Blog number 2043. ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಅಷ್ಟೆಲ್ಲ ಬೆಳ್ಳಿ ಸಂಗ್ರಹಿಸಿದ್ದು ಹೇಗೆ? ಗೇರುಸೊಪ್ಪೆ ಹೆಸರು ಬರಲು ಕಾರಣ? ಡಿಜಿಟಲ್ ಮಾಧ್ಯಮದ ಸೀರಿಲ್ ನಲ್ಲಿ ನಮ್ಮ ತಾಲ್ಲೂಕಿನ ಸಂಶೋದಕ ಚೆನ್ನಬೈರಾದೇವಿ ವಂಶಸ್ಥರಾದ ಲೋಕರಾಜ್ ಜೈನರು ಸ್ವಾರಸ್ಯಕರವಾದ ಇತಿಹಾಸದ ಕಥೆ ವಿವರಿಸಿದ್ದಾರೆ.https://www.facebook.com/share/v/wCDTCNJxGnQF9CKj/?mibextid=qi2Omg
#ನಮ್ಮ_ಸಾಗರ_ತಾಲ್ಲೂಕಿನ_ಕಾನೂರು_ಕೋಟೆ_ಒಡತಿ
#ಗೇರುಸೊಪ್ಪೆಯ_ಜೈನ_ರಾಣಿ
#ರಾಣಿ_ಚೆನ್ನಾಬೈರಾದೇವಿ
#ಹದಿನಾರು_ದೇಶಗಳೊಂದಿಗೆ_ನೇರವಾಗಿ
#ಮುವತ್ತು_ದೇಶಗಳೊಡನೆ_ಪರೋಕ್ಷ_ಕಾಳುಮೆಣಸಿನ_ರಪ್ತು_ವ್ಯಾಪಾರ
#ಯುರೋಪಿನಿಂದ_ಬೆಳ್ಳಿ_ತಂದು_ಕಾಳುಮೆಣಸು_ವಿನಿಮಯ
#ಕಾಳುಮೆಣಸು_ಒಂದು_ಕಾಲದ_ಬಂಗಾರ .
ಗೇರು ಬೆಳೆ ಪೋರ್ಚುಗೀಸ್ ರಿಂದ ಭಾರತಕ್ಕೆ ಪರಿಚಯವಾಯಿತು ಅದಕ್ಕಿಂತ ಮೊದಲು ಭಾರತದ ಪಶ್ಚಿಮ ಘಟ್ಟದ ಗುಡ್ಡೇ ಗೇರು ಪ್ರಸಿದ್ಧಿ ಪಡೆದಿತ್ತು ಆ ಗುಡ್ಡೇ ಗೇರು ಸಮೃದ್ಧವಾಗಿದ್ದರಿಂದಲೇ ಈ ಪ್ರದೇಶಕ್ಕೆ #ಗೇರುಸೊಪ್ಪೆ ಎಂಬ ಹೆಸರಾಗಲು ಕಾರಣ.
ಶಿವಮೊಗ್ಗ ಜಿಲ್ಲೆಯ ಹೊಂಬುಜದಿಂದ ಬಂದ ಇಬ್ಬರು ಅಪ್ರತಿಮ ಸಾಹಸಿಗಳಿಂದ ಗೇರುಸೊಪ್ಪೆ ಸಾಮ್ರಾಜ್ಯವಾಯಿತು.
ಕಾಳುಮೆಣಸಿಗೆ ಬ್ರಾಂಡ್ ವ್ಯಾಲ್ಯೂ ತಂದು 16 ದೇಶಗಳಿಗೆ ನೇರವಾಗಿ ರಪ್ತು ಮಾಡಿದ ಪರೋಕ್ಷವಾಗಿ 30 ಕ್ಕೂ ಹೆಚ್ಚು ರಾಷ್ಟಗಳೊಂದಿಗೆ ಕಾಳು ಮೆಣಸು ವ್ಯವಹಾರ ಮಾಡಿದ ರಾಣಿ ಚೆನ್ನಬೈರಾದೇವಿ ಭಾರತದ ಮೊದಲ EXPORTER ಎನ್ನಬಹುದು.
ವೈಟ್ ಪೆಪ್ಪರ್ (ಬೋಳು ಮೆಣಸು) ಗೆ ಬೇಡಿಕೆ ಬಂದಾಗ ಗೇರುಸೊಪ್ಪೆಯ ಪ್ರದೇಶದಲ್ಲಿ ಕಾಳುಮೆಣಸು ನೀರಲ್ಲಿ ನೆನಸಿ ಸಂಸ್ಕರಣೆ ಮಾಡಲು ಸಾವಿರಾರು ಬಾವಿಗಳನ್ನು ನಿರ್ಮಿಸಿದ್ದರು ...
ಎಸ್.ಎಸ್.ಗೇರುಸೊಪ್ಪೆ ಎಂಬ ಬ್ರಿಟೀಶರ ಹಡಗು ಬೆಳ್ಳಿ ತುಂಬಿಕೊಂಡು ಹೋಗುವಾಗ ಜರ್ಮನ್ ದೇಶದ ಸಬ್ ಮೆರೀನ್ ಉಡಾಯಿಸಿದ ಕ್ಷಿಪಣಿಯಿಂದ ಮುಳುಗಿತು ಅದರಿಂದ ನೂರಾರು ಟನ್ ಬೆಳ್ಳಿಯ ಬಾರುಗಳನ್ನು ಸಮುದ್ರದ ನಿಧಿ ಶೋದಕ ಸಂಸ್ಥೆ ತೆಗೆದ ಸುದ್ದಿಯಿಂದ ಕಾಳುಮೆಣಸಿನ ರಾಣಿ ಅಷ್ಟೆಲ್ಲಾ ಬೆಳ್ಳಿಗಟ್ಟಿ ಪಡೆದಿದ್ದು ಎಲ್ಲಿಂದ ಅಂದರೆ...
ಯುರೋಪಿನ ಬೆಳ್ಳಿ ಪಡೆದು ಕಾಳು ಮೆಣಸು ವಿನಿಮಯ ಮಾಡುತ್ತಿದ್ದದ್ದೇ ಕಾರಣ.
ನಮ್ಮ ತಾಲ್ಲೂಕಿನ ಇತಿಹಾಸ ಸಂಶೋದಕ ಲೋಕರಾಜ ಜೈನರು #ಡಿಜಿಟಲ್_ಮಾಧ್ಯಮ ಕಂತು - ಕಂತುಗಳಾಗಿ ತೋರಿಸುತ್ತಿರುವ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಇತಿಹಾಸದಲ್ಲಿ ವಿವರಿಸಿದ್ದಾರೆ.
ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
Comments
Post a Comment