Blog number 2042.ತೇಜಸ್ವಿ ಸ್ಕೂಟರ್ ಕಥೆ... ಒಂದು ಕಾಲದಲ್ಲಿ ಸ್ಕೂಟರ್ ಶ್ರೀಮಂತ ವರ್ಗದವರಿಗೆ ಮಾತ್ರ ವಾಹನ ಆಗಿತ್ತು.
#ಒಂದು_ಕಾಲದಲ್ಲಿ_ಶ್ರೀಮಂತರ_ವಾಹನ
#ಸ್ಕೂಟರ್_ಕಥೆಗಳು_ಅದರ_ಘನತೆ_ಇತ್ಯಾದಿ.
#ತೇಜಸ್ವಿ_ಅವರ_ಸ್ಕೂಟರ್_ಕಥೆಗಳು
#ಮೂಡಿಗೆರೆಯ_ತೇಜಸ್ವಿ_ಸ್ಕೂಟರ್_ಮೇಲೆ_ನಮ್ಮ_ಡಾಕ್ಟರ್_ಪ್ರೀತಮ್
50 ವರ್ಷದ ಹಿಂದೆ ಭಾರತದಲ್ಲಿ ಶ್ರೀಮಂತರಿಗೆ ಮಾತ್ರ ಸ್ಕೂಟರ್ ಹೊಂದುವ ಸಾಮರ್ಥ್ಯ ಮತ್ತು ಸ್ಕೂಟರ್ ಲಕ್ಸುರಿ & ಕಂಪರ್ಟ್ ಎಂಬ ಮನಸ್ಥಿತಿ ಆಗಿತ್ತು ಈಗ . . .
. . .
1970 ರ ದಶಕದಲ್ಲಿ ನಮ್ಮ ಊರಲ್ಲಿ ಸ್ಕೂಟರ್ ಹೊಂದಿದವರು ಮತ್ತು ಓಡಿಸುವವರು ಮೂರು ಮನೆಯವರು ಮಾತ್ರ ಒಬ್ಬರು ಆನಂದಪುರಂ ವಿಲೇಜ್ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲ ಗಂಗಾದರ ಗೌಡರು, ಇನ್ನೊಬ್ಬರು ಟಿಪ್ ಟಾಪ್ ಇಬ್ರಾಹಿಂ ಸಾಹೇಬರ ಕುಟುಂಬ ಮತ್ತು ಎಸ್.ಆರ್.ಎಸ್ ರೈಸ್ ಮಿಲ್ ಮಾಲಿಕರು ಮಾತ್ರ.
ಜನ ಸಂಚಾರ ಮತ್ತು ವಾಹನ ಸಂಚಾರವೇ ಇಲ್ಲದ ಆ ಕಾಲದ ರಸ್ತೆಯ ಮೇಲೆ ಈ ಸ್ಕೂಟರ್ ಬಂದರೆ ನಿಂತು ತಿರುಗಿ ನೋಡದ ವ್ಯಕ್ತಿಯೇ ಇರುತ್ತಿರಲಿಲ್ಲ.
ಸ್ಕೂಟರ್ ಆಡ೯ರ್ ಮಾಡಿ ಆರೇಳು ವರ್ಷ ಕಾಯಬೇಕು ಮತ್ತು ಸ್ಕೂಟರ್ ತಂದವರು ಹಾಗೇ ಮಾರಿದರೆ ಅರ್ಧಕ್ಕೂ ಹೆಚ್ಚು ಲಾಭಕ್ಕೆ ಖರೀದಿಸುವವರು ಇದ್ದಾರೆ, ಪಾರ್ಲಿಮೆಂಟ್ ಮೆಂಬರ್ ಅಥವ ಮಂತ್ರಿ ಮಹೋದಯರ ಶಿಪಾರಸ್ಸು ಇದ್ದರೆ ಬೇಗ ಸಿಗುವ ಸಾಧ್ಯತೆ ಬಗ್ಗೆ ಬಹು ಚಚೆ೯ ಆಗುತ್ತಿತ್ತು.
ನಂತರ ಡಾಲರ್ ನಲ್ಲಿ (ವಿದೇಶದಲ್ಲಿ ಕೆಲಸದಲ್ಲಿದ್ದವರು) ಬುಕ್ ಮಾಡಿದರೆ ತಕ್ಷಣ ಸಿಗುವ ಕಾಲವೂ ಬಂತು.
ನಂತರ ದೇಶದಲ್ಲಿ ಆಟೋ ಮೊಬೈಲ್ ನ ಮಾರಾಟ ಉತ್ಪಾದನೆಗಳು ಶೀಘ್ರ ಬದಲಾವಣೆಯಿಂದ ಇವತ್ತು ವಾರದ ಸಂತೆಯಲ್ಲೂ ರೈತರು ಬೆಳೆದು ಮಾರಾಟ ಮಾಡುವ ಕೊತ್ತುಂಬರಿ ಸೊಪ್ಪಿನಂತೆ ತರಹಾವಾರಿ ಸ್ಕೂಟರ್ ಬೈಕ್ ಗಳ ಪ್ರದರ್ಶನ - ಮಾರಾಟ ಮತ್ತು ಸ್ಥಳದಲ್ಲೇ ನಿಮ್ಮ ಹಳೇ ವಾಹನ ಬದಲಿಸಿ ಸಾಲದ ಕರಾರು ಮಾಡಿ ಹೊಸ ವಾಹನ ನೀಡುವ ಪದ್ಧತಿ ಬಂದಿದೆ.
ಪೂಣ೯ ಚಂದ್ರ ತೇಜಸ್ವಿಯವರ ಸ್ಕೂಟರ್ ಕಥೆ ಇನ್ನೂ ರೋಚಕ, ಅದರ ದುರಸ್ತಿ ಅದರ ಹಿಂದಿನ ಸೀಟಿಲ್ಲದ ಕಥೆ ಹೀಗೆ ಸ್ಕೂಟರ್ ಗಳು ಈ ಸ್ಕೂಟಿಯ ರೂಪಾಂತರವಾಗಿ ರಸ್ತೆಯಲ್ಲಿ ನೋಡಿದಾಗೆಲ್ಲ 50 ವರ್ಷ ಹಿಂದಿನ ಬಜಾಜ್,ವೆಸ್ಪಾ ಮತ್ತು ಲ್ಯಾ೦ಬಲೆಟಾ ಸ್ಕೂಟರ್ ನ ಹವಾ ನೆನಪಾಗುತ್ತದೆ.
Comments
Post a Comment