#ಭಾಗ_1.
#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರು.
#ನವೀನ್_ಕುಮಾರ್_ಪ್ರಜಾವಾಣಿ_ವರದಿಗಾರರು_ಶಿರಾಳಕೊಪ್ಪ.
ನವೀನ್ ಕುಮಾರ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರರು.
https://youtu.be/61OtTebaWCI?feature=shared
ಸಾಮಾನ್ಯ ಯುವಕ ತನ್ನ ಊರಿನ ಇತಿಹಾಸ ಓದಿ ಸ್ಥಳಿಯ ಮಾಹಿತಿ ಪಡೆದು ಅಲ್ಲಿನ ಸ್ಮಾರಕಗಳ ಸಂರಕ್ಷಣೆಗಾಗಿ ಮತ್ತು ಪುರಾತತ್ವ ಇಲಾಖೆಯ ಹೆಚ್ಚಿನ ಸಂಶೋದನೆ, ಉತ್ಕನನ ಆಗಲಿ ಎಂಬ ಆಶಾ ಬಾವನೆಯಿಂದ ಸ್ಥಳಿಯ ಸಮಾನ ಮನಸ್ಕ ಗೆಳೆಯರ ಜೊತೆ #ತಾಳಗುಂದ_ಉತ್ಸವ ಆಚರಿಸಿ ಅಲ್ಲಿನ ಸುದ್ದಿಗಳನ್ನು ರಾಜ್ಯದ ಪ್ರಜಾವಾಣಿ ಪತ್ರಿಕೆಗಳಲ್ಲಿ ಸರಣಿ ಲೇಖನವಾಗಿ ಬರೆದು ಆರ್ಕಾಲಾಜಿಕಲ್ ಸರ್ವೆ ಇಲಾಖೆಯಿಂದ ಉತ್ಕನನ ಮಾಡುವಂತೆ ಮಾಡಿದ್ದು ಸಾಮಾನ್ಯ ಕೆಲಸವಲ್ಲ.
ಇದರಿಂದ ಬಂದ ಪಲಿತಾಂಶ ಕನ್ನಡದ ಮೊದಲ ಶಾಸನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪದ ತಾಳಗುಂದ ಶಾಸನ ಎಂಬುದು ಜಗಜ್ಜಾಹೀರ ಆಯಿತು.
ಕದಂಬ ಸಾಮ್ರಾಜ್ಯ ಕಟ್ಟಿದ ಕನ್ನಡದ ರಾಜ ಈ ಭಾಗದ ಹವ್ಯಕ ಬ್ರಾಹ್ಮಣರ ರಾಜ ಮಯೂರ ವರ್ಮ ಕೇವಲ ರಾಜ್ಯಬಾರ ಮಾತ್ರ ಮಾಡಲಿಲ್ಲ ಇಲ್ಲಿ ನಾಲಂದ ವಿಶ್ವವಿದ್ಯಾಲಯಕ್ಕೆ ಸರಿಸಮನಾದ ಕದಂಬ ವಿಶ್ವವಿಧ್ಯಾಲಯ ಕೂಡ ಸ್ಥಾಪಿಸಿದ್ದ.
ನಾಲಂದ ವಿಶ್ವವಿದ್ಯಾಲಯ ನವೀಕರಣ ಮಾಡಿದ ರಾಜನ ಪತ್ನಿ ಕದಂಬರ ಪುತ್ರಿ ಹಾಗಾದರೆ ನಾಲಂದ ವಿಶ್ವವಿದ್ಯಾಲಯಕ್ಕೂ ಮತ್ತು ಕದಂಬ ವಿಶ್ವವಿದ್ಯಾಲಯಕ್ಕೆ ಸಂಬಂದ ಇತ್ತೆ?, ...
ಶಿಕಾರಿಪುರದ ಇತಿಹಾಸ ಉತ್ಕನನ ಮಾಡಿದರೆ ಇಡೀ ಭಾರತದ ಇತಿಹಾಸ ಅನಾವರಣ ಆಗಲಿದೆ ಎಂದು ಬರೆದ ಶಿಲಾಶಾಸನಗಳ ಪಿತಾಮಹಾ ಹಾಗೂ ಶಿಲಾಶಾಸನಗಳ ಅಶ್ವಿನಿ ದೇವತೇ ಎಂದೇ ಗೌರವಿಸಿ ಕರೆಯುವ ಮ್ಮೆಸೂರು ಸರ್ಕಾರದ ಪುರಾತತ್ವ ಇಲಾಖೆ ನಿರ್ದೇಶಕ #ಎಡ್ವರ್ಡ್_ಲೂಯಿಸ್_ರೈಸ್ ಅವರ ಮಾತು ಇತಿಹಾಸ ಸಂಶೋದಕರು ಗಮನಿಸಬೇಕು.
ನನ್ನ ಘೋಷಣೆ ಆಗಿರುವ "ಪ್ರತಿ ಊರಿಗೂ ಒಂದು ಇತಿಹಾಸ ಇದೆ ಆ ಊರುಗಳಲ್ಲಿ ಗುಡಿ ಗುಂಡಾರಗಳು - ಕೊಟೆ - ಕೊತ್ತಳಗಳು ಇರುತ್ತದೆ ಊರಲ್ಲಿ ಬಿದ್ದು ಮಣ್ಣಾಗಿರುವ, ಚರಂಡಿ ಕಲ್ಲಾಗಿರುವ ಬಟ್ಟೆ ತೊಳೆಯುವ ಕಲ್ಲಾಗಿರುವ ಶಿಲಾಶಾಸನಗಳು ಇರುತ್ತದೆ ಅದನ್ನು ಸ್ಥಳಿಯರೇ ಸಂರಕ್ಷಿಸಬೇಕು ಅದರ ಇತಿಹಾಸ ಓದಿ ಊರಿನ ಜನಪದದ ಮಾಹಿತಿ ಕೆದಕಿ ದಾಖಲಿಸಿ ಮುಂದಿನ ತಲೆಮಾರಿಗೆ ತಿಳಿಸಬೇಕು" ಎಂಬುದಕ್ಕೆ ಶಿರಾಳಕೊಪ್ಪದ ಪ್ರಜಾವಾಣಿ ದಿನ ಪತ್ರಿಕೆ ಯುವ ವರದಿಗಾರ ನವೀನ್ ಕುಮಾರ್ ಸಾದಕರಾಗಿ ನಮ್ಮೆದರು ಇದ್ದಾರೆ.
ಅವರನ್ನ ಬೇಟಿ ಮಾಡಬೇಕೆಂದಿದ್ದೆ ಆದರೆ ನಿನ್ನೆ ಅವರ ವೈಯಕ್ತಿಕ ಕೆಲಸದ ಮೇಲೆ ಆನಂದಪುರಂಗೆ ಬಂದಾಗ ನಮ್ಮಿಬ್ಬರ ಬೇಟಿ ಸಾಧ್ಯವಾಯಿತು.
ಅವರು 20 ವರ್ಷದ ಹಿಂದೆಯೇ ನನ್ನ ಬೇಟಿ ಮಾಡುವ ಅಭಿಲಾಷೆ ಹೊಂದಿದ್ದರಂತೆ ಮತ್ತು ನನ್ನ ಎಲ್ಲಾ ಲೇಖನಗಳ ಓದುವವರು ಎಂದು ತಿಳಿಸಿದಾಗ ಆಶ್ಚರ್ಯವಾಯಿತು.
ನಾನು ದಾಖಲಿಸಿದ ಅವರ ಯೂಟ್ಯೂಬ್ ಸಂದರ್ಶನದ ಕೆಲ ಕಂತುಗಳು ಇತಿಹಾಸ ಆಸಕ್ತರಿಗಾಗಿ ಪ್ರಕಟವಾಗಲಿದೆ.
ಶಿವಮೊಗ್ಗ ಜಿಲ್ಲೆಯ ಇಂತಹ ಎಲೆ ಮರೆಯ ಕಾಯಿಯಂತ ಇತಿಹಾಸ ಸಂಶೋದಕರಿಗೆ ಶಿವಮೊಗ್ಗ ಜಿಲ್ಲೆಯ ನಾಡು-ನುಡಿ-ಜಲದ ಬಗ್ಗೆ ಅಭಿಮಾನ ಹೊಂದಿದಂತವರು ಹೆಚ್ಚು ಹೆಚ್ಚು ಬೆಂಬಲಿಸಬೇಕೆಂದು ವಿನಂತಿಸುತ್ತೇನೆ.
Comments
Post a Comment