನದ ಗಣಿ ಎಂದೇ ಹೇಳಬಹುದು ಅಗೆದಷ್ಟೂ ಹೊರ ಬರುತ್ತಿದೆ ಅಮೂಲ್ಯವಾದ ಮಾಹಿತಿ ಭಂಡಾರ, ಇವರು ರಾಣಿ ಚೆನ್ನಬೈರಾದೇವಿ ವಂಶಸ್ತರೂ ಹೌದು
ಕನ್ನಡದ ಮಹಾನ್ ನಟರೋಬ್ಬರು ಕನ್ನಡದ ಇತಿಹಾಸದ ಎಲೆ ಮರೆಯ ಕಾಯಿಯಂತ ಸಂಶೋದಕನಿಗೆ ಈ ರೀತಿ ಪ್ರೋತ್ಸಾಹಿಸುವ ಮೂಲಕ ಕನ್ನಡಾಂಬೆಯ ಸೇವೆ ಮಾಡುತ್ತಿದ್ದಾರೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಲೋಕರಾಜ ಜೈನ್ ಅವರ ರಾಣಿ ಚೆನ್ನಬೈರಾದೇವಿ ಇತಿಹಾಸ ವಿವರಿಸುವ #ಡಿಜಿಟಲ್_ಮಾಧ್ಯಮದ ಇವತ್ತಿನ #ಜ್ವಾಲಾಮಾಲಿನಿ ಬಸದಿ ಎಪಿಸೋಡ್ ನೋಡ ಬಹುದು.
https://youtu.be/Rtz-NCMO61U?feature=shared
ಜೈನ ಇತಿಹಾಸ ಸಂಶೋಧಕ #ಲೋಕರಾಜಜೈನರನ್ನು ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಸಂಪರ್ಕಿಸಿ ಅಭಿನಂದಿಸ ಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯ ಬಹುದು
7337854916.
Comments
Post a Comment